ಹೀಗೆ ಆಗಿದ್ದಲ್ಲಿ ಖಂಡಿತಾ ನಿಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಹಾಗಿದೆ: ಎಚ್ಚೆತ್ತುಕೊಳ್ಳಿ

ಹೀಗೆ ಆಗಿದ್ದಲ್ಲಿ ಖಂಡಿತಾ ನಿಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಹಾಗಿದೆ: ಎಚ್ಚೆತ್ತುಕೊಳ್ಳಿ

0

ಭಾರತದ ಹಲವಾರು ಫೇಸ್ ಬುಕ್ ಬಳಕೆದಾರರು ಗುರುವಾರ ತಮ್ಮ ಖಾತೆಗಳು ಹ್ಯಾಕ್ ಆಗಿವೆ ಎಂದು ದೂರಿದ್ದು ಅವರ ಫೇಸ್ಬುಕ್ ಚಾಟ್ ಮೆಸೆಂಜರ್ ಮೂಲಕ ಹ್ಯಾಕರುಗಳು ಖಾತೆದಾರರ ಅರಿವಿಲ್ಲದಂತೆಯೇ ಅವರ ಫ್ರೆಂಡ್ ಲಿಸ್ಟ್ ನಲ್ಲಿರುವವರಿಂದ ಹಣ ಯಾಚಿಸಿ ಪ್ರಮುಖ ಬ್ಯಾಂಕ್ ಖಾತೆಯೊಂದಕ್ಕೆ ವರ್ಗಾಯಿಸಲು ಕೋರಿದ್ದಾರೆ.

[do_widget id=et_ads-2]

ತಮ್ಮ ವಾಟ್ಸ್ಯಾಪ್ ಖಾತೆಗಳಲ್ಲಿ ಫೇಸ್ ಬುಕ್ ನಿಂದ ಪಾಸ್ ವರ್ಡ್ ಬದಲಾಯಿಸುವಂತೆ ಮನವಿ ಮಾಡುವ ನೋಟಿಫಿಕೇಶನ್ ಗಳನ್ನು ನೋಡಿ ಹಲವರಿಗೆ ತಮ್ಮ ಖಾತೆಗಳು ಹ್ಯಾಕ್ ಆಗಿರುವುದು ತಿಳಿದು ಬಂದಿದೆ. ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹಾಗೂ ಸಿಒಒ ಶೆರಿಲ್ ಸ್ಯಾಂಡ್‍ಬರ್ಗ್ ಅವರ ಖಾತೆಗಳ ಸಹಿತ ಜಗತ್ತಿನಾದ್ಯಂತ ತನ್ನ 5 ಕೋಟಿ ಖಾತೆಗಳ ಮಾಹಿತಿ ಸೋರಿಕೆಯಾಗಿದೆ ಎಂದು ಕಂಪೆನಿ ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಈ ಹ್ಯಾಕಿಂಗ್ ವರದಿಯಾಗಿರುವುದು ಸಾಕಷ್ಟು ಆತಂಕಕ್ಕೀಡಾಗಿದೆ.

[do_widget id=et_ads-5]

ಗುರುವಾರದ ಹ್ಯಾಕಿಂಗ್ ಬಗ್ಗೆ ತಮಗೆ ತಿಳಿದಿದೆ ಹಾಗೂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಟಿ ಸಚಿವಾಲಯದ ಮೂಲಗಳು ತಿಳಿಸಿವೆ. ಇದೊಂದು ಗಂಭೀರ ಬೆಳವಣಿಗೆಯಾಗಿರುವುದರಿಂದ ಇಲಾಖೆ ಕಂಪೆನಿಯಿಂದ ವಿವರಣೆ ಕೇಳುವುದು ಎಂದೂ ತಿಳಿದು ಬಂದಿದೆ. ಫೇಸ್‍ಬುಕ್ ಇಂಡಿಯಾ ಇನ್ನೂ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ.

[do_widget id=et_ads-4]

ಗುರುವಾರ ಹ್ಯಾಕ್ ಆದ ಫೇಸ್ ಬುಕ್ ಖಾತೆಗಳಲ್ಲಿ ಮಾಧ್ಯಮ ಕ್ಷೇತ್ರದ ವೃತ್ತಿಪರ ಹಾಗೂ ಹೋಟೆಲಿಗ ಝೊರವರ್ ಕಲ್ರಾ, ಡೈನಿಂಗ್ ಆಯಪ್ ಈಝಿಡೈನರ್ ಸಹ ಸ್ಥಾಪಕ ರೋಹಿತ್ ದಾಸಗುಪ್ತಾ, ಖ್ಯಾತ ಚೆಫ್ ಗಳಾದ ಮುಂಬೈಯ ರಾವೂತ್ ಹಾಗೂ ದಿಲ್ಲಿಯ ಅಭಿಷೇಕ್ ಬಸು ಸೇರಿದ್ದಾರೆ.

[do_widget id=et_ads-3]

ಅವರೆಲ್ಲರ ಸ್ನೇಹಿತರು ಅವರಿಗೆ ಕರೆ ಮಾಡಿ ಹಣ ಯಾಚಿಸಿದ್ದ ಬಗ್ಗೆ ಪ್ರಶ್ನಿಸಿ, ಕೂಡಲೇ ಅದನ್ನು ಬ್ಯಾಂಕ್ ಖಾತೆಯೊಂದಕ್ಕೆ ವರ್ಗಾಯಿಸಲು ಕೇಳಿದ್ದೀರಾ ಎಂದು ದೃಢಪಡಿಸಲು ಯತ್ನಿಸಿದಾಗಲೇ ಅವರಿಗೆ ತಮ್ಮ ಖಾತೆ ಹ್ಯಾಕ್ ಆದ ಬಗ್ಗೆ ತಿಳಿದು ಬಂದಿತ್ತು.

[do_widget id=et_ads-7]