ಬಿಗ್ ಬ್ರೇಕಿಂಗ್- ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ !! ಅಥವಾ ಮರು ಚುನಾವಣೆ?

ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಕ್ಷವೊಂದು ಬರೋಬರಿ 104 ಸೀಟುಗಳನ್ನು ಗೆದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಜನರು ಬಹಿರಂಗವಾಗಿ ಉಳಿದ ಪಕ್ಷಗಳನ್ನು ತಿರಸ್ಕರಿಸಿದರೂ ಕೇವಲ ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಪಕ್ಷವು ಮತ್ತು ಜೆಡಿಎಸ್ ಪಕ್ಷವು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ.

ಆದರೆ ಮೈತ್ರಿ ಸರ್ಕಾರ ಬಂದಾಗಿಲಿಂದಲೂ ಒಂದಲ್ಲ ಒಂದು ಅಡೆತಡೆಗಳು ಸರ್ಕಾರಕ್ಕೆ ಎದುರಾಗುತ್ತಿವೆ. ಈಗ ಬೃಹತ್ ವರದಿಯೊಂದು ಹೊರಬಿದ್ದಿತ್ತು  ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದೆ. ಇದನ್ನು ನೋಡಿದರೆ ಸ್ವತಹ ಕಾಂಗ್ರೆಸ್ ಹೈಕಮಾಂಡ್ ಪಕ್ಷವು ಮೈತ್ರಿಯನ್ನು ತೊರೆದು ಮೈತ್ರಿಯನ್ನು ಮರು ಚುನಾವಣೆಗೆ  ಸಿದ್ಧವಾಗುತ್ತದೆ,  ಇಲ್ಲವಾದಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷದ ಜೊತೆ ಸೇರಿಕೊಂಡು ಸರ್ಕಾರ ರಚಿಸಲಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಇಡೀ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕವು  ದೇಶದಲ್ಲಿಯೇ ಅತಿ ಪ್ರಮುಖವಾದ ಸ್ಥಳ.  ಯಾಕೆಂದರೆ ಇಲ್ಲಿ ಗೆದ್ದಷ್ಟು ಸೀಟುಗಳು ಇನ್ನೆಲ್ಲೋ ಗೆದ್ದಿಲ್ಲ.  ಪ್ರತಿಯೊಂದು ಕಡೆ ಕಾರ್ಯಕರ್ತರು ಇಲ್ಲದೆ  ಪರದಾಡುತ್ತಿರುವ ಕಾಂಗ್ರೆಸ್ಗೆ ಈ ವರದಿ ಶಾಕ್ ನೀಡಿದೆ.

ಮೈತ್ರಿ ಸರ್ಕಾರದಿಂದ ಜೆಡಿಎಸ್ ಬೆಂಬಲಿಗರ ಕೈ ಮೇಲಾಗಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಳಲಿ ಹೋಗುತ್ತಿದ್ದಾರೆ. ಒಂದು ವೇಳೆ ಇದೇ ಮುಂದುವರೆದರೆ  ಮುಂದಿನ ಲೋಕಸಭಾ ಚುನಾವಣೆಗೆ ವೇಳೆಗೆ  ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು ಬೆರಳಣಿಕೆಯಷ್ಟು ಮಾತ್ರ ಇರುತ್ತಾರೆ. ಈ ಮೈತ್ರಿಯು  ಕೇವಲ ವಿಧಾನಸೌಧಕ್ಕೆ ಮಾತ್ರ ಸೂಕ್ತವಾಗಿದ್ದು ಕಾರ್ಯಕರ್ತರಿಗೆ ತೊಂದರೆಯಾಗಲಿದೆ ಎಂಬ ಶಾಕಿಂಗ್ ವರದಿ ಬಹಿರಂಗಗೊಂಡಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ದಿನೇಶ್ ಗುಂಡೂರಾವ್ ಅವರು ಈ ವಿಷಯವನ್ನು ಹೈಕಮಾಂಡ್ ಬಳಿ ಚರ್ಚಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಹೈಕಮಾಂಡ್ ಅಸ್ತು ಎಂದಲ್ಲಿ ಮೈತ್ರಿ ಸರ್ಕಾರ ಉರುಳಲಿದ್ದು ಬಿಜೆಪಿ ಸರ್ಕಾರ ರಚನೆಯಾಗಲಿದೆ. ಅಥವಾ ಇದನ್ನೇ ಬಳಸಿಕೊಂಡು ಅಥವಾ ಇದೇ ಅಂಶವನ್ನು  ಮುಂದಿಟ್ಟುಕೊಂಡು ಮರು ಚುನಾವಣೆ ನಡೆದರೂ ಆಶ್ಚರ್ಯವಿಲ್ಲ.

ನಿಮ್ಮ ಅಭಿಪ್ರಾಯ ಏನೆಂಬುದನ್ನು ಕೆಳಗಡೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav