ಶಿವಸೇನಾ ಗೆ ಶಾಕ್: ಎಲ್ಲಾ 25 ಕ್ಷೇತ್ರಗಳನ್ನು ಗೆದ್ದು ಬೀಗಿದ ಬಿಜೆಪಿ

ಶಿವಸೇನಾ ಗೆ ಶಾಕ್: ಎಲ್ಲಾ 25 ಕ್ಷೇತ್ರಗಳನ್ನು ಗೆದ್ದು ಬೀಗಿದ ಬಿಜೆಪಿ

0

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ ಇಂತಹ ಸಮಯದಲ್ಲಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮುರಿದು ಕೊಂಡು ಚುನಾವಣೆ ಎದುರಿಸುತ್ತೇವೆ ಎಂದಿದ್ದ ಶಿವಸೇನಾ ಪಕ್ಷಕ್ಕೆ ಬಿಜೆಪಿ ಪಕ್ಷವು ತನ್ನ ಗೆಲುವಿನ ಮೂಲಕವೇ ಉತ್ತರಿಸಿದೆ. ಈ ಫಲಿತಾಂಶದಿಂದ ಮೋದಿ ರವರ ಅಲೆಯು ಕೇವಲ ಅಲೆಯಾಗಿ ಮುಂಬೈನಲ್ಲಿ ಉಳಿದಿಲ್ಲ ಎಂಬುದು ತಿಳಿದುಬಂದಿದೆ ಬದಲಾಗಿ ಸುನಾಮಿಯಾಗಿ ಮಾರ್ಪಟ್ಟಿದೆ.

[do_widget id=et_ads-6]

ಮುಂಬೈನಲ್ಲಿರುವ 22,000 ಸಹಕಾರ ವಸತಿ ಸಮಾಜಗಳು ಫೆಡರೇಷನ್ ನ ಸದಸ್ಯರಾಗಿದ್ದು 2019 ರ ಲೋಕಸಭಾ ಚುನಾವಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಚುನಾವಣೆಯ ಫಲಿತಾಂಶ ಏನಾಗಿದೆ ಗೊತ್ತಾ?

[do_widget id=et_ads-2]

ಮುಂಬೈನಲ್ಲಿ ನಡೆದ ಸಹಕಾರ ವಸತಿ ಸಂಘಗಳ ಚುನಾವಣೆಯಲ್ಲಿ ಶಿವಸೇನಾ ನೇತೃತ್ವದ ಸಮಿತಿಯನ್ನು ಬಿಜೆಪಿ ನೇತೃತ್ವದ ಸಹಕಾರ ಸಮಿತಿಯು ಸೋಲಿಸಿದ್ದು, ಎಲ್ಲಾ 25 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

[do_widget id=et_ads-3]

ಈ ಫಲಿತಾಂಶವನ್ನು ನೋಡಿ ಖಂಡಿತವಾಗಿಯೂ ಶಿವಸೇನಾ ಗೆ ಭಾರಿ ಶಾಕ್ ಆಗಿದ್ದು ಒಂದು ವೇಳೆ ಮೋದಿ ರವರ ವರ್ಚಸ್ಸು 2019 ರ ಲೋಕಸಭಾ ಚುನಾವಣೆಯವರೆಗೂ ಹೀಗೆ ಇದ್ದಲ್ಲಿ ಖಂಡಿತವಾಗಿಯೂ ಶಿವಸೇನಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಮಟ್ಟಿಗೆ ಸೋತು ಸುಣ್ಣವಾದ ಲಿದೆ ಎಂದು ಎಲ್ಲರ ಅಭಿಪ್ರಾಯ ವಾಗಿದೆ.

[do_widget id=et_ads-4]

ಮುಂಬೈನಲ್ಲಿ ಬಿಜೆಪಿ ಸರ್ಕಾರವಿದ್ದರೂ ಜನರ ಅಭಿಪ್ರಾಯ ಸರ್ಕಾರ ಬದಲಿಸುವುದು ಆಗಿದೆ ಎಂದು ಕೆಲವರು ಕಿಡಿಕಾರುತ್ತಿದ್ದರು ಆದರೆ ಈ ಚುನಾವಣೆಯ ಫಲಿತಾಂಶದಿಂದ ಜನರ ಅಭಿಪ್ರಾಯವೂ ಹೊರಬಂದಿದ್ದು ಬಿಜೆಪಿ ಪಕ್ಷಕ್ಕೆ ಭಾರೀ ಜನ ಬೆಂಬಲವಿರುವುದು ತಿಳಿದು ಬಂದಿದೆ.

[do_widget id=et_ads-5]