ಬಹಿರಂಗವಾಯಿತು ಮತ್ತೊಂದು ಬೃಹತ್ ಸಮೀಕ್ಷೆ: ಗೆಲುವಿನಿಂದ ದಡ ಸೇರಲಿದೆಯೇ ಬಿಜೆಪಿ?

೨೦೧೯ ರ ಲೋಖಾಸಭಾ ಚುನಾವಣೆಯು ಹಿಂದೆಂದೂ ಕಾಣದಂತಹ ಮಹತ್ವನ್ನು ಪಡೆದುಕೊಂಡಿದೆ. ಯಾಕೆಂದರೆ ಮೋದಿ ರವರ ಜನಪ್ರಿಯತೆ ದಿನೇ ದಿನೇ ಹೆಚ್ಚಿತ್ತಿದೆ, ಎಲ್ಲಿ ನೋಡಿದರೂ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಗೆಲುವು ಬಹಳ ಸುಲಭವಾಗಿ ದೊರಕುತ್ತಿದೆ. ಆದರೆ ಈ ಬಾರಿಯ ಚುನಾವಣೆಯನ್ನು ಬಿಜೆಪಿ ಪಕ್ಷವು ಗಂಭೀರವಾಗಿ ತೆಗೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ದೇಶದ ಬರೊಬ್ಬರು 18 ಪಕ್ಷಗಳು ಒಟ್ಟಾಗಿ ಮೋದಿ ಎಂಬ ಸುನಾಮಿಯನ್ನು ತಡೆಯಲು ಅಡ್ಡಗೋಡೆ ಕಟ್ಟುವ ಕಾರ್ಯ ಆರಂಭಿಸಿದ್ದಾರೆ.

ಈಗ ಪ್ರತಿಪಕ್ಷಗಳ ಗುರಿ ಅವರು ಗೆಲ್ಲುವುದಲ್ಲ ಮೋದಿ ರವರನ್ನು ಸೋಲಿಸುವುದು ಯಾಕೆಂದರೆ ಒಂದು ವೇಳೆ ಮೋದಿ ಗೆದ್ದರೆ ಎಷ್ಟೋ ಪ್ರಾದೇಶಿಕ ಪಕ್ಷಗಳು ಮುಂದಿನ ಚುನಾವಣೆಯ ಹೊತ್ತಿಗೆ ಅವನತಿ ಹೊಂದಿರುತ್ತವೆ. ಇನ್ನು ಉಳಿದವು ಅಳಿವಿನ ಅಂಚಿನಲ್ಲಿ ಸ್ಪರ್ಧೆ ಮಾಡಬೇಕಾಗುತ್ತದೆ. ದೇಶದ ಅತಿ ದೊಡ್ಡ ಪಕ್ಷ ಎನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು ಅವನತಿ ಹೊಂದಿದರು ಆಶ್ಚರ್ಯವೇನಿಲ್ಲ.

ಚುನಾವಣೆ ಹತ್ತಿರ ಬರುತ್ತಿದಂತೆ ಒಂದೊಂದು ಸಂಸ್ಥೆಯ ಸಮೀಕ್ಷೆಗಳು ಬಾರಿ ಕುತೂಹಲವನ್ನು ಉಂಟು ಮಾಡುತ್ತಿವೆ. ಅದರಂತೆಯೇ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೂ ಬಾರಿ ಚರ್ಚೆಗೆ ಗ್ರಾಸವಾಗಿದೆ. ಆ ಸಮಿತಿಯ ವರದಿ ಮತ್ತು ಕಳೆದೇ ಬಾರಿಯ ಅಂಕಿ ಅಂಶಗಳನ್ನು ತಿಳಿಯಲು ಕೆಳಗಡೆ ಓದಿ.

ಕಳೆದ 2014 ರ ಚುನಾವೆಯಲ್ಲಿ 245 ಸ್ನಾನಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆಯೂ ಸಮೀಕ್ಷೆಗೆ ವಿರುದ್ಧವಾಗಿ ಬಿಜೆಪಿ ಪಕ್ಷವು ಸರಳ ಬಹುಮತವನ್ನು ಪಡೆದಿತ್ತು. ಇನ್ನು ಈ ಬಾರಿಯ ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ತೃತೀಯ ರಂಗವು 122 ಸ್ಥಾನ ಗೆಲ್ಲಲಿದ್ದು, ಬಿಜೆಪಿ ಪಕ್ಷವು ಬರೋಬ್ಬರಿ  281 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಸಾದಿಸಲಿದೆ ಎಂದು ಭವಿಷ್ಯ ನುಡಿದಿದೆ. ಉಳಿದಂತೆ ೧೪೦ ಸ್ನಾನಗಳು ಪಕ್ಷೇತ್ತ್ರ ಅಥವಾ ಪ್ರಾದೇಶಿಕ ಪಕ್ಷಗಳು ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Post Author: Ravi Yadav