ತೃತೀಯ ರಂಗದಿಂದ ಮೋದಿ ಸೋಲು ಅಸಾಧ್ಯ ಎಂದು ಒಪ್ಪಿಕೊಂಡ ದೇವೇಗೌಡರು

2019 ರ ಲೋಕಸಭಾ ಚುನಾವಣೆಗೆ ಪ್ರತಿಯೊಂದು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ನರೇಂದ್ರ ಮೋದಿ ರವರನ್ನು ಮತ್ತು ಬಿಜೆಪಿ ಪಕ್ಷವನ್ನು ಶತಾಯಗತಾಯ ಸೋಲಿಸಲು ವಿರೋಧ ಪಕ್ಷಗಳು ಎಲ್ಲಿಲ್ಲದ ಕಸರತ್ತುಗಳನ್ನು ಮಾಡುತ್ತಿವೆ.

[do_widget id=et_ads-2]

ಮೋದಿ ರವರ ಸಾಲಿಗಾಗಿ ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಉಳಿದ ಪಕ್ಷಗಳೆಲ್ಲವೂ ತೃತೀಯ ರಂಗವನ್ನು ರಚಿಸಿಕೊಂಡು ಚುನಾವಣೆಗೆ ಸಿದ್ಧರಿದ್ದೇವೆ ಎಂದು ಘೋಷಿಸಿಕೊಂಡಿದ್ದವು ಆದರೆ ಭಿನ್ನಮತ ಭುಗಿಲೆದ್ದು ಚುನಾವಣೆಗೆ ಮುನ್ನವೇ ತೃತೀಯ ರಂಗ ಅಳಿಸಿ ಹೋಯಿತು. ಎಲ್ಲಾ ಪಕ್ಷಗಳು ಕಾಂಗ್ರೆಸ್ ಪಕ್ಷದಿಂದ ಮೈತ್ರಿಯನ್ನು ಕಳಚಿಕೊಂಡು ಹೊರ ಹೋಗುತ್ತಿದ್ದಾರೆ ಇಂತಹ ಸಮಯದಲ್ಲಿ ಕರ್ನಾಟಕದಲ್ಲಿ ಮಾತ್ರ ಜೆಡಿಎಸ್ ಪಕ್ಷವು ಮೈತ್ರಿ ಮುಂದುವರಿಸಲು ನಿರ್ಧರಿಸಿತ್ತು.

[do_widget id=et_ads-3]

ಆದರೆ ಈಗ ಜೆಡಿಎಸ್ ಪಕ್ಷವು ಸಹ ಕಾಂಗ್ರೆಸ್ ಪಕ್ಷದ ಮೈತ್ರಿಯನ್ನು ಮುರಿದುಕೊಂಡ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಕರ್ನಾಟಕದ ರಾಜಕೀಯವು ಅಕ್ಷರಸಹ ರಣರಂಗವಾಗಿ ಮಾರ್ಪಟ್ಟಿದೆ ಮೈತ್ರಿಯಿಂದ ಎಲ್ಲೆಡೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆ.

[do_widget id=et_ads-4]

ಇಂತಹ ಸಮಯದಲ್ಲಿ ಎಚ್ ಡಿ ದೇವೇಗೌಡರು ಸಿಡಿಸಿರುವ ಬಾಂಬಿಗೆ ಕಾಂಗ್ರೆಸ್ ಪಕ್ಷವು ದಂಗಾಗಿದ್ದು ಒಂದು ವೇಳೆ ಜೆಡಿಎಸ್ ಪಕ್ಷವು ಸಹ ಮೈತ್ರಿಯನ್ನು ಮುರಿದುಕೊಳ್ಳುವ ಮನಸ್ಸು ಮಾಡಿದರೆ ಮುಂದೇನು ಗತಿ ಎಂಬ ಆತಂಕದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಅಷ್ಟಕ್ಕೂ ನಡೆದಿದ್ದು ಏನು ಗೊತ್ತಾ?

[do_widget id=et_ads-5]

ಜೆಡಿಎಸ್ ಪಕ್ಷದಲ್ಲಿ ಚಿಕ್ಕ ನಿರ್ಧಾರದಿಂದಲೇ ಹಿಡಿದು ದೊಡ್ಡ ನಿರ್ಧಾರ ದವರೆಗೆ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ದೇವೇಗೌಡರು ಇದ್ದಕ್ಕಿದ್ದ ಹಾಗೆ ತೃತೀಯರಂಗದ ಬಗ್ಗೆ ಅಸಮಾಧಾನ ಹೊರ ಹಾಕಿದ್ದು ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.

[do_widget id=et_ads-6]

ತೃತೀಯರಂಗದ ಬಗ್ಗೆ ಮಾತನಾಡಿರುವ ದೇವೇಗೌಡರವರು ಮಹಾ ಮೈತ್ರಿಯ ಮೂಲಕ ಬಿಜೆಪಿ ಪಕ್ಷ ಮತ್ತು ಮೋದಿ ಅವರನ್ನು ಸೋಲಿಸುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಎಚ್ ಡಿ ದೇವೇಗೌಡರು ಅವರು ದೇಶದಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ ಆದ್ದರಿಂದ ಸಮತೋಲನದ ಸಮಸ್ಯೆಗಳು ಎದುರಾಗುತ್ತಿವೆ ಇಂತಹ ಸಂದಿಗ್ಧ ಸಮಯದಲ್ಲಿ ತೃತೀಯ ರಂಗದಿಂದ ಮೋದಿ ರವರನ್ನು ಸೋಲಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-7]

ಕೆಲವು ರಾಜಕೀಯ ಪಂಡಿತರು ಈ ಹೇಳಿಕೆಯನ್ನು ದೇವೇಗೌಡರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಒಲಿಸಿಕೊಳ್ಳಲು ಮತ್ತು ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ಹೇಳಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-8]

Post Author: Ravi Yadav