ಸತ್ಯ ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್, ಕಾಂಗ್ರೆಸ್ಸಿಗರಿಗೆ ಭಾರಿ ಮುಖಭಂಗ

ಕಾಂಗ್ರೆಸ್ ಪಕ್ಷದ ಮುಖವಾಣಿ ಎಂದೇ ಖ್ಯಾತಿ ಪಡೆದಿರುವ ಡೆಕ್ಕನ್ ಹೆರಾಲ್ಡ್ ಸಂಸ್ಥೆ ಕಾಂಗ್ರೆಸ್ಸಿಗೆ ಬಾರಿ ಮುಖ ಭಂಗವನ್ನು ಉಂಟುಮಾಡುವ ಸತ್ಯ ಒಂದನ್ನು ಪ್ರಕಟಿಸಿದೆ. ಇದನ್ನೇ ಆಹಾರವನ್ನಾಗಿ ಮಾಡಿಕೊಂಡ ನೆಟ್ಟಿಗರು ಕಾಂಗ್ರೆಸ್ ಪಕ್ಷದ ಮಾನವನ್ನು ಇಂಟರ್ನೆಟ್ಟಲ್ಲಿ ಹರಾಜು ಹಾಕುತ್ತಿದ್ದಾರೆ.

ಈ ಲೇಖನವನ್ನು ಡೆಕ್ಕನ್ ಹೆರಾಲ್ಡ್ ಸಂಸ್ಥೆ ಕೆಲವು ದಿನಗಳ ಹಿಂದಷ್ಟೇ ಬಹಿರಂಗಗೊಳಿಸಿತು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗ ಉಂಟಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಏನದು ಗೊತ್ತಾ?

ಇನ್ನು ಕೆಲವೇ ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೇಶದ ಪ್ರತಿಷ್ಠಿತ ಸಂಸ್ಥೆ ನಡೆಸಿದ ವಿಧಾನಸಭಾ ಚುನಾವಣೆಯ ಪೂರ್ವ ಸಮೀಕ್ಷೆಯನ್ನು ಬಹಿರಂಗಗೊಳಿಸಿರುವ ಡೆಕ್ಕನ್ ಹೆರಾಲ್ಡ್ ಸಂಸ್ಥೆಯು ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ಗೆಲುವು ದಾಖಲಿಸಿದೆ ಎಂದು ಪತ್ರಿಕೆಗಳಲ್ಲಿ ವರದಿ ಮಾಡಿದೆ.

ಈ ಸಮೀಕ್ಷೆ ಪ್ರಕಾರ ಬಿಜೆಪಿ ಪಕ್ಷವು 140 ಕ್ಕಿಂತಲೂ ಹೆಚ್ಚು ಸ್ಥಾನವನ್ನು ಗಳಿಸಲಿದೆ ಎಂಬುದು ಗಮನಿಸ ಬೇಕಾದ ವಿಷಯ. ಇನ್ನುಳಿದ ಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷವು ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಆದರೂ ಬಿಜೆಪಿ ಪಕ್ಷವು ಸ್ಪಷ್ಟ ಬಹುಮತವನ್ನು ಸಾಧಿಸಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ.

ಈ ಸಮೀಕ್ಷೆಯನ್ನು ಪ್ರಕಟಿಸಿರುವ ಡೆಕ್ಕನ್ ಹೆರಾಲ್ಡ್ ಸಂಸ್ಥೆ ಕಾಂಗ್ರೆಸ್ ಮುಖವಾಣಿ ಎಂದು ಪ್ರಸಿದ್ಧವಾಗಿದೆ. ಇಂತಹ ಸಂಸ್ಥೆಯು ಈ ಫಲಿತಾಂಶವನ್ನು ಹೊರಹಾಕಿದ್ದು ಇಂಟರ್ನೆಟ್ಟಲ್ಲಿ ವೈರಲ್ ಆಗಿದೆ.

Post Author: Ravi Yadav