ಕುಮಾರಣ್ಣನಿಗೆ ಶಾಕ್- ಮೈತ್ರಿ ಬಂಡಾಯ – ರೆಸಾರ್ಟ್ ರಾಜಕೀಯ ಮತ್ತೆ ಶುರು

ಕರ್ನಾಟಕದ ರಾಜಕೀಯಕ್ಕೂ ಮತ್ತು ರೆಸಾರ್ಟ್ ರಾಜಕಾರಣಕ್ಕೂ ಎಲ್ಲಿಲ್ಲದ ನಂಟು.ರಾಜ್ಯದಲ್ಲಿ ಹಲವುಬಾರಿ ರೆಸಾರ್ಟ್ ರಾಜಕಾರಣ ನಡೆದಿದೆ ಆದರೆ ಈ ಬಾರಿ ರಾಜಕಾರಣ ಬಹಳ ಕುತೂಹಲ ಕೆರಳಿಸಿದೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಗಿನಿಂದಲೂ ಸಿದ್ದರಾಮಯ್ಯರವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕೆಲವರು ಸಿದ್ದರಾಮಯ್ಯ ಪರವಾಗಿ ಮಾತನಾಡಿದರೆ ಕೆಲವರು ಹಾಗೇನು ಇಲ್ಲ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ಈಗ ಸಹನೆಯ ಕಟ್ಟೆ ಹೊಡೆದಂತೆ ಕಾಣುತ್ತಿದೆ ರಾಜ್ಯ ರಾಜಕಾರಣದಲ್ಲಿ ಈ ನಡೆ ಭಾರೀ ಕುತೂಹಲ ಕೆರಳಿಸಿದೆ.

ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯನವರು ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದರು ಆದರೆ ಈ ಹೇಳಿಕೆ ವಿವಾದ ಸೂಚಿಸಿದ ನಂತರ ಮುಂದಿನ ಬಾರಿ ಎಂದು ಜಾರಿಕೊಂಡಿದ್ದರು. ಆದರೆ ಕೆಲವು  ಸಿದ್ದರಾಮಯ್ಯನವರ ಬೆಂಬಲಿಗರು ಸಿದ್ದರಾಮಯ್ಯನವರು ಒಬ್ಬರ ಇಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದರು ಯಾರು ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಆದರೆ ಸಿದ್ದು ರವರು ಈಗ ರೆಸಾರ್ಟ್ ರಾಜಕೀಯ ಶುರು ಮಾಡಿದ್ದಾರೆ ಎಂಬ ಗಂಭೀರ ಮಾತುಗಳು ಕೇಳಿ ಬರುತ್ತಿವೆ.

ಇದ್ದಕ್ಕಿದ್ದಾಗೆ ಸಿದ್ದರಾಮಯ್ಯನವರು ಪ್ರವಾಸದ ನೆಪದಲ್ಲಿ ವಿದೇಶಕ್ಕೆ ಹೋಗಲು ತಯಾರಾಗಿದ್ದಾರೆ. ಇವರ ಬೆನ್ನಲ್ಲೇ ಪರಮೇಶ್ವರ ವಿರುದ್ಧ ಬೆಂಗಳೂರಿನ ಶಾಸಕರು ಅಸಮಾಧಾನಗೊಂಡಿದ್ದು ಶಾಸಕರು ಪ್ರತ್ಯೇಕ  ಎರಡನೇ ತಂಡವಾಗಿ ವಿದೇಶಿ ಪ್ರವಾಸ ಬೆಳೆಸಿದ್ದಾರೆ. ಇನ್ನು ಸಿದ್ದರಾಮಯ್ಯ ರವರ  ಆಪ್ತರಾದ  ಜಾರ್ಜ್ ಮತ್ತು ದೇಶಪಾಂಡೆ ರವರು ಮೂರನೇ ತಂಡವಾಗಿ ವಿದೇಶಕ್ಕೆ ಪ್ರವಾಸ ಬೆಳೆಸಿದ್ದಾರೆ.

ಮೂರು ವಿವಿಧ ತಂಡಗಳಾಗಿ ಪ್ರಯಾಣ ಬೆಳೆಸಿರುವ ಅತೃಪ್ತ ಶಾಸಕರು ಎಲ್ಲರೂ ಒಂದು ಕಡೆ ಸೇರಿ ವಿದೇಶಿ ರೆಸಾರ್ಟ್ ರಾಜಕಾರಣ ಮಾಡಲಿದ್ದಾರೆ ಎಂದು ಕೇಳಿ ಬರುತ್ತಿದೆ.ಒಂದು ವೇಳೆ ಇದೇ ನಡೆದಲ್ಲಿ ಸಿದ್ದರಾಮಯ್ಯನವರು ಮೈತ್ರಿ ಸರ್ಕಾರದ ಆಧಾರದ ಮೇಲೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ.

Post Author: Ravi Yadav