ಶುರುವಾಗಲಿದೆಯೇ ಮತ್ತೊಂದು ಯುದ್ಧ? ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕುತ್ತು..!

ಬೆಳಗಾವಿ,ಅ.17- ದೇವರಲ್ಲಿ ಬೇಡಿಕೊಂಡ ಆಸೆ ಈಡೇರುವವರೆಗೆ ಸಂಪುಟ ಸಭೆಗೆ ಹೋಗಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಇದೀಗ ಸಂಕಷ್ಟ ಎದುರಾದಂತಿದೆ. ಸಂಪುಟ ಸಭೆಗೆ ಸತತ ಐದು ಬಾರಿ ಗೈರು ಹಾಜರಾಗಿರುವುದು ಇದೀಗ ಅವರಿಗೇ ಕಂಟಕವಾಗಿದೆ. ಈ ಬಗ್ಗೆ ಸ್ವತಃ ಅವರು ಐದು ಸಭೆಗೆ ಗೈರಾಗಿದ್ದು, ದೇವರಲ್ಲಿ ಬೇಡಿಕೊಂಡ ಆಸೆ ಈಡೇರುವವರೆಗೆ ಸಂಪುಟ ಸಭೆಗೆ ಹೋಗಲ್ಲ ಎಂದು ಬಹಿರಂಗವಾಗಿ ಹೇಳಿದ್ದರು.

[do_widget id=et_ads-2]

ಹೇಳಿದಂತೆ ಸತತ ಸಂಪುಟ ಸಭೆಗೆ ಗೈರಾಗಿ, ವಿಧಾನಸಭೆ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್, ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಆಗ್ರಹಿಸಿದ್ದರು.

[do_widget id=et_ads-3]

ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಕಾರ್ಯದರ್ಶಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ ಸಚಿವರ ವಿರುದ್ಧ ಆರೋಪದ ಬಗ್ಗೆ ಕಾನೂನು ರೀತಿ ಪರಿಶೀಲನೆ ನಡೆಸಿ, ಸಂಪುಟದಿಂದ ವಜಾಗೊಳಿಸುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

[do_widget id=et_ads-4]

ಒಂದು ವೇಳೆ ರಮೇಶ ಜಾರಕಿಹೊಳಿ ರವರನ್ನು ಸಚಿವ ಸ್ಥಾನದಿಂದ ಬಲವಂತವಾಗಿ ರಾಜೀನಾಮೆ ನೀಡಿಸಿದ್ದಲ್ಲಿ, ಜಾರಕಿಹೊಳಿ ಸಹೋದರರು ಮತ್ತೊಮ್ಮೆ ಬಂಡಾಯ ಏಳುವ ಸಾಧ್ಯತೆಗಳು ಹೆಚ್ಚಾಗಿವೆ.  ಒಟ್ಟಿನಲ್ಲಿ ಜಾರಕಿಹೊಳಿ ಸಹೋದರರು ಹೇಗಾದರೂ ಮೈತ್ರಿ ಸರ್ಕಾರಕ್ಕೆ ಕಂಟಕವಾಗುವ ರೀತಿಯೇ ಕಾಣುತ್ತಿದ್ದಾರೆ.

[do_widget id=et_ads-5]

Post Author: Ravi Yadav