ಭೂತದ ಬಾಯಲ್ಲಿ ಭಗವದ್ಗೀತೆ…ನಗುತ್ತಿದ್ದಾರೆ ನಮೋ ಭಕ್ತರು

ಪ್ರಕಾಶ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುಖಾಸುಮ್ಮನೆ ಯಾವುದನ್ನು ಅರಿಯದೆ ಮಾತನಾಡುತ್ತಿರುತ್ತಾರೆ  ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಚುನಾವಣೆ ಹತ್ತಿರ ಬಂದಾಗ ಭಾರಿ ಸುದ್ದಿ ಮಾಡುವ ಇವರು ಚುನಾವಣೆ ಮುಗಿದ ಮೇಲೆ ಕಾಣೆಯಾಗುತ್ತಾರೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿವೆ.

ಹಲವಾರು ಜನರು ಇವರನ್ನು ಕೇವಲ ದುಡ್ಡಿಗೋಸ್ಕರ ತಮಗೆ ಸಂಬಂಧವಿಲ್ಲದ ರಾಜಕಾರಣದ ಕುರಿತು ಬೊಬ್ಬೆ ಹೊಡೆಯುತ್ತಾರೆ ಎಂದು ದೂಷಿಸುತ್ತಾರೆ. ಇದಕ್ಕೆ ತಕ್ಕಂತೆ ಮೊನ್ನೆಯಷ್ಟೇ ನಡೆದ ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕಾಶ್ ಅವರು ಚುನಾವಣೆ ಮುಗಿದ ನಂತರ ನಡೆದ ವಿದ್ಯಾಮಾನಗಳ ಬಗ್ಗೆ ಒಂದು ಮಾತನ್ನು ಮಾತನಾಡಿರಲಿಲ್ಲ.

ಜನರು ಪ್ರಕಾಶ್ ರೈ ರವರು ಕೇವಲ ದುಡ್ಡಿಗಾಗಿ ಮಾತನಾಡುತ್ತಾರೆ ಎಂದು ದೂಷಿಸುತ್ತಿರುವಾಗ ಪ್ರಕಾಶ್ ರವರೆ ಮಾಧ್ಯಮಗಳನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದಾಗ ಎಲ್ಲರ ಹುಬ್ಬೇರಿದೆ ಮತ್ತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ನಗುತ್ತಿದ್ದಾರೆ.

ಇಷ್ಟೇ ಅಲ್ಲದೇ ತಮ್ಮನ್ನು ಯಾವ ಮಾಧ್ಯಮಗಳು ತೋರಿಸುತ್ತಿಲ್ಲ ಎಂದು ಪ್ರಕಾಶ್ ರವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ನಾನು ಪತ್ರಿಕಾಗೋಷ್ಠಿ ಕರೆದಾಗ ಹಲವಾರು ಪತ್ರಿಕೆಗಳು ಬರುತ್ತವೆ ಆದರೆ ಯಾರೊಬ್ಬರೂ ನನ್ನ ಬಗ್ಗೆ ಬರೆಯುವುದಿಲ್ಲ ಎಂದು ತಮ್ಮ ಅಳಲನ್ನು ಹೊರಹಾಕಿದ್ದಾರೆ.

ಮಾಧ್ಯಮಗಳನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಆರೋಪವನ್ನು ವ್ಯಕ್ತಪಡಿಸಿದಾಗ ಜನಸಾಮಾನ್ಯರು ಮತ್ತು ಅದರಲ್ಲಿಯೂ ನಮೋ ಭಕ್ತರು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗುತ್ತಿದೆ ಎಂದು ಪ್ರಕಾಶ್ ರೈ ರವರನ್ನು ದೂಷಿಸುತ್ತಿದ್ದಾರೆ. ನಿಮಗೂ ಹಾಗೆ ಅನಿಸಿದರೆ ಶೇರ್ ಮಾಡಿ.

Post Author: Ravi Yadav