ಯಶ್ ಮಾಡಿದ ಆ ಒಂದು ಸಹಾಯಕ್ಕೆ ಕೈ ಮುಗಿದು ಕಣ್ಣೀರಿಟ್ಟ ಸತ್ತ ಅಭಿಮಾನಿಯ ಬಡ ಕುಟುಂಬ

ಹುಟ್ಟು ಹಬ್ಬದ ದಿನ ಯಾರು ಖುಷಿ ಇಂದ ಇರೋದಿಲ್ಲ ಹೇಳಿ! ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಅಂಬರೀಷ್ ಅವರ ನಿಧನದ ಕಾರಣದಿಂದ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹುಟ್ಟು ಹಬ್ಬದ 1 ದಿನ ಹಿಂದೆ ಹೇಳಿದ್ದರು. ಆದರೂ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದ ದಿನ ಅದೆಷ್ಟೋ ಸಾವಿರ ಜನ ಯಶ್ ಅವರ ಮನೆ ಮುಂದೆ ಬಂದಿದ್ದರು. ಆದರೆ ಯಶ್ ಅವರು ಮನೆಯಲಿ ಇರಲಿಲ್ಲ ಹಾಗು ಅವರ ಫೋನ್ ಅನ್ನು ಕೂಡ ಆಫ್ ಮಾಡಿಕೊಂಡಿದ್ದರು. ಇದ್ದಕಿದ್ದ ಹಾಗೆ ಯಶ್ ಅವರ ಹುಚ್ಚು ಅಭಿಮಾನಿ ತನ್ನ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಅಂಟಿಸಿ ಆತ್ಮ ಹತ್ಯೆ ಮಾಡಿಕೊಳ್ಳಲು ಯತ್ನಸಿದ, ಯಶ್ ಹುಟ್ಟು ಹಬ್ಬದ ಮರುದಿನವೇ ಈತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದು ಯಶ್ ಅವರಿಗೆ ಬಹಳ ದುಃಖ ವನ್ನು ತಂದು ಕೊಟ್ಟಿದೆ.

ನೆನ್ನೆ ಅಷ್ಟೇ ಯಶ್ ಅವರು ಮಾಧ್ಯಮ ದವರ ಜೊತೆ ಇದರ ಬಗ್ಗೆ ಮಾತಾಡುವಾಗ “ಈತರ ಮಾಡುವವರು ನನ್ನ ಅಭಿಮಾನಿಗಳೇ ಅಲ್ಲ, ದಯವಿಟ್ಟು ಇಂತಹ ಕೆಲಸವನ್ನು ಮಾಡಬೇಡಿ, ನಿಮ್ಮ ತಂದೆ ತಾಯಿ ಯನ್ನು ಚನ್ನಾಗಿ ನೋಡಿಕೊಳ್ಳಿ, ನಿಮ್ಮ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಿ” ಅದೇ ನನಗೆ ಕೊಡುವ ಗೌರವ ಎಂದು ಹೇಳಿದ್ದರು. ಆದರೆ ಇಂದು ಆ ಅಭಿಮಾನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದರಿಂದ ಬಹಳ ಬೇಸರ ಗೊಂಡ ರಾಕಿಂಗ್ ಸ್ಟಾರ್ ಯಶ್ ಅವರು, ಮಾಡಿದ್ದಾದರೂ ಏನು ಗೊತ್ತ?

ರಾಕಿಂಗ್ ಸ್ಟಾರ್ ಯಶ್ ಆ ಅಭಿಮಾನಿಯೇ ತಂದೆ ತಾಯಿಯ ಮನೆಗೆ ಹೋಗಿ, ಅವರಿಗೆ ಆರ್ಥಿಕವಾಗಿ ನೆರವು ಕೊಟ್ಟಿದ್ದಾರೆ. ಬಲ್ಲ ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ರವಿ ಅವರ ಕುಟುಂಬಕ್ಕೆ 5 ಲಕ್ಷ ಹಣವನ್ನು ಕೊಟ್ಟಿದ್ದಾರೆ. ಇದಲ್ಲದೆ ಅವರಿಗೆ ಏನೇ ಸಹಾಯ ಬೇಕಾದ್ರು ಬರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಆ ಅಭಿಮಾನಿಯೇ ಕುಟುಂಬದವರಿಗೆ ಸಮಾಧಾನ ಮಾಡಿ, ನಿಮಗೆ ಎಂಥಹ ಸಹಾಯ ಬೇಕಂದ್ರೂ ನಾನು ಮಾಡುತ್ತೇನೆ ಎಂದು ಹೇಳಿ ಕಣ್ಣೀರಿಟ್ಟು ಅಲ್ಲಿಂದ ವಾಪಾಸ್ ಬಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್! ಸ್ನೇಹಿತರೆ, ಒಂದು ವಿಷ್ಯ ಮನಸಿನಲ್ಲಿ ಇಟ್ಟುಕೊಳ್ಳಿ, ನಟರ ಮೇಲೆ ಅಭಿಮಾನ ಇರಲಿ, ಆದರೆ ಈರೀತಿ ಮಾತ್ರ ದಯವಿಟ್ಟು ಮಾಡಬೇಡಿ. ನಿಮ್ಮನ್ನು ಹೆತ್ತು , ಹೊತ್ತು ಸಾಕಿದ ಅಪ್ಪ ಅಮ್ಮ ನನ್ನ ಚನ್ನಾಗಿ ನೋಡಿ ಕೊಳ್ಳಿ, ನಿಮ್ಮ ಜೀವನವನ್ನು ಚನ್ನಾಗಿ ರೂಪಿಸಿಕೊಳ್ಳಿ, ಕಷ್ಟಪಟ್ಟು ಕೆಲಸ ಮಾಡಿ, ಜೀವನದಲ್ಲಿ ಮುಂದೆ ಬನ್ನಿ! ಅಭಿಮಾನ ಇರಲಿ ಆದರೆ ಹುಚ್ಚು ಅಭಿಮಾನಿಗಳಾಗಬೇಡಿ.

ಈ ಸುದ್ದಿ ಇಷ್ಟ ಆದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Complete Credits: b4blaze

Post Author: Ravi Yadav