ಬಿತ್ತು ಮೊದಲ ವಿಕೆಟ್- ಈ ರಾಜ್ಯದ ಕಾಂಗ್ರೆಸ್ಸಿಗರಿಂದ ಇಲ್ಲ ಭಾರತ್ ಬಂದ್

ನಾಳೆ ಅರ್ಥಪೂರ್ಣ ವಿಲ್ಲದ ಬಂದ್ ನಡೆಯುತ್ತಿದೆ, ಬೇರೆ ದೇಶಗಳ ಆರ್ಥಿಕ ಕಗ್ಗಂಟಿನಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗಿದೆ. ಇದರಿಂದ ಸಾಮಾನ್ಯವಾಗಿ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿದೆ.

ಆದರೆ ಮೋದಿರವರನ್ನು ದೂಷಿಸುವ ಉದ್ದೇಶದಿಂದ ಮತ್ತು ಜನಸಾಮಾನ್ಯರ ಕಣ್ಣಿಗೆ ತೈಲ ಬೆಲೆ ಏರಿಕೆಯಾಗಲು ಮೋದಿ ಸರ್ಕಾರದ ಅಧಿಕಾರವೇ ಕಾರಣ ಎಂದು ಬಿಂಬಿಸಲು ವಿರೋಧ ಪಕ್ಷಗಳು  ಜನಸಾಮಾನ್ಯರ ಬೆಂಬಲವಿಲ್ಲದಿದ್ದರೂ ಭಾರತ್ ಬಂದ್ ಘೋಷಣೆ ಮಾಡಿವೆ.

ನಿರೀಕ್ಷೆಯಂತೆ ಮೋದಿ ಭಕ್ತರು ಈ ಬಂದಿಗೆ ಬೆಂಬಲವನ್ನು ಸೂಚಿಸಿಲ್ಲ, ಮತ್ತು ಜನಸಾಮಾನ್ಯರು ನಮ್ಮ ಕಡೆಯಿಂದ ಭಾರತ್ ಬಂದ್ ಗೆ ಬೆಂಬಲ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ವಿಚಿತ್ರ ಎಂಬಂತೆ ಕಾಂಗ್ರೆಸ್ ಪಕ್ಷವೇ ಕರೆ ನೀಡಿರುವ ಈ ಭಾರತ್ ಬಂದಿಗೆ ಗೋವಾ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತ ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ, ಇದರಿಂದ ಕೇವಲ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಪೆಟ್ರೋಲ್ ಬೆಲೆಯನ್ನು ರಾಜ್ಯಸರ್ಕಾರಗಳು  ಸ್ವಲ್ಪ ತೆರಿಗೆಯನ್ನು ಕಡಿಮೆ ಮಾಡಿ ಇಳಿಸಬಹುದು. ಪರಿಕರ್ ಅವರು ಈ ಆಶ್ವಾಸನೆಯನ್ನು ಎಲ್ಲರಿಗೂ ನೀಡಿದ್ದರು. ಹಾಗೆಯೇ ಪ್ರತಿ ರಾಜ್ಯಗಳು ಸಹ ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಸಬೇಕು ಎಂದು ಹೇಳಿದರು.

Post Author: Ravi Yadav