ಅನ್ನದಾತರೇ ನಿಮ್ಮ ಕಷ್ಟಗಳೆಲ್ಲವೂ ಇನ್ನೂ ದೂರ: ಮೋದಿ ಬಂಪರ್ ಕೊಡುಗೆ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ವಿರೋಧಪಕ್ಷದವರು ಮೋದಿ ರವರನ್ನು ರೈತ ವಿರೋಧಿ ಸರ್ಕಾರ ಎಂದು  ಟೀಕಿಸುತ್ತಿರುತ್ತಾರೆ.  ಆದರೆ ನರೇಂದ್ರ ಮೋದಿ ರವರು ಇದುವರೆಗೂ ಯಾವುದೇ  ಟೀಕೆಗಳಿಗೂ ಮಾತಿನ ಮೂಲಕ ಉತ್ತರಿಸಿದ ಉದಾಹರಣೆಯೇ ಇಲ್ಲ.

ಯಾಕೆಂದರೆ ಪ್ರತಿ ಬಾರಿಯೂ ನರೇಂದ್ರ ಮೋದಿ ರವರು ಟೀಕೆಗಳಿಗೆ ತಮ್ಮ ಕೆಲಸದ ಮೂಲಕ ಉತ್ತರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅನ್ನದಾತರ ಬೆನ್ನೆಲುಬಾಗಿ ನಿಂತಿರುವ ನರೇಂದ್ರ ಮೋದಿ ರವರು ರೈತರು ಬೆಳೆದ ಬೆಳೆಗಳಿಗೆ ಒಂದು ರೂಪಾಯಿ ಸಹ ನಷ್ಟವಾಗದಂತೆ ಬೃಹತ್ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.

ಅಷ್ಟಕ್ಕೂ ಆ ಯೋಜನೆ ಯಾವುದು ಅದರಿಂದ ರೈತರಿಗಾಗುವ ಲಾಭ ಗಳಾದರೂ ಏನು?

ಅನ್ನದಾತ ಮೌಲ್ಯ ಸಂರಕ್ಷಣಾ ಎಂಬ ಯೋಜನೆಯನ್ನು ಜಾರಿಗೆ ತಂದಿರುವ ಮೋದಿ ರವರು ರೈತರು ಬೆಳೆಯುವ ಪ್ರತಿ ಬೆಳೆ ಕಾಳು ಗಳಿಗೂ ಬೆಲೆ ದೊರೆಯುವಂತೆ ಮಾಡಲಿದ್ದಾರೆ. ಹೇಗೆ ಎಂಬುದನ್ನು ಕೆಳಗಡೆ ತಿಳಿಯಿರಿ.

ರಾಜ್ಯ ಸರ್ಕಾರಗಳಿಗೆ 3 ಅವಕಾಶಗಳನ್ನು ಕಲ್ಪಿಸಿರುವ ಮೋದಿ ಸರ್ಕಾರ, ಮೊದಲ ಅವಕಾಶದಲ್ಲಿ ಎಂದಿನಂತೆ ಕನಿಷ್ಟ ಬೆಲೆಯನ್ನು ಮುಂದುವರಿಸಲಿದೆ  ಮತ್ತು  ಕನಿಷ್ಠ ಬೆಲೆಗಿಂತ ರೈತರು ಬೆಳೆದ ಬೇಳೆ ಕಾಳುಗಳಿಗೆ ಬೆಲೆ ಸಿಗದೆ ಇದ್ದಲ್ಲಿ ಸ್ವತಹ ಕೇಂದ್ರ ಸರ್ಕಾರವು ಮಾರುಕಟ್ಟೆಯ ದರ ಮತ್ತು ಕನಿಷ್ಠ ಬೆಲೆಗೆ ಇರುವ ವ್ಯತ್ಯಾಸವನ್ನು ನೇರವಾಗಿ ರೈತರ ಅಕೌಂಟ್ ಗೆ ಜಮಾ ಮಾಡಲಿದ್ದಾರೆ.

ಇನ್ನು ಮೂರನೇ ಅವಕಾಶದಲ್ಲಿ ರೈತರಿಗೆ ದಲ್ಲಾಳಿಗಳ ಕಾಟವನ್ನು ತಪ್ಪಿಸಲು ನೇರವಾಗಿ ಕಂಪನಿಗಳೇ ರೈತರ ಬಳಿ ಬಂದು ಬೇಳೆಕಾಳುಗಳನ್ನು ಕೊಂಡು ಕೊಳ್ಳಲಿದ್ದಾರೆ. ಒಂದು ವೇಳೆ ಇದೆ ನಡೆದಲ್ಲಿ ರೈತರು ದಲ್ಲಾಳಿ ಮುಕ್ತ ಜೀವನ ನಡೆಸಲಿದ್ದಾರೆ.

Post Author: Ravi Yadav