ಈ ಕ್ಷಣ ಲೋಕಸಭಾ ಚುನಾವಣೆ ನಡೆದರೆ ಏನಾಗುತ್ತದೆ ಗೊತ್ತಾ?

2019 ರ ಲೋಕಸಭಾ ಚುನಾವಣೆಯನ್ನು ಇಡಿ ವಿಶ್ವವೇ ಎದುರುನೋಡುತ್ತಿದೆ ಇದೇ ಮೊಟ್ಟ ಮೊದಲ ಬಾರಿಗೆ ಭಾರತದ ಲೋಕಸಭಾ ಚುನಾವಣೆ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಭಾರತದ ಮಿತ್ರರಾಷ್ಟ್ರಗಳು ಮೋದಿ ಗೆಲ್ಲಲಿ ಎಂದು ಆಶಿಸುತ್ತಿದ್ದರೇ, ಭಾರತದ ವಿರೋಧಿ ರಾಷ್ಟ್ರಗಳು ಮಾತ್ರ ಮೋದಿ ಸೋಲ ಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪಾಕಿಸ್ತಾನ. ಮೊದಲಿನಿಂದಲೂ ಮೋದಿ ವಿರುದ್ಧವಾಗಿ ನಿಂತಿರುವ ಪಾಕಿಸ್ತಾನಿಯರು ಮೋದಿ ಸೋಲ ಬೇಕು ಎಂದು 2019ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ. ಇತ್ತೆಡೇ ವಿಶ್ವದ ದೊಡ್ಡ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್, ಇಸ್ರೇಲ್ ಮತ್ತು ಇನ್ನಿತರ ದೇಶಗಳು ಮೋದಿ ರವರ ಗೆಲುವಿಗಾಗಿ ಕಾದು ಕುಳಿತಿದ್ದಾರೆ.

ಇಂತಹ ಸಂದರ್ಭದಲ್ಲಿ ಒಂದು ವೇಳೆ ಈ ಕ್ಷಣ ಲೋಕಸಭಾ ಚುನಾವಣೆ ನಡೆದಲ್ಲಿ ಏನಾಗುತ್ತದೆ ಎಂದು ದೇಶದ ಪ್ರತಿಷ್ಠಿತ ಸಂಸ್ಥೆಗಳು ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈ ಫಲಿತಾಂಶಗಳನ್ನು ನೋಡಿದರೆ ಮುಂದಿನ ಲೋಕಸಭಾ ಚುನಾವಣೆಗೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ. ಅಷ್ಟಕ್ಕೂ ಈ ಕ್ಷಣ ಲೋಕಸಭಾ ಚುನಾವಣೆ ನಡೆದರೆ ಏನಾಗುತ್ತದೆ ಗೊತ್ತಾ?

ದೇಶದ ಪ್ರತಿ ಚುನಾವಣೆಯಲ್ಲಿಯೂ ಭರ್ಜರಿ ಗೆಲುವನ್ನು ಸಾಧಿಸುತ್ತಾ ಬಂದಿರುವ ಬಿಜೆಪಿ ಪಕ್ಷವು ಒಂದು ವೇಳೆ ಈ ಕ್ಷಣ ಲೋಕಸಭಾ ಚುನಾವಣೆ ನಡೆದಲ್ಲಿ ಮೋದಿ ರವರ ವರ್ಚಸ್ಸಿನಿಂದ ಬಹಳ ಸ್ಪಷ್ಟವಾಗಿ ಮತ್ತು ಸುಲಭವಾಗಿ ಬಹುಮತ ಸಾಧಿಸಲಿದೆ ಅಷ್ಟೇ ಅಲ್ಲದೆ ಬರೋಬ್ಬರಿ 320 ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ. ಇನ್ನುಳಿದ ಸೀಟುಗಳನ್ನು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಹಂಚಿಕೊಳ್ಳಲಿದ್ದಾರೆ.

ಒಂದು ವೇಳೆ ಜನರ ಆಸಕ್ತಿ ಮತ್ತು ಮೋದಿ ವರ್ಚಸ್ಸು 2019ರ ವರೆಗೂ ಹೀಗೆ ಇದ್ದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav