ಶಾಲೆಯ ಬಾತ್ ರೂಮಿನಲ್ಲಿ ನಿದ್ದೆ ಮಾಡ್ತಿದ್ಲು ಈ ನಟಿ.!

ಬಾಲಿವುಡ್ ನಟಿ ಆಲಿಯಾ ಭಟ್ ಒಂಥರಾ ಕಾಮಿಡಿ ಕ್ವೀನ್. ಆಲಿಯಾ ಮೇಲೆ ಇಂಟರ್ನೆಟ್ ನಲ್ಲಿ ಜೋಕ್ ಗಳ ಸುರಿಮಳೆಯೇ ಆಗುತ್ತೆ. ಆಲಿಯಾ ಸ್ವಲ್ಪ ಪೆದ್ದು ಅಂತಾ ಟೀಕೆ ಮಾಡುವವರೂ ಇದ್ದಾರೆ.

ಈ ನಟಿ ತಮ್ಮ ಬಾಲ್ಯದ ಸೀಕ್ರೆಟ್ ಒಂದನ್ನು ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದರು. ಚಿಕ್ಕಂದಿನಿಂದ್ಲೂ ಆಲಿಯಾಗೆ ತಿನ್ನೋದು, ನಿದ್ದೆ ಮಾಡೋದು ಅಂದ್ರೆ ಸಖತ್ ಇಷ್ಟವಂತೆ.

ಶಾಲೆಯಲ್ಲೂ ಆಕೆ ನಿದ್ದೆ ಮಾಡ್ತಿದ್ಲಂತೆ, ಆದ್ರೆ ಕ್ಲಾಸ್ ರೂಮಿನಲ್ಲಲ್ಲ, ಬಾತ್ ರೂಮಲ್ಲಿ. ಆಗಾಗ ತರಗತಿಯಿಂದ ಆಲಿಯಾ ಮಾಯವಾಗೋದನ್ನು ನೋಡಿ ಶಿಕ್ಷಕಿಗೆ ಅನುಮಾನ ಬಂದಿತ್ತು. ಎಲ್ಲಿದ್ದಾಳೆ ಅಂತಾ ಹುಡುಕಲು ಬಂದಿದ್ದ ಟೀಚರ್ ಕೈಗೆ ಆಲಿಯಾ ಸಿಕ್ಕಿಹಾಕಿಕೊಂಡಿದ್ಲು.

ಕ್ಲಾಸ್ ರೂಮಲ್ಲಿ ಪಾಠ ಕೇಳೋದು ಬಿಟ್ಟು ಬಾತ್ ರೂಮಿನಲ್ಲಿ ಗಡದ್ದು ನಿದ್ದೆ ಮಾಡ್ತಾ ಇದ್ದ ಆಲಿಯಾಳನ್ನು ಎಳೆದು ತಂದ ಶಿಕ್ಷಕಿ ಶಿಕ್ಷೆ ಕೊಟ್ಟಿದ್ದಾರೆ. ನಿದ್ದೆ ಮಾಡಿದ ತಪ್ಪಿಗೆ ಪನಿಶ್ಮೆಂಟ್ ಏನ್ ಗೊತ್ತಾ? ಒಂದು ವಾರ ಇಡೀ ಕ್ಲಾಸ್ ರೂಮಿನ ಡೆಸ್ಕ್ ಗಳನ್ನೆಲ್ಲ ಒರೆಸಿ ಸ್ವಚ್ಛ ಮಾಡೋದು. ಇದೀಗ ರಣಬೀರ್ ಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದಿರೋ ಆಲಿಯಾ, ಹಳೆ ಘಟನೆಗಳನ್ನು ನೆನಪಿಸಿಕೊಂಡು ಮುಸಿ ಮುಸಿ ನಕ್ತಿರಬಹುದೇನೋ.

Post Author: Ravi Yadav