ಸರ್ಕಾರಿ ಶಾಲೆಯನ್ನು ದತ್ತು ಪಡೆದು ಪ್ರಣಿತ ಮಾಡುತ್ತಿರುವುದೇನು ಗೊತ್ತಾ?

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಪ್ರಣಿತ ಮಾಡುತ್ತಿರುವುದೇನು ಗೊತ್ತಾ?

0

ಪ್ರತಿಯೊಬ್ಬರು ತಮಗೆ ಸಮಾಜದಲ್ಲಿ ಸ್ಥಾನಮಾನ ಸಿಕ್ಕಿದ ತಕ್ಷಣ ತಮ್ಮ ಮೂಲ ಮತ್ತು ತಾವು ನಡೆದು ಬಂದ ದಾರಿಯನ್ನು ಮರೆತು ಬಿಡುತ್ತಾರೆ. ಅಷ್ಟೇ ಅಲ್ಲದೆ ಕೇವಲ ಕೆಲವರು ಮಾತ್ರ ತಮ್ಮ ಸ್ಥಾನಮಾನ ಮತ್ತು ತಮ್ಮ ಬಳಿ ಇರುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಾರೆ.

ಹುಟ್ಟಿದ್ದು ಕರ್ನಾಟಕದಲ್ಲಿಯಾದರೂ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ಪ್ರಣೀತಾ ರವರು ಹೆಸರು ಮಾಡಿದ್ದಾರೆ. ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಇವರು ಈಗ ಮಾಡಿದ ಕೆಲಸ ನೋಡಿದರೆ ನೀವು ಶಬಾಸ್ ಎನ್ನುತ್ತೀರಾ.

ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಒಂದು ಶಾಲೆಯನ್ನು ದತ್ತು ತೆಗೆದುಕೊಂಡಿರುವ ಪ್ರಣೀತಾ ರವರು ತಮ್ಮ ಸ್ವಂತ ಹಣದಿಂದ 5ಲಕ್ಷ ರೂ ನೀಡಿ ಮೂಲಸೌಕರ್ಯ ಒದಗಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಎಂಬ ಆಂದೋಲನದ ಸಮಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಣೀತಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಇಷ್ಟೇ ಅಲ್ಲದೆ ಪ್ರತಿ ವಾರ ಒಂದು ದಿನ ಬಿಡುವು ಮಾಡಿಕೊಂಡು ಶಾಲೆಗೆ ಭೇಟಿ ನೀಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಆಂಗ್ಲ ಭಾಷೆ ಹೇಳಿಕೊಡುತ್ತಿದ್ದಾರೆ. ಆಟದ ಜೊತೆ ಮಜಾ ಎಂಬಂತೆ ಮಕ್ಕಳ ಜೊತೆ ಬೆರೆತು ತಾನು ಬಹಳ ಖುಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಪ್ರಣಿತಾ ರವರಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ ನಿಮ್ಮ ಸಮಾಜಮುಖಿ ಕೆಲಸಗಳು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.