ಇದೇ ವರ್ಷ ದರ್ಶನ್ ರವರ 7 ಸಿನಿಮಾಗಳು ರೆಡಿ ಯಾವುವು ಗೊತ್ತಾ??

ಕನ್ನಡದ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷ ಯಾವುದೇ ಸಿನಿಮಾಗಳನ್ನು ರಿಲೀಸ್ ಮಾಡಿಲ್ಲ. ಇನ್ನೇನು ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿ ನಡೆದಿದೆ ಎನ್ನುವಷ್ಟರಲ್ಲಿ ದರ್ಶನ್ ರವರ ಕಾರಿಗೆ ಅಪಘಾತ ಉಂಟಾಗಿ ದರ್ಶನ್ ರವರು ಯಾವುದೇ ಸಿನಿಮಾ ಬಿಡುಗಡೆ ಮಾಡದಂತೆ ನಡೆದಿತ್ತು. ಇದರಿಂದ ಕರ್ನಾಟಕ ಚಿತ್ರರಂಗವೂ ಬಹಳ ನಷ್ಟವನ್ನು ಅನುಭವಿಸಿದ ಎಂದರೆ ಸುಳ್ಳಾಗಲಾರದು ಯಾಕೆಂದರೆ ಬಾಕ್ಸ್ ಆಫೀಸ್ ಸುಲ್ತಾನ್ ಹೆಸರು ಪಡೆದವರು ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಪ್ರಸಿದ್ಧರು. ಆದರೆ ಈ ವರ್ಷ ಕಳೆದ ವರ್ಷದಂತೆ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡುವುದಿಲ್ಲ ಯಾಕೆಂದರೆ ಈ ವರ್ಷ ಬರೋಬ್ಬರಿ ಏಳು ಸಿನಿಮಾಗಳು ಸೆಟ್ಟೇರಲಿದೆ ಹಾಗೂ ಕೆಲವೊಂದು ಸಿನಿಮಾಗಳು ಬಿಡುಗಡೆಯಾಗಲಿದೆ ಅವು ಯಾವುವು ಗೊತ್ತಾ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕುರುಕ್ಷೇತ್ರ – ಕನ್ನಡ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ಕರೆದು ವಂತಹ ಭರವಸೆಯನ್ನು ಮೂಡಿಸಿರುವ ದರ್ಶನ್ ರವರ ಕುರುಕ್ಷೇತ್ರ ಚಿತ್ರ ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಂತೂ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ ಯಾಕೆಂದರೆ ಮತ್ತೊಮ್ಮೆ ಈ ಚಿತ್ರದ ಮೂಲಕ ಕನ್ನಡಿಗರು ಮತ್ತೊಮ್ಮೆ ತಮ್ಮ ತಾಕತ್ತು ಏನೆಂಬುದನ್ನು ಇತರ ಚಿತ್ರರಂಗಗಳಲ್ಲಿ ತಿಳಿಸಿಕೊಡಲು ಸಿದ್ಧರಾಗಿದ್ದಾರೆ.

ಯಜಮಾನ – ಕನ್ನಡ ಹುಡುಗರ ದಬಾಸ್ ಹಾಗೂ ಕರ್ನಾಟಕದ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ರವರು ನಟಿಸಿರುವ ಈ ಚಿತ್ರವು ಭಾರಿ ನಿರೀಕ್ಷೆಯನ್ನು ಮೂಡಿಸಿದೆ. ಇತರ ಚಿತ್ರಗಳಿಗಿಂತ ಈ ಚಿತ್ರದ ಪೋಸ್ಟರ್ಗಳು ಬಹಳ ವಿಭಿನ್ನವಾಗಿವೆ ಹಾಗೂ ಪೋಸ್ಟರ್ ಗಳ ಮೂಲಕವೇ ಈಗಾಗಲೇ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು ಈ ಚಿತ್ರವು ಜೂನ್ ತದನಂತರ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ.

inspector ವಿಕ್ರಂ – ನಿಮಗೆಲ್ಲರಿಗೂ ತಿಳಿದಿರುವದರ್ಶನ್ ರವರು ಯಾವುದೇ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ಮುನ್ನ ಹಲವಾರು ಬಾರಿ ಯೋಚಿಸುತ್ತಾರೆ ಆದರೆ ಕಥೆ ಕೇಳಿದ ಒಮ್ಮೆಲೆ ಮೊದಲ ಬಾರಿಗೆ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಯೋಚಿಸದೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ದರ್ಶನ್ ಅವರು ಒಪ್ಪಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಲು ಯಾವ ಮಟ್ಟಿಗೆ ಅವರ ಪಾತ್ರ ಮುಖ್ಯವಾಗಿರುತ್ತದೆ ಎಂದು. ಈ ಚಿತ್ರವೂ ಸಹ ಇದೇ ವರ್ಷ ಬಿಡುಗಡೆಗೊಳ್ಳಲಿದೆ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಒಡೆಯ – ಹೆಚ್ಚು ಮಾಸ್ ಲುಕ್ ಅಲ್ಲಿ ಕಾಣಿಸಿಕೊಳ್ಳುವ ದರ್ಶನ್ ರವರು ಕ್ಲಾಸ್ ಲುಕಿ ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಸಾಕು ಈ ಚಿತ್ರವು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತದೆ ಎಂದು ಗಾಂಧಿನಗರದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಚಿತ್ರದ ಶೂಟಿಂಗ್ ನಡೆದಿದ್ದು ಉಳಿದ ಚಿತ್ರಗಳ ಬಿಡುಗಡೆ ನೋಡಿಕೊಂಡು ಡಿಸೆಂಬರ್ ತಿಂಗಳ ಕೊನೆಗೆ ಅಥವಾ ಜನವರಿ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

amar – ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊಟ್ಟ ಮೊದಲಬಾರಿಗೆ ಅಂಬರೀಶ್ ರವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಇನ್ನು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ದರ್ಶನ್ ರವರು ಸೋತು ಇಂಟರ್ವಲ್ ನಲ್ಲಿ ಏನು ತೋಚದೆ ಕುಳಿತಿರುವ ಹೀರೋಗೆ ಅಣ್ಣನಾಗಿ ಬಂದು ಗುರಿ ತಲುಪಿಸುವ ದಾರಿಯನ್ನು ಹೇಳಿ ಕೊಡುವ ಆಗರ್ಭ ಶ್ರೀಮಂತ ನಾಗಿ ಕಾಣಿಸಿಕೊಳ್ಳಲಿದ್ದಾರೆ.

ರಾಬರ್ಟ್ –ಹೆಸರು ರಾಬರ್ಟ್ ಆದರೆ ಇತ್ತೀಚೆಗೆ ತೆರೆಕಂಡ ಪೋಸ್ಟರ್ ನೋಡಿದರೆ ಹಲವಾರು ಗೊಂದಲಗಳನ್ನು ಉಂಟು ಮಾಡುತ್ತದೆ ಈಗಾಗಲೇ ತಲೆಗೆ ಹುಳ ಬಿಟ್ಟು ಕೊಂಡಿದ್ದಾರೆ ದರ್ಶನ್ ರವರ ಅಭಿಮಾನಿಗಳು ಯಾಕೆಂದರೆ ಹೆಸರಿಗೂ ಪೋಸ್ಟರ್ ಗೆ ಸಂಬಂಧವೇ ಇಲ್ಲ ಎಂಬಂತೆ ದರ್ಶನ್ ರವರು ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದರು. ಸಾಮಾನ್ಯವಾಗಿಯೇ ಆ ಪೋಸ್ಟರ್ ನಿಂದ ದರ್ಶನ್ ರವರ ಮೇಲಿದ್ದ ಭರವಸೆಗಳು ಇನ್ನೂ ಹೆಚ್ಚಾಗಿವೆ.

ಗಂಡುಗಲಿ ಮದಕರಿ ನಾಯಕ – ವೀರ ಗಂಡುಗಲಿ ಮದಕರಿ ನಾಯಕ ರವರ ಪಾತ್ರದಲ್ಲಿ ನಟಿಸಲಿರುವ ದರ್ಶನ್ ರವರ ಈ ಚಿತ್ರ ಖಂಡಿತವಾಗಿಯೂ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ ಹಲವಾರು ನಿರೀಕ್ಷೆಗಳನ್ನು ಉಂಟುಮಾಡಿದೆ ಹಾಗೂ ವೀರ ಮದಕರಿ ನಾಯಕನ ನೈಜ ಕಥೆಯನ್ನು ಹೊಂದಿರುವ ಈ ಚಿತ್ರವು ಇದೇ ವರ್ಷ ಸೆಟ್ಟೇರಲಿದೆ.

Image Credits: b4blaze

Post Author: Ravi Yadav