ಅಖಾಡಕ್ಕಿಳಿದ ಒಂಟಿ ಸಲಗ- ಶ್ರೀರಾಮುಲು vs ಡಿಕೆಶಿ ಕಾಳಗಕ್ಕೆ ಮತ್ತಷ್ಟು ರಂಗು

ಲೋಕಸಭಾ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವೂ ಸಹ ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ ಈ ಕ್ಷೇತ್ರದಲ್ಲಿ ಶ್ರೀರಾಮುಲು ಅಭ್ಯರ್ಥಿ ಜಯಗಳಿಸುತ್ತಾರೆ ಎಂದು ಬಿಜೆಪಿ ಪಕ್ಷದವರು ಮತ್ತು ಶ್ರೀರಾಮುಲು ಬೆಂಬಲಿಗರು ಅಂದುಕೊಂಡಿದ್ದಾರೆ. ಆದರೆ ಅವರೆಲ್ಲರಿಗೂ ಶಾಕ್ ನೀಡಲು ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲ ಅಭ್ಯರ್ಥಿಯನ್ನು ಗೆಲ್ಲಿಸುವುದರ ಪಣ ತೊಟ್ಟಿದ್ದಾರೆ.

[do_widget id=et_ads-2]

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶ್ರೀರಾಮುಲು ಮತ್ತು ಡಿಕೆಶಿ ರವರ ವಾದ ವಿವಾದಗಳು ಮೀಡಿಯಾ ಮುಂದೆ ಸಹ ಬಹಿರಂಗಗೊಂಡಿದ್ದವು. ಒಬ್ಬರ ಮೇಲೆ ಒಬ್ಬರು ಚಾಲೆಂಜ್ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದ ಇಬ್ಬರು ನಾಯಕರು ಬಳ್ಳಾರಿ ಅಖಾಡಕ್ಕೆ ಮತ್ತಷ್ಟು ರಂಗು ಬರುವಂತೆ ಮಾಡಿದರು.

[do_widget id=et_ads-3]

ಆದರೆ ಈಗ ಸ್ನೇಹಿತನ ಬೆಂಬಲಕ್ಕೆ ನಿಂತಿರುವ ಬಿಜೆಪಿ ಪಕ್ಷದ ಬೆಂಬಲಿಗರಾದ ಜನಾರ್ದನ ರೆಡ್ಡಿ ರವರು ಅಖಾಡಕ್ಕೆ ಇಳಿದಿರುವುದು ಮತ್ತಷ್ಟು ರಂಗೇರಲು ಕಾರಣವಾಗಿದೆ ಈ ಮೊದಲು ಅಂದುಕೊಂಡ ಕೆಲಸಗಳನ್ನೆಲ್ಲ ಬಹಳ ಸುಲಭವಾಗಿ ಮಾಡಿ ಮುಗಿಸಿರುವ ಜನಾರ್ದನ ರೆಡ್ಡಿ ಅವರು ತಮ್ಮ ನೆಲವಾದ ಬಳ್ಳಾರಿಯಲ್ಲಿ ಡಿಕೆ ಶಿವಕುಮಾರ್ ಅವರ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

[do_widget id=et_ads-4]

ಬಳ್ಳಾರಿ ಎಂದಿಗೂ ಬಿಜೆಪಿಯ ಭದ್ರಕೋಟೆ ಇಲ್ಲಿ ನಾವೇ ಗೆಲ್ಲುವುದು ಡಿಕೆ ಶಿವಕುಮಾರ್ ರವರು ಕನಕಪುರ ಮತ್ತು ರಾಮನಗರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬಹುದು ಅಷ್ಟೇ ಆದರೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಅವರದ್ದು ಏನು ನಡೆಯುವುದಿಲ್ಲ ಇಲ್ಲಿನ ಜನ ನಮ್ಮನ್ನು ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದಾರೆ ಬಳ್ಳಾರಿಯಲ್ಲಿ ಶ್ರೀರಾಮುಲು ಒಬ್ಬ ಮಣ್ಣಿನ ಮಗ ನನ್ನ ಬಂಧನವಾದಾಗ ರಾಜಿನಾಮೆ ಸಹ ನೀಡಿ ಹೊರನಡೆದಿದ್ದರು. ನಂತರ ನಡೆದ ಚುನಾವಣೆಯಲ್ಲಿ ಉಳಿದ ಎಲ್ಲಾ ಅಭ್ಯರ್ಥಿಗಳು ಒಂದಾದರೂ ಶ್ರೀರಾಮುಲು ಅವರು ಬರೋಬ್ಬರಿ ಐವತ್ತು ಸಾವಿರ ಮತಗಳಿಂದ ಬಹಳ ಸುಲಭವಾಗಿ ಜಯಿಸಿದ್ದರು.

[do_widget id=et_ads-5]

ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಹೆಸರನ್ನು ಕೇಳಿದರೆ ಬಳ್ಳಾರಿಯ ಜನತೆ ಆವೇಶದಲ್ಲಿ ಇನ್ನೂ ಹೆಚ್ಚಿನ ಮತಗಳನ್ನು ಬಿಜೆಪಿಯ ಶಾಂತ ರವರಿಗೆ ನೀಡಿ ಗೆಲ್ಲಿಸುತ್ತಾರೆ ಇಲ್ಲಿನ ಜನರಿಗೆ ಸ್ವಾಭಿಮಾನವಿದೆ ಹೀಗಾಗಿ ಅವರನ್ನು ಎಂದಿಗೂ ಕಳೆದು ಕೊಳ್ಳಲು ಸಾಧ್ಯವಿಲ್ಲ ಎಂದು ಘೋಷಿಸಿದ್ದಾರೆ.

[do_widget id=et_ads-6]

Post Author: Ravi Yadav