ಯಾರು ಈ ಸೈಫುದ್ದೀನ್? ನರೇಂದ್ರ ಮೋದಿ ಯಾಕೆ ಇವರನ್ನು ಭೇಟಿ ಆಗಲು ಇಂದೋರ್ ಗೆ ಹೋಗುತ್ತಿದ್ದಾರೆ?

ಯಾರು ಈ ಸೈಫುದ್ದೀನ್? ನರೇಂದ್ರ ಮೋದಿ ಯಾಕೆ ಇವರನ್ನು ಭೇಟಿ ಆಗಲು ಇಂದೋರ್ ಗೆ ಹೋಗುತ್ತಿದ್ದಾರೆ?

0

ಇದೇ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ದಿನದ ಮಟ್ಟಿಗೆ ಇಂದೋರ್ ತಲುಪಲಿದ್ದಾರೆ. ಈ ಸಂಧರ್ಭದಲ್ಲಿ ಅವರು ದಾವುದೀ ಬೋಹ್ರಾ ಸಮುದಾಯದ ಧರ್ಮಗುರು ಸೈಯದನಾ ಮುಫದ್ದಲ್ ಸೈಫುದ್ದೀನ್ ಅವರನ್ನು ಭೇಟಿ ಆಗಲಿದ್ದಾರೆ. ಈ ಸೈಫುದ್ದೀನ್ ಭಾರತ ಪ್ರವಾಸದಲ್ಲಿ ಇದ್ದಾರೆ. ಇವರನ್ನು ಭೇಟಿ ಆಗಲು ಲಕ್ಷಾಂತರ ಜನರು ಇಂದೋರ್ ಗೆ ಬರುತ್ತಿದ್ದಾರೆ.

ದಾವೂದಿ ಬೋಹ್ರಾ ಸಮುದಾಯದ ೫೩ನೇ ಧರ್ಮಗುರುಗಳು ಈ ಸೈಫುದ್ದೀನ್.

ಅಧಿಕೃತ ಮಾಹಿತಿಯ ಪ್ರಕಾರ ಮೋದಿಜೀ ವಿಶೇಷ ವಿಮಾನದ ಮೂಲಕ ಇಂದೋರ್ ತಲುಪಿ ಸೈಫೀ ನಗರದ ಮಸೀದಿಯಲ್ಲಿ ಧರ್ಮಗುರು ಸೈಫುದ್ದೀನ್ ಅವರನ್ನು ಭೇಟಿ ಆಗಲಿದ್ದಾರೆ. ಈ ಸೈಯದನಾ ಮುಫದ್ದಲ್ ಸೈಫುದ್ದೀನ್ ಬೋಹ್ರಾ ಸಮುದಾಯದ ೫೩ನೇ ಧರ್ಮಗುರುಗಳಾಗಿದ್ದಾರೆ. ಇವರ ಆಧ್ಯಾತ್ಮಿಕ ಪ್ರವಚನ ಕೇಳಲು ೪೦ ದೇಶಗಳ ೨ ಲಕ್ಷ ಗಳಷ್ಟು ಜನ ಭಾರತಕ್ಕೆ ಬರುವ ನಿರೀಕ್ಷೆ ಇದೆ.

ಮೋದಿ ಇಂದೋರ್ ಭೇಟಿ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮಕ್ಕಾಗಿ ಎಲ್ಲಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪೋಲಿಸ್ ಮಹಾ ನಿರ್ದೇಶಕರಾದ ಹರಿನಾರಾಯಣ ಚಾರಿ ಮಿಶ್ರ ಪ್ರಕಾರ ಸುಮಾರು ೩,೫೦೦ ಪೋಲಿಸರನ್ನು ನೇಮಿಸಲಾಗಿದೆ. ಇದಲ್ಲದೇ‌ ಆಧುನಿಕ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಡ್ರೋಣ್ ಕ್ಯಾಮರಾ, ಸಿಸಿ ಟಿವಿ ಕೂಡಾ ಅಳವಡಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕೂಡಾ ಮಾಡಲಾಗಿದೆ ಎಂದು ಮಹಾ ನಿರ್ದೇಶಕರು ಹೇಳಿದ್ದಾರೆ.

ರಿಪೋರ್ಟ್ ಪ್ರಕಾರ ಇಂದೋರ್ ನಗರದಲ್ಲೇ ಸುಮಾರು ೩೫,೦೦೦ದಷ್ಟು ಬೋಹ್ರಾ ಸಮುದಾಯದ ಮತದವರಿದ್ದಾರೆ. ಈ ಮತದವರ ಶೇಕಡಾ ೪೦% ರಷ್ಟು ಜನ ದಕ್ಷಿಣ ಇಂದೋರ್ ಅಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಸೈಫುದ್ದೀನ್ ಅವರಿಗೆ ಶಿವರಾಜ್ ಸಿಂಗ್ ಚವ್ಹಾಣ್  ನೇತೃತ್ವದ ಬಿಜೆಪಿ ಸರಕಾರ ರಾಜಕೀಯ ಅತಿಥಿ ಸ್ಥಾನಮಾನ ನೀಡಿದ್ದಾರೆ.

ಕೆಲವೇ ದಿನಗಳಲ್ಲಿ ಮಧ್ಯ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಈ ಬೋಹ್ರಾ ಸಮುದಾಯದ ಜನರು ಬಿಜೆಪಿ ಗೆ ಹತ್ತಿರದಲ್ಲಿದ್ದಾರೆ. ಹಾಗಾಗಿ ಮೋದಿ ಇವರನ್ನು ಭೇಟಿ ಆಗಲು ಹೊರಟಿದ್ದಾರೆ. ಗುಜರಾತ್ ಅಲ್ಲೂ ಈ ಸಮುದಾಯದ ಜನರಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೂ ಮೋದಿ ಸೈಫುದ್ದೀನ್ ಅವರನ್ನು ಭೇಟಿ ಮಾಡುತ್ತಿದ್ದರು.