ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಲು ಸಿದ್ದರಾದರೆ ಡಿ ಕೆ ಶಿ !!

ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಲು ಸಿದ್ದರಾದರೆ ಡಿ ಕೆ ಶಿ !!

0

ರಾಜ್ಯ ರಾಜಕಾರಣದಲ್ಲಿ ಬಹುಮತ ಪಡೆಯಲು ವಿಫಲವಾದ ಎರಡು ಪಕ್ಷಗಳು ಮೈತ್ರಿ ಸರ್ಕಾರ ರಚಿಸಿಕೊಂಡು ಆಡಳಿತ ಮಾಡುತ್ತಿದ್ದಾರೆ, ಆದರೆ ಹೆಚ್ಚು ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ಪಕ್ಷವು ಬಿ ಜೆ ಪಿ ಸರ್ಕಾರವನ್ನು ತಡೆಯಲು ಕೇವಲ ಕೆಲವೇ ಕೆಲವು ಸೀಟುಗಳನ್ನು ಪಡೆದ ಜೆ ಡಿ ಸ್ ಪಕ್ಷಕ್ಕೆ ಅಧಿಕಾರ ಬಿಟ್ಟಿಕೊಟ್ಟು ಸುಮ್ಮನಾದರು.

[do_widget id=et_ads-16]

ಸಾಮಾನ್ಯವಾಗಿಯೇ ಇದು ಹಲವು ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಹೊಗೆಯನ್ನು ಉಂಟು ಮಾಡಿತ್ತು. ಇತ್ತಕಡೆ ಜೆ ಡಿ ಸ್ ನಾಯಕರಿಗೆ ಅಧಿಕಾರ ಸಿಕ್ಕಿದಕ್ಕೆ ಬಹಳ ಸಂತೋಷವಾಗಿದ್ದರು. ಆದರೆ ಈ ಎಲ್ಲ  ವಿದ್ಯಮಾನಗಳು ಕೊನೆಗೊಳ್ಳುವ ಅಂದರೆ ಕುಮಾರಸ್ವಾಮಿ ರವರ ಅಧಿಕಾರ ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

[do_widget id=et_ads-17]

ಯಾಕೆಂದರೆ ಕುಮಾರಸ್ವಾಮಿ ರವರ ಅಧಿಕಾರದ ಭವಿಷ್ಯ ರಾಮನಗರದ ಉಪ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅವಲಂಬಿತವಾಗಿದೆ.  ಒಂದು ವೇಳೆ ಅನಿತಾ ಕುಮಾರಸ್ವಾಮಿ ರವರು ಸೋತರೆ ತನ್ನ ಸ್ವಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಕುಮಾರ ಸ್ವಾಮಿ ರವರ ಪದಚ್ಯುತಿ ಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಜೆ ಡಿ ಸ್ ಪಕ್ಷವು ಮರು ಚುನಾವಣೆಗೆ ಹೋಗುವುದಿಲ್ಲ ಯಾಕೆಂದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಜೆಡಿಎಸ್ ಪಕ್ಷವು ತನ್ನ ವರ್ಚಸ್ಸನ್ನು ಕೊಂಚ ಕಡಿಮೆ ಮಾಡಿಕೊಂಡಂತೆ ಕಾಣುತ್ತಿದೆ.

[do_widget id=et_ads-18]

ಆದ ಕಾರಣದಿಂದ ಕಾಂಗ್ರೆಸ್ ಜೊತೆ ತನ್ನ ಮೈತ್ರಿಯನ್ನು ಮುಂದುವರಿಸಿಕೊಂಡು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಲಿದ್ದಾರೆ, ಇದರಿಂದ ಸಾಮಾನ್ಯವಾಗಿ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿಬರಲಿದೆ ಯಾಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ದೇವೇಗೌಡರ ಬೆಂಬಲವನ್ನು ಪಡೆದಿರುವ ಏಕೈಕ ನಾಯಕನೆಂದರೆ ಡಿಕೆ ಶಿವಕುಮಾರ್.

[do_widget id=et_ads-19]

ಇದೇ ಕಾರಣದಿಂದ ಒಂದು ವೇಳೆ ಡಿಕೆ ಶಿವಕುಮಾರ್ ಅವರು ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ  ಸೋಲಿಸಿದ್ದಲ್ಲಿ  ಆಶ್ಚರ್ಯವೇನೂ  ಇಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

[do_widget id=et_ads-20]