ಜಮ್ಮು- ಕಾಶ್ಮೀರ: 4 ಜಿಲ್ಲೆಗಳಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಬಿಜೆಪಿ

ನರೇಂದ್ರ ಮೋದಿ ಅವರು ಮತ್ತು ಬಿಜೆಪಿ ಹೈಕಮಾಂಡ್ ನಿಂದ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಸರ್ಕಾರ ಬೀಳಿಸಿದ್ದ ಬಿಜೆಪಿ ಸರ್ಕಾರಕ್ಕೆ ತನ್ನ ನಿರ್ಧಾರ ಸರಿ ಎಂಬುದನ್ನು ಜನ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

[do_widget id=et_ads-3]

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಚುನಾವಣೆಗೆ ಮುಂಚೆಯೇ 60 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಬೀಗಿದ್ದ ಬಿಜೆಪಿ ಪಕ್ಷಕ್ಕೆ ಇಂದಿನ ಚುನಾವಣಾ ಫಲಿತಾಂಶ ಬಾರಿ ಮುಖ್ಯ ವಾಗಲಿದೆ, ಯಾಕೆಂದರೆ ಮೈತ್ರಿ ಸರ್ಕಾರ ದಿಂದ ಹೊರ ಬಂದು ಚುನಾವಣೆ ಎದುರಿಸಲು ಸಿದ್ಧ ಸಿದ್ಧವಾಗಿದ್ದ ಬಿಜೆಪಿ ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮಹತ್ವವನ್ನು ಪಡೆದುಕೊಂಡಿದೆ.

[do_widget id=et_ads-4]

ಈಗಾಗಲೇ ಚುನಾವಣಾ ಫಲಿತಾಂಶ ಮತ ಎಣಿಕೆ ಆರಂಭವಾಗಿದ್ದು ಬಿಜೆಪಿ ಪಕ್ಷವು ಮತ ಎಣಿಕೆ ಶುರುವಾದ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ ನಾಲ್ಕು ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕ್ಲೀನ್ ಸ್ವೀಪ್ ಮಾಡಿ ಎಲ್ಲಾ ಕ್ಷೇತ್ರಗಳನ್ನು ಗೆದ್ದು ಬೀಗಿದೆ. ಇದರಿಂದ ಮತ್ತೊಮ್ಮೆ ಮೋದಿ ಅವರ ಅಲೆ ಇದೆ ಎಂಬುದು ಸಾಬೀತಾಗಿದೆ ಅಷ್ಟೇ ಅಲ್ಲದೆ ಸರ್ಕಾರ ಬೀಳಿಸಿದ್ದು ಜನವಿರೋಧಿ ನಿರ್ಧಾರ ಎಂದು ಆರೋಪಿಸುತ್ತಿದ್ದ ವಿರೋಧಿ ಪಕ್ಷಗಳಿಗೆ ಚುನಾವಣಾ ಫಲಿತಾಂಶದ ಮೂಲಕ ಉತ್ತರ ನೀಡಲು ಹೊರಟಿದೆ.

[do_widget id=et_ads-5]

ಈ ಫಲಿತಾಂಶ ನೋಡಿ ಬೆಚ್ಚಿ ಬಿದ್ದಿರುವ ವಿರೋಧ ಪಕ್ಷಗಳು ಕೆಲವು ಕ್ಷೇತ್ರಗಳನ್ನು ಆದರೂ ವಶಕ್ಕೆ ಪಡೆಯಬೇಕು ಎಂದು ದೇವರಲ್ಲಿ ಮೊರೆ ಹೋಗಿದ್ದಾರೆ. ಇನ್ನೂ ಹಲವು ಕ್ಷೇತ್ರಗಳ ಮತ ಎಣಿಕೆ ಬಾಕಿ ಇದ್ದು ಮುಂದಿನ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.

[do_widget id=et_ads-6]

Post Author: Ravi Yadav