ರಾಣಿ- ಮಾಧ ಸಿಕ್ಕಿ ಬೀಳೋದೇ ಬಾಕಿ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಧಾ ರಮಣ’ ಧಾರಾವಾಹಿಯಲ್ಲಿ ಇನ್ನಾದರೂ ದೊಡ್ಡ ತಿರುವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ವೀಕ್ಷಕರು. ಗಂಟು ಮೂಟೆ ಕಟ್ಟಿಕೊಂಡು ಮಾದನ ಜೊತೆಗೆ ಪರಾರಿ ಆಗಲು ಮುಂದಾಗಿದ್ದ ರಾಣಿ ಇದೀಗ ಸಿತಾರ ದೇವಿ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾಳೆ. ರಮಣ್ ಮನೆಯಲ್ಲೇ ಇದ್ದುಕೊಂಡು, ಎಲ್ಲರ ಮನಸ್ಸು ಗೆದ್ದು, ಆಸ್ತಿ ಪಡೆದು, ಸಿತಾರ ದೇವಿಗೆ ಬುದ್ಧಿ ಕಲಿಸಲು ರಾಣಿ ಸಜ್ಜಾಗಿದ್ದಾಳೆ.

[do_widget id=et_ads-2]

ಅತ್ತ ಹಲ್ಲು ಕಿತ್ತ ಹಾವಿನಂತೆ ಸಿತಾರ ದೇವಿ ಬರೀ ಬುಸುಗುಡುತ್ತಿದ್ದಾರೆ ಅಷ್ಟೇ. ರಾಣಿಗೆ ಬಿಸಿ ಮುಟ್ಟಿಸಲಾಗದೆ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿತಾರ ದೇವಿ ಇದ್ದಾರೆ. ಸದ್ಯ ರಾಣಿ ಹಾಗೂ ಮಾದನಿಗೇ ಸಿತಾರ ದೇವಿ ಬಾಡಿಗಾರ್ಡ್ ಆಗಿದ್ದಾರೆ. ಹೀಗಿರುವಾಗಲೇ, ರಾಣಿ-ಮಾದ ಇರುವ ಜಾಗಕ್ಕೆ ರಾಧಾ-ರಮಣ್ ಬಂದಿದ್ದಾರೆ. ರಾಧಾ-ರಮಣ್ ಮುಂದೆ ರಾಣಿ-ಮಾದ ಸಿಕ್ಕಿ ಬೀಳ್ತಾರಾ.? ಮುಂದೆ ಓದಿರಿ…

[do_widget id=et_ads-3]

ಮಾದನನ್ನ ಮೀಟ್ ಮಾಡಲು ಬಂದ ರಾಣಿ

”ಅತ್ತೆ ಸಿತಾರ ದೇವಿ ಜೊತೆಗೆ ಶಾಪಿಂಗ್ ಮಾಡುವೆ” ಮನೆಯಲ್ಲಿ ಸುಳ್ಳು ಹೇಳಿ, ಸಿತಾರ ದೇವಿಯನ್ನ ಕರ್ಕೊಂಡು ಮಾದನನ್ನ ಭೇಟಿ ಮಾಡಲು ಬಂದಿದ್ದಾಳೆ ರಾಣಿ. ಮಾದ ಹಾಗೂ ರಾಣಿ ಊಟಕ್ಕೆ ಅಂತ ಫೈವ್ ಸ್ಟಾರ್ ಹೋಟೆಲ್ ಗೆ ಬಂದಿದ್ದಾರೆ. ಇಬ್ಬರಿಗೂ ಬಾಡಿಗಾರ್ಡ್ ಆಗಿ ಸಿತಾರ ದೇವಿ ಇದ್ದಾರೆ.
ರಾಧಾ-ರಮಣ್ ಅಲ್ಲೇ ಬಂದ್ರಲ್ಲ.! ಅತ್ತ ”ಪತ್ನಿ ರಾಧಾಳನ್ನ ಹೊರಗೆ ಕರ್ಕೊಂಡು ಹೋಗುವೆ” ಎಂದು ಅದೇ ಫೈವ್ ಸ್ಟಾರ್ ಹೋಟೆಲ್ ಗೆ ರಮಣ್ ಹಾಗೂ ರಾಧಾ ಬಂದಿದ್ದಾರೆ. ಇನ್ನೇನು ರಾಣಿ ಹಾಗೂ ಮಾದನನ್ನ ರಾಧಾ ಹಾಗೂ ರಮಣ್ ನೋಡಬೇಕು. ಅಷ್ಟರಲ್ಲಿ ಸಂಚಿಕೆ ಮುಗಿದಿದೆ.

[do_widget id=et_ads-4]

ರಾಣಿ-ಮಾದ ಸಿಕ್ಕಿ ಬೀಳ್ತಾರಾ.?

ರಾಧಾ ರಮಣ್ ಮುಂದೆ ರಾಣಿ-ಮಾದ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾರಾ.? ಅಥವಾ ಇಲ್ಲೂ ಏನಾದರು ಒಂದು ಟ್ವಿಸ್ಟ್ ಇಟ್ಟು ನಿರ್ದೇಶಕರು ವೀಕ್ಷಕರ ತಾಳ್ಮೆಯನ್ನ ಪರೀಕ್ಷಿಸುತ್ತಾರಾ.? ನೋಡಬೇಕು.

[do_widget id=et_ads-5]

ಅತ್ತ ದಿನಕರ್ ಕೈಗೆ ಸಿಕ್ಕಿ ಬಿದ್ದ ದೀಪಿಕಾ ರಾಧಾ-ರಮಣ್ ಡೇಟ್ ಗೆ ಹೋಗುವುದನ್ನ ತಪ್ಪಿಸಲು ದೀಪಿಕಾ ಮಾಡಿದ್ದ ಪ್ಲಾನ್ ದಿನಕರ್ ಗೆ ಗೊತ್ತಾಗಿದೆ. ದಿನಕರ್ ಮುಂದೆ ದೀಪಿಕಾ ಸಿಕ್ಕಿಬಿದ್ದಿದ್ದಾಳೆ. ಸತ್ಯ ಹೇಳದೆ ದೀಪಿಕಾಗೆ ಈಗ ಬೇರೆ ದಾರಿ ಇಲ್ಲ. ದಿನಕರ್ ಮುಂದೆ ದೀಪಿಕಾ ತಪ್ಪೊಪ್ಪಿಕೊಳ್ಳುತ್ತಾಳಾ.? ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

[do_widget id=et_ads-6]

Post Author: Ravi Yadav