ನಟನೆ ಬಿಟ್ಟು RSS ಕಾರ್ಯಕ್ರಮದಲ್ಲಿ ಪಾಲ್ಗೊಂಡ ನವಾಜುದ್ದೀನ್ ಸಿದ್ದಿಕಿ! ಮುಂದೇನಾಯ್ತು ನೀವೇ ನೋಡಿ.

ದೆಹಲಿಯಲ್ಲಿ RSS ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದಿಂದ ಅಷ್ಟೇ ಅಲ್ಲದೆ ವಿದೇಶದಿಂದಲೂ ಲಕ್ಷಾಂತರ ಜನ ಬಂದಿದ್ದರು. ಮೂರೂ ದಿವಸದ ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಬಂದಿದ್ದರು. ಆದರೆ ಜನರಿಗೆ ಶಾಕ್ ಆಗಿದ್ದು ಬಾಲಿವುಡ್ ನ ಪ್ರಸಿದ್ಧ ನಟ ನವಾಜುದ್ದೀನ್ ಸಿದ್ದಿಕಿ RSS ಕಾರ್ಯಕ್ರಮಕ್ಕೆ ಬಂದಿದ್ದು. ಜಾತ್ಯತೀತ ಅಂತ ಹೇಳಿಕೊಂಡು ತಿರುಗಾಡುವ ಜನರ ಪ್ರಜ್ಞೆ ತಪ್ಪಿರಬಹುದು ಈ ದೃಶ್ಯ ನೋಡಿ.

RSS ಕಾರ್ಯಕ್ರಮದಲ್ಲಿ ಸಂಘದ ಪ್ರಮುಖ ಮೋಹನ್ ಭಾಗವತ್ ಹಿಂದೂ ರಾಷ್ಟ್ರದ ಅರ್ಥ ಕೇವಲ ಭಾರತ ಹಿಂದುಗಳಿಂದ ಮಾತ್ರ ಕೂಡಿದ್ದು ಎಂದು ಅರ್ಥವಲ್ಲ ಎಲ್ಲ ಧರ್ಮಾದವರಿಗೂ ಇಲ್ಲಿ ಸ್ಥಾನವಿದೆ. ಇತರ ಧರ್ಮದವರು ಭಾರತ ಮುನ್ನಡೆಸಲು ಸಹಾಯ ಮಾಡಿದರೆ ಮಾತ್ರ ಭಾರತ ಶ್ರೇಷ್ಠ ಸ್ಥಾನ ಗಳಿಸಲು ಸಾಧ್ಯ. ಭಾರತವು ವಸುದೈವ ಕುಟುಂಬಂ ಎಂಬ ಭಗವದ್ಗೀತೆಯ ಪಾಲನೆ ಮಾಡುತ್ತದೆ. ಎಲ್ಲರು ನಮ್ಮವರೇ ಎಂದು ಹೇಳಿದರು.

ಬಹು ದೊಡ್ಡ ವಿಷಯವೇನೆಂದರೆ ನವಾಜುದ್ದೀನ್ ಸಿದ್ದಿಕಿ ತಮ್ಮ ಮುಂಬರುವ ಪ್ರೀಮಿಯರ್ ಮಂಟೋ ಚಿತ್ರೀಕರಣ ಬಿಟ್ಟು ಸಂಘದ ಕಾರ್ಯಕ್ರಮಕ್ಕೆ ಬಂದಿದ್ದರು. ಇವರ ಹೊರತು ಬಾಲಿವುಡ್ ನ ಹೆಸರಾಂತ ಅನು ಮಲ್ಲಿಕ್, ಮನಿಷಾ ಕೊಯ್ರಲಾ, ಅನು ಕಪೂರ್ ಕೂಡ ಭಾಗವಹಿಸಿದ್ದರು. ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ನವಾಜುದ್ದೀನ್ ಸಿದ್ದಿಕಿ ಅವರನ್ನು ಸ್ವಾಗತಿಸಿ ಮೋಹನ್ ಭಾಗವತ್ ಅವರ ಜೊತೆ ಮಾತುಕತೆ ಮಾಡುವದರ ಮೂಲಕ ಭಾರತದಾದ್ಯಂತ ಸಂಚಲನ ಮೂಡಿಸಿದ್ದಾರೆ. ಇತ್ತೀಚಿಗೆ ಅಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಹಾಗು ಭಾರತದ ಮಾಜಿ ರಾಷ್ಟ್ರಪತಿ ಗಳು ಪ್ರಣಬ್ ಮುಖರ್ಜಿ RSS ಕಾರ್ಯಕ್ರಮಕ್ಕೆ ಭಾಗವಹಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು.

 

Post Author: Ravi Yadav