ಬಿಗ್ ಬ್ರೇಕಿಂಗ್- ಬೆಂಗಳೂರಲ್ಲಿ ರಹಸ್ಯ ಕಾರ್ಯಾಚರಣೆಗಿಳಿದ ಜಾರಕಿಹೊಳಿ ಬ್ರದರ್ಸ್..!

ರಾಜ್ಯ ರಾಜಕಾರಣದಲ್ಲಿ ಕೆಲವು ದಿನಗಳಿಂದ ತಲ್ಲಣ ಸೃಷ್ಟಿಸಿರುವ ಜಾರಕಿಹೊಳಿ ಬ್ರದರ್ಸ್ ರವರು  ಇದ್ದಕ್ಕಿದ್ದ  ಹಾಗೆ ಬೆಂಗಳೂರಿಗೆ ಆಗಮಿಸಿ  ಬಿಜೆಪಿ ನಾಯಕರ ಜೊತೆ ಮಾತುಕತೆ ಮಾಡಲು ಬಂದಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ.

ಈ ಸುದ್ದಿ ಹಬ್ಬಿದ ತಕ್ಷಣವೇ ಪರಮೇಶ್ವರ್ ರವರು ತಮ್ಮ ವಿದೇಶಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಮತ್ತು  ಲಕ್ಷ್ಮಿ ಹೆಬ್ಬಾಳ್ಕರ್ ನವರು ಸಭಾ ಬೆಂಗಳೂರಿಗೆ ಆಗಮಿಸಿದ್ದಾರೆ. ಮಾಧ್ಯಮದವರಿಗೆ ಜಾರಕಿಹೊಳಿ ಬ್ರದರ್ಸ್ ಮತ್ತು ಬಿಜೆಪಿ ಮುಖಂಡರ ಸಭೆ ನಡೆಯುವುದು ಗೊತ್ತಾಗುತ್ತಿದ್ದಂತೆ ಸ್ಥಳ ಬದಲಾಗಿದೆ. ಈ ಎಲ್ಲ ವಿದ್ಯಮಾನಗಳಿಂದ ರಾಜ್ಯರಾಜಕಾರಣದಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದು ಸರ್ಕಾರ ಯಾವಾಗ ಉರುಳುತ್ತದೆ ಎಂದು ಎಲ್ಲರಲ್ಲೂ ಆತಂಕ ಮೂಡಿದೆ.

ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗ್ಗೆ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗುವುದಾಗಿ ಹೇಳಿ ತೆರಳಿದವರು ಅಲ್ಲಿಗೆ ಹೋಗುವ ಬದಲು ಅಜ್ಞಾತ ಸ್ಥಳದಲ್ಲಿ ತಂಗಿದ್ದರು.ಸಚಿವ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಸಹ ಬೆಂಗಳೂರಿಗೆ ಆಗಮಿಸುತ್ತಿರುವುದು ಮತ್ತಷ್ಟು ಕುತುಹಲಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ಮತ್ತು ಗೋವಾ ಬಿಜೆಪಿ ಮುಖಂಡರ ಮೂಲಕ ಬಿಜೆಪಿಯನ್ನು ಸಂಪರ್ಕಿಸಿರುವ ಜಾರಕಿಹೊಳಿ ಸಹೋದರರು ನಡೆಸುತ್ತಿರುವ ಕಾರ್ಯಾಚರಣೆ  ಕಾಂಗ್ರೆಸ್ ವಲಯದಲ್ಲಿ ಅಲ್ಲೋಲ್ಲ ಕಲ್ಲೋಲವನ್ನೇ ಸೃಷ್ಟಿಸಿದೆ.

Post Author: Ravi Yadav