ಸರಿಗಮಪ ಹನುಮಂತನಿಗೆ ಬಂಪರ್ ಆಫರ್: ಅದೃಷ್ಟದ ಬಾಗಿಲು ತೆರೆಯಿತು

ಇಡೀ ರಾಜ್ಯದಲ್ಲಿ ಕೆಲವೇ ಕೆಲವು ದಿನಗಳ ಹಿಂದೆ ಆರಂಭವಾದ ಸರಿಗಮಪ ಸೀಸನ್ ನಲ್ಲಿ ಮನೆ ಮನೆಯಲ್ಲೂ ಕೇಳಿಬರುತ್ತಿದ್ದ ಹೆಸರು ಹನುಮಂತಪ್ಪ ಎಂಬ ಕುರಿ ಕಾಯುವ ಹುಡುಗನ ಹೆಸರು.

ತಾನು ಕುರಿ ಕಾಯುತ್ತಿದ್ದರೂ ತನ್ನ ಕಂಠದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿದ್ದ ಹನುಮಂತಪ್ಪನವರು ಮನಸ್ಸಿನಲ್ಲಿ ಸಹ ಅಷ್ಟೇ ಮುಗ್ಧರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋನಲ್ಲಿ ಹನುಮಂತ ವೀಕ್ಷಕರ ಮೆಚ್ಚಿನ ಸ್ಪರ್ಧಿ ಯಾಗಿದ್ದರು.

ತನ್ನ ಕುಟುಂಬ ಬಡತನದಲ್ಲಿ ಇದ್ದರೂ ಸಂಗೀತಕ್ಕೆ ಅವಕಾಶ ನೀಡಿರುವ ಹನುಮಂತಪ್ಪ ನವರಿಗೆ ತಕ್ಕ ಪ್ರತಿಫಲ ದೊರೆತಿದೆ. ಕಳೆದ ವಾರ ಸರಿಗಮಪ ಕಾರ್ಯಕ್ರಮಕ್ಕೆ ಚಿತ್ರ ನಿರ್ದೇಶಕ ಹಾಗೂ ಸಾಹಿತಿ ಯೋಗರಾಜ್ ಭಟ್ರವರು, ಚಿತ್ರ ಸಾಹಿತಿಗಳಾದ ಜಯಂತ್ ಕಾಯ್ಕಿಣಿ ಹಾಗೂ ವಿ ನಾಗೇಂದ್ರ ಪ್ರಸಾದ್ ರವರು ಅತಿಥಿಯಾಗಿ ಆಗಮಿಸಿದ್ದರು.

ನಿರ್ದೇಶಕ ಯೋಗರಾಜ್ ಭಟ್ ರವರು ಹಾಗೂ ಹನುಮಂತನ ಪನ್ ಅವರು ಸಹ ಒಂದೇ ಜಿಲ್ಲೆಯವರಾಗಿದ್ದು ಸರಿಗಮಪ ವೇದಿಕೆಯಲ್ಲಿ ಹನುಮಂತಪ್ಪನವರ ಹಾಡನ್ನು ಕೇಳಿದ ಯೋಗರಾಜ್ ಭಟ್ ರವರು ಮೆಚ್ಚಿಕೊಂಡು ತಮ್ಮ ಮುಂದಿನ ಚಿತ್ರದಲ್ಲಿ ಹನುಮಂತಪ್ಪನವರಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.

ಹೊಸ ವರ್ಷದ ಆರಂಭದಲ್ಲಿಯೇ ಹನುಮಂತನ ಪ್ಪನವರಿಗೆ ಭರ್ಜರಿ ಆಫರ್ ದೊರಕಿದ್ದು ಸರಿಗಮಪ ವೇದಿಕೆಯಲ್ಲಿ ಹಾಡುವ ಸಮಯದಲ್ಲಿ ಹಿನ್ನೆಲೆ ಗಾಯಕರು ಅವಕಾಶ ಸಿಕ್ಕಿರುವ ಕೆಲವೇ ಕೆಲವು ಸ್ಪರ್ಧಿಗಳ ಸಾಲಿನಲ್ಲಿ ಹನುಮಂತಪ್ಪನವರು ಸಹ ಈಗ ಸೇರಿಕೊಂಡಿದ್ದಾರೆ

Post Author: Ravi Yadav