ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಇರುವುದು ಒಂದೇ ಮೆಟ್ಟಿಲು

ಈಗಾಗಲೇ 2019 ರ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಪ್ರತಿಯೊಂದು ಪಕ್ಷಗಳು ಅಧಿಕಾರದ ಗದ್ದುಗೆ ಏರಲು ತಮ್ಮ ತಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರತಿಯೊಂದು ಪಕ್ಷಗಳು ಇರುವುದು ಒಂದೇ ಸವಾಲು ಅದು ಮೋದಿ ವರ್ಚಸ್ಸು. ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ಮೋದಿಯ ವರ್ಚಸ್ಸು ಕೆಲಸ ಮಾಡಿದೆ ಇದರ ಫಲಿತಾಂಶ ವಿರೋಧಿ ಪಕ್ಷಗಳಿಗೆ ಸೋಲು.

ಆದರೆ ಪ್ರತಿಪಕ್ಷಗಳ ಎಲ್ಲ ಒಂದಾಗಿ ಚುನಾವಣೆಯಲ್ಲಿ ಮೈತ್ರಿ ಅಥವಾ ಚುನಾವಣೋತ್ತರ ಮೈತ್ರಿ ಯನ್ನು ಮಾಡಿಕೊಂಡರೆ ಬಿಜೆಪಿ ಪಕ್ಷಕ್ಕೆ ಗೆಲುವು ಕಷ್ಟ ಸಾಧ್ಯ ಎಂದು ಕೆಲವರು ಮಾತನಾಡುತ್ತಿದ್ದಾರೆ ಆದರೆ ಇಂತಹ ಸಂದಿಗ್ಧ ಸಮಯದಲ್ಲಿ ಮೋದಿ ರವರ ಕೈಹಿಡಿಯಲು ಶ್ರೀರಾಮ ಬಂದಿದ್ದಾನೆ. ಈಗ ಮೋದಿ ರವರಿಗೆ ಕೇವಲ ಒಂದೇ ಒಂದು ಮೆಟ್ಟಲು ಅಧಿಕಾರದಿಂದ ದೂರ ಉಳಿದಿದೆ. ಆ ಮೆಟ್ಟಿಲನ್ನು ಮೋದಿ ರವರು ಏರಿದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ.

ಆ ಮೆಟ್ಟಿಲು ಯಾವುದು ಗೊತ್ತಾ?

ಮೋದಿ ರವರ 2014ರ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿದ್ದು ಪ್ರಣಾಳಿಕೆಯಲ್ಲಿ ಬಹುಮುಖ್ಯವಾದ ಅಂಶವಾಗಿತ್ತು. ಆದರೆ ಈ ರಾಮಮಂದಿರ ನಿರ್ಮಾಣ ಮಾಡಲು ಗೆಲವು ಸಿದ್ಧರಾಗುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಸುಪ್ರೀಂಕೋರ್ಟ್ ಅದಕ್ಕೆ ತಡೆಹಿಡಿದಿತ್ತು.

ಕೆಲವು ಮುಸ್ಲಿಂ ಸಮುದಾಯದವರು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿ ರಾಮ ಮಂದಿರ ನಿರ್ಮಾಣವನ್ನು ತಡೆದಿದ್ದರು. ಆದರೆ ನೆನ್ನೆ ನೀಡಿದ ತೀರ್ಪಿನಿಂದ ರಾಮಮಂದಿರ ನಿರ್ಮಾಣಕ್ಕೆ ಇತ್ತ ಬಹುದೊಡ್ಡ ತೊಡಕು ತೊಲಗಿತಂತೆ ಆಗಿದ್ದು ಇನ್ನು ಒಂದು ಮೆಟ್ಟಿಲು ಅಂದರೆ ಕೇವಲ ಇನ್ನೊಂದು ಕೇಸ್ ಬಾಕಿ ಇದ್ದು ಒಂದು ವೇಳೆ ಸುಪ್ರೀಂ ಕೋರ್ಟ್ ಶ್ರೀರಾಮ ನಿರ್ಮಾಣ ಮಂದಿರಕ್ಕೆ ಅಸ್ತು ಎಂದರೆ ಮೋದಿ ಅವರು ಅಧಿಕಾರಕ್ಕೆ ಬಂದಂತೆ.

ಯಾಕೆ ಗೊತ್ತಾ ಸುಪ್ರೀಂಕೋರ್ಟ್ ಅಸ್ತು ಎಂದ ಮುಂದಿನ ಮುಹೂರ್ತದಲ್ಲಿ ಮೋದಿ ರವರು ರಾಮಮಂದಿರ ನಿರ್ಮಾಣಕ್ಕೆ ಪಾಯ ಪೂಜೆ ಮಾಡಲಿದ್ದಾರೆ ಎಂಬ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ.

Post Author: Ravi Yadav