ಕುಮಾರ ಸ್ವಾಮಿ ಅಧಿಕಾರ ಕಸಿದು ಕೊಂಡು ಕಂಬಿ ಹಿಂದೆ ಹಾಕಲಿದೆಯೇ ನ್ಯಾಯಾಲಯ?

0

ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಯಾವ ಕ್ಷಣದಲ್ಲಿ ಬೇಕಾದರೂ ಬಿಜೆಪಿ ಪಕ್ಷದವರು ಸರ್ಕಾರ ಉರುಳಿಸುತ್ತಾರೆ ಎಂಬ ಆತಂಕದಿಂದ ಅಧಿಕಾರ ನಡೆಸುತ್ತ ಬಂದಿದ್ದಾರೆ.

ಈಗೆ ಇರುವಾಗ ಕುಮಾರಸ್ವಾಮಿ ರವರು ಮನಬಂದಂತೆ ಮಾತನಾಡುತ್ತಿರುವುದನ್ನು ನೋಡಿದರೆ ವಿರೋಧ ಪಕ್ಷ ಸರ್ಕಾರವನ್ನು  ಉರುಳಿಸಿ ಅಧಿಕಾರ ಕಿತ್ತುಕೊಳ್ಳಬೇಕಿಲ್ಲ ಬದಲಾಗಿ ರಾಜ್ಯದ ಸಂವಿಧಾನದ ಪ್ರಕಾರವೇ ಸಿಎಮ್ ಕುರ್ಚಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ವಿಷಯದ ಮೂಲವೇನು? ಮತ್ತು ಅಧಿಕಾರ ಹೇಗೆ ಕಳೆದು ಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ಕುಮಾರಸ್ವಾಮಿ ಬಿಜೆಪಿ ಪಕ್ಷದ ಆಪರೇಷನ್ ಕಮಲದ ಕುರಿತು ಮಾತನಾಡುವಾಗ ಒಂದು ವೇಳೆ ಸರ್ಕಾರ ರಚನೆಯಾದ ಅಥವಾ ರಚಿಸಲು ಪ್ರಯತ್ನ ಪಟ್ಟಲ್ಲಿ ರಾಜ್ಯದ ಜನರನ್ನು ದಂಗೆ ಎಬ್ಬಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಪಕ್ಷವು ರಾಜ್ಯಪಾಲರಿಗೆ ದೂರು ನೀಡಿದೆ. ಈ ದೂರನ್ನು ರಾಜ್ಯಪಾಲರು ಕೋರ್ಟಿಗೆ ಶಿಫಾರಸ್ಸು ಮಾಡುವ ಎಲ್ಲ ಸೂಚನೆಗಳು ಕಾಣುತ್ತಿವೆ. ಒಂದು ವೇಳೆ ಇದೆ ನಡೆದಲ್ಲಿ ಮತ್ತು ಪ್ರಕರಣ ನಿರೂಪಣೆಯಾದಲ್ಲಿ ರಾಜ್ಯದ ಶಾಂತಿ ಕಡಕುವ ಕೆಲಸ ಮಾಡುವ ಬೆದರಿಕೆ ಹಾಕಿದ ಆಧಾರದ ಮೇಲೆ ಈ ಪಿ ಸಿ 153 ಸೆಕ್ಷನ್ ನ ಅಡಿಯಲ್ಲಿ ಅಧಿಕಾರ ಕಿತ್ತುಕೊಂಡು ಜೈಲಿಗೆ ಕಳುಹಿಸಬೇಕಾಗುತ್ತದೆ.