ತಂದೆ ಮಗಳನ್ನು ಯಾಕೆ ಹೆಚ್ಚು ಪ್ರೀತಿಸುತ್ತಾನೆ ಗೊತ್ತಾ? ಇಲ್ಲಿದೆ ನೋಡಿ ಸಾಕ್ಷಿ

ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಗಳು ರಾಣಿಯಂತೆ ಬೆಳೆದಿರುತ್ತಾರೆ. ಅವರ ತಂದೆ ಹೆಗಲ ಮೇಲೆ ಕೂರಿಸಿಕೊಂಡು ಬೆಳೆಸಿರುತ್ತಾರೆ ಮತ್ತು ಸದಾ ಹೆಣ್ಣು ಮಗಳ ಬೆಂಬಲಕ್ಕೆ ನಿಲ್ಲುವ ತಂದೆ ಎಲ್ಲಿಯೂ ತಪ್ಪಾಗದಂತೆ ಮಗಳನ್ನು ಮುದ್ದಿನಿಂದ ಬೆಳೆಸಿರುತ್ತಾರೆ. ಮಗನಿಗಿಂತ ಹೆಚ್ಚಾಗಿ ತಂದೆ ಮಗಳಿಗೆ ಸಪೋರ್ಟ್ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅದಕ್ಕೆ ಕಾರಣವೇನು ಗೊತ್ತಾ??

(ಸಾಂದರ್ಭಿಕ ಚಿತ್ರ ಹಾಗೂ ಕಥೆ)

ಒಂದು ಕುಟುಂಬದಲ್ಲಿ ಈಗಾಗಲೇ ಮೂರು ಗಂಡು ಮಕ್ಕಳು ಜನಿಸಿರುತ್ತಾರೆ, ಆದರೆ ನಾಲ್ಕನೇ ಮಗುವಾಗಿ ಹೆಣ್ಣು ಮಗುವೊಂದು ಜನಿಸುತ್ತದೆ ಇದರಿಂದ ಖುಷಿಗೊಂಡ ತಂದೆ ಇಡೀ ಊರಿನ ಮಿತ್ರರನ್ನು ಕರೆದು ಔತಣ ಕೂಟವನ್ನು ಏರ್ಪಡಿಸುತ್ತಾನೆ. ಗಂಡನ ಈ ನಡೆಯಿಂದ ಸಾಮಾನ್ಯವಾಗಿ ಹೆಂಡತಿಗೆ ಒಂದು ಅನುಮಾನ ಬರುತ್ತದೆ.

ಆ ಅನುಮಾನವನ್ನು ಬಗೆಹರಿಸಿಕೊಳ್ಳಲು ಹೆಂಡತಿ ಬಂದು ಗಂಡನ ಬಳಿ ಈಗಾಗಲೇ ನಮಗೆ ಮೂರು ಗಂಡು ಮಕ್ಕಳು ಆಗಿದ್ದಾರೆ. ಆದರೆ ಯಾವ ದಿನವೂ ಸಹ ನೀವು ಈ ರೀತಿ ಔತಣ ಕೂಟ ಏರ್ಪಡಿಸಿರಲಿಲ್ಲ, ಆದರೆ ಈ ಬಾರಿ ಹೆಣ್ಣು ಮಗು ಜನಿಸಿದ ತಕ್ಷಣ  ಔತಣ ಕೂಟ ಏರ್ಪಡಿಸಿದ್ದಿರಲ್ಲ ಇದಕ್ಕೆ ಕಾರಣವೇನೆಂದು ಕೇಳಿದಾಗ ಗಂಡನ ಉತ್ತರ ಹೀಗಿತ್ತು !

ನಿನಗೆ ನೆನಪಿದೆಯಾ ಕೆಲವು ವರ್ಷಗಳ ಹಿಂದೆ ನಾನು ನೀನು ಇಬ್ಬರು ಸೇರಿ ಒಂದು ಪಂದ್ಯವನ್ನು ಹಾಕಿಕೊಂಡಿದ್ದೆವು, ಅದು ಏನೆಂದರೆ ಯಾರೇ ಬಂದು ಬಾಗಿಲು ತಟ್ಟಿದರು ನಾವು ತೆಗೆಯಬಾರದು ಒಂದು ವೇಳೆ ಮೊದಲು ಬಾಗಿಲು ತೆಗೆದರೆ ಅವರು ಸೋತಂತೆ ಎಂಬ ಪಂದ್ಯ ನೆನಪಿದೆಯೇ ಎಂದು ಪ್ರಶ್ನಿಸುತ್ತಾನೆ ಅದಕ್ಕೆ ಹೆಂಡತಿಯು ಸಹ ಹೌದು ಎನ್ನುತ್ತಾಳೆ.

ಇದರ ಬಗ್ಗೆ ಮಾತನಾಡಿದ ಗಂಡ ಮೊದಲು ನನ್ನ ಅಪ್ಪ ಅಮ್ಮ ಬಂದು ಬಾಗಿಲು ತಟ್ಟಿದರು ಆದರೆ ನಾನು ಪಂದ್ಯವನ್ನು ಸೋಲುತ್ತೇನೆ ಎಂಬ ಭಯದಿಂದ ಬಾಗಿಲು ತೆರೆಯಲಿಲ್ಲ ಆದರೆ ತದನಂತರ ನಿಮ್ಮ ಅಪ್ಪ ಅಮ್ಮ ಬಂದು ಬಾಗಿಲು ತಟ್ಟಿದರು ತಕ್ಷಣವೇ ನೀನು ಕಣ್ಣಲ್ಲಿ ನೀರನ್ನು ತುಂಬಿಸಿ ಕೊಂಡು ಹೋಗಿ ಬಾಗಿಲು ತೆಗೆದೆ ನೀನು ಪಂದ್ಯದ ಬಗ್ಗೆ ಯೋಚನೆ ಮಾಡಿರಲಿಲ್ಲ.

ಈ ಘಟನೆಯನ್ನು ನೆನೆದು ಗಂಡ ಹೇಳಿದ ನಾಳೆ ದಿನ ನಾವು ಬಾಗಿಲನ್ನು ತಟ್ಟಿದಾಗ ನನ್ನ ಮೂರು ಗಂಡು ಮಕ್ಕಳು ಬಾಗಿಲನ್ನು ತೆರೆಯದೇ ಇದ್ದರೆ ನನ್ನ ಮಗಳು ಬಂದು ತೆರೆಯುತ್ತಾಳೆ ಅದಕ್ಕಾಗಿ ಇಷ್ಟು ಖುಷಿಯಿಂದ ಅವರ ಔತಣ ಕೂಟವನ್ನು ಏರ್ಪಡಿಸಿದ್ದೇವೆ ಎಂದು ಉತ್ತರಿಸಿದ. ಗಂಡನ ಉತ್ತರ ಕೇಳಿ ಹೆಂಡತಿಯ ಕಣ್ಣಲ್ಲಿ ನೀರು ತುಂಬಿಕೊಂಡವು.

– ರಮ್ಯ

Comments (0)
Add Comment