ಸಿಡಿದೆದ್ದ ರಾವತ್ ಆರ್ಮಿಗೆ ಫುಲ್ ಪವರ್ ಉಗ್ರರಿಗೆ ಕಾದಿದೆ ಮಾರಿ ಹಬ್ಬ

ಸಿಡಿದೆದ್ದ ರಾವತ್ ಆರ್ಮಿಗೆ ಫುಲ್ ಪವರ್ ಉಗ್ರರಿಗೆ ಕಾದಿದೆ ಮಾರಿ ಹಬ್ಬ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ದಿನೇದಿನೇ ಉಗ್ರರ ಮತ್ತು ಪಾಕಿಸ್ತಾನ ಸೇನೆಯ ಉಪಟಳ ಹೆಚ್ಚುತ್ತಿದೆ. ಇದರ ಬಗ್ಗೆ ಸೇನಾಮುಖ್ಯಸ್ಥರಾದ ಬಿಪಿನ್ ರಾವತ್ ರವರು ಪ್ರತಿಕ್ರಯಿಸಿದ್ದಾರೆ ಅವರ ಮಾತುಗಳನ್ನು ತಿಳಿಯಲು ಕೆಳಗಡೆ ಓದಿ.

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಕ್ರೌರ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಉಗ್ರರಿಗೆ ತಕ್ಕ ಪಾಠ ಕಲಿಸಲು ಸಕಾಲ ಕೂಡಿ ಬಂದಿದೆ ಮತ್ತು ಭಾರತೀಯ ಸೇನೆಗೆ ಈ ವಿಷಯದಲ್ಲಿ ಸರ್ಕಾರದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ್ದಾರೆ.ಪ್ರತಿಯೊಂದು ದಾಳಿಯು ಲೆಕ್ಕವಿಟ್ಟಿದ್ದೇವೆ, ಅದಕ್ಕೆ ಸರಿಯಾಗಿ ನಾವು ಮುಯ್ಯಿ ತೀರಿಸಿಕೊಳ್ಳುತ್ತೇವೆ, ಭಾರತೀಯ ಸೇನೆಯು ಇನ್ನು ಮುಂದೆ ಕೈಕಟ್ಟಿ ಕೂರುವುದಿಲ್ಲ ಪ್ರತಿ ದಾಳಿಗೂ ತಕ್ಕ ಪ್ರತ್ಯುತ್ತರ ವನ್ನು ನೀಡಿ ಉಗ್ರರ ಎಡೆಮುರಿ ಕಟ್ಟುತ್ತೇವೆ ಎಂದಿದ್ದಾರೆ.

ಕ್ರೌರ್ಯ ನಮ್ಮ ಆಯ್ಕೆಯಲ್ಲ ಆದರೆ ಪ್ರತಿಯೊಬ್ಬ ಉಗ್ರನೂ ನಮ್ಮ ಯೋಧರು ಅಥವಾ ಪೋಲಿಸ್ ಅನುಭವಿಸಿದ ನೋವನ್ನು ಅನುಭವಿಸುವಂತೆ ಮಾಡಬೇಕಿದೆ ಅದಕ್ಕೆ ಈಗ ಸೂಕ್ತ ಸಮಯ ಬಂದಿದೆ ಎಂದು ಬಿಪಿನ್ ರಾವತ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಭಾರತ ಮತ್ತು ಪಾಕಿಸ್ತಾನದ ಮಾತುಕತೆ ಕುರಿತು ಮಾತನಾಡಿದ ಬಿಪಿನ್ ರಾವತ್ ರವರು ಭಯೋತ್ಪಾದನೆ ಮತ್ತು ಶಾಂತಿ ಎರಡು ಏಕ ಕಾಲದಲ್ಲಿ ಸಾಧ್ಯವಿಲ್ಲ. ಒಂದು ವೇಳೆ ಪಾಕಿಸ್ತಾನವು ಮಾತುಕತೆ ಬಯಸಿದರೆ ಮೊದಲು ಉಗ್ರರ ನೆಲೆಗಳನ್ನು ನಾಶಮಾಡಿ ನಂತರ ಮಾತುಕತೆಗೆ ಸಿದ್ಧ ಎಂದು ಘೋಷಿಸಬೇಕು ನಂತರವಷ್ಟೇ ಮಾತುಕತೆ ಇಲ್ಲವಾದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.