ಬಿಎಸ್ ವೈ ಮುಖ್ಯ ಟಾರ್ಗೆಟ್ ಯಾವುದು ಗೊತ್ತಾ?

ರಾಜ್ಯದಲ್ಲಿ ಉಪ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಇಂತಹ ಸಮಯದಲ್ಲಿ ಪ್ರತಿಯೊಂದು ಪಕ್ಷಗಳು ಗೆಲುವಿಗಾಗಿ ತಮ್ಮದೇ ಆದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈಗ ನಡೆಯುತ್ತಿರುವುದು ಉಪಚುನಾವಣೆ ಆದ್ದರಿಂದ ಪಕ್ಷಗಳು ತಾವು ಗೆದ್ದಿದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಮೊದಲು ಪ್ರಯತ್ನ ಮಾಡುತ್ತಾರೆ.

[do_widget id=et_ads-2]

ಅದರಂತೆಯೇ ಪ್ರತಿಯೊಬ್ಬರು ಬಿ ಎಸ್ ಯಡಿಯೂರಪ್ಪನವರು ತಮ್ಮ ಪಕ್ಷ ಗೆದ್ದು ರಾಜೀನಾಮೆ ನೀಡಿದ್ದ ಬಳ್ಳಾರಿ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಬಿ ಎಸ್ ಯಡಿಯೂರಪ್ಪನವರು ಕಾರಣ ಸಮೇತ ತಮ್ಮ ಆಸಕ್ತಿ ಮತ್ತು ಟಾರ್ಗೆಟ್ ಅನ್ನು ಬಹಿರಂಗಗೊಳಿಸಿದ್ದು ಕೆಲವರ ಹುಬ್ಬೇರಿಸಿದೆ.

[do_widget id=et_ads-3]

ತಮ್ಮ ಪುತ್ರ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದರು ಮತ್ತು ತಮ್ಮದೇ ಪಕ್ಷ ಕಳೆದ ಬಾರಿ ಬಳ್ಳಾರಿಯಲ್ಲಿ ಗೆದ್ದಿದ್ದರು ನನ್ನ ಸಂಪೂರ್ಣ ಆಸಕ್ತಿ ಮಂಡ್ಯ ಕ್ಷೇತ್ರದ ಮೇಲಿದೆ ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಬೂಕನಕೆರೆ ಎಂಬ ಗ್ರಾಮದಲ್ಲಿ ಆದರೆ ಶಿವಮೊಗ್ಗದ ಜನರು ನನ್ನನ್ನು ಶಾಸಕರಾಗಿ  ಮತ್ತು ಮುಖ್ಯಮಂತ್ರಿಯಾಗಿ ಮಾಡಿದ್ದರು.

[do_widget id=et_ads-4]

ಇಷ್ಟಾದರೂ ನಾನು ಹುಟ್ಟಿದ್ದು ಮಂಡ್ಯ ಕ್ಷೇತ್ರ ಆದ್ದರಿಂದ ಮಂಡ್ಯ ಕೂಡ ನನಗೆ ಬಹಳ ಮುಖ್ಯವಾದ ಕ್ಷೇತ್ರವಾಗಿದೆ ಎಂದು ಇದ್ದಕ್ಕಿದ್ದ ಹಾಗೆ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಬಿ ಎಸ್ ಯಡಿಯೂರಪ್ಪನವರು ತಮ್ಮ ಪಕ್ಷವನ್ನು ಮಂಡ್ಯಜಿಲ್ಲೆಯಲ್ಲಿ ಗೆಲ್ಲಿಸಿ ದಲ್ಲಿ ಮೈತ್ರಿ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಬರಲಿದೆ.

[do_widget id=et_ads-5]

Post Author: Ravi Yadav