ತೃತೀಯ ರಂಗಕ್ಕೆ ಅಧಿಕೃತವಾಗಿ ಮೊದಲ ಶಾಕ್ ನೀಡಿದ ಕೇಜ್ರಿ: ಒಮ್ಮೆ ಓದಿ ಶೇರ್ ಮಾಡಿ

ತೃತೀಯ ರಂಗಕ್ಕೆ ಅಧಿಕೃತವಾಗಿ ಮೊದಲ ಶಾಕ್ ನೀಡಿದ ಕೇಜ್ರಿ: ಒಮ್ಮೆ ಓದಿ ಶೇರ್ ಮಾಡಿ

0

ಕೆಲವೇ ಕೆಲವು ವರ್ಷಗಳ ಹಿಂದೆ ದೇಶದ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಡೀ ಭಾರತದಲ್ಲಿ ಹೋರಾಡುತ್ತಿದೆ. ಕೇವಲ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಂಡಿರುವ ಕಾಂಗ್ರೆಸ್ ಮೋದಿ ಅಲೆಗೆ ಕೊಚ್ಚಿ ಹೋಗಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಮೋದಿರವರ ಗೆಲುವು ನಿಶ್ಚಿತವಾಗಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಅಳಿವು-ಉಳಿವಿನ ಪ್ರಶ್ನೆ ಆಗಿದ್ದರಿಂದ ಎಲ್ಲಾ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಿ ತನ್ನ ಕ್ಷೇತ್ರಗಳನ್ನು  ಪ್ರತಿಪಕ್ಷಗಳಿಗೆ ನೀಡಲು ನಿರ್ಧರಿಸಿ ಕೇವಲ 250 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ನಿರ್ಧಾರ ಮಾಡಿದ್ದರೂ  ಕಾಂಗ್ರೆಸ್ ಗೆಲುವು ಇನ್ನೂ  ಮರೀಚಿಕೆಯಾಗಿ ಉಳಿದಂತೆ ಕಾಣುತ್ತಿದೆ. ಈಗ ತೃತೀಯ ರಂಗದ ಮತ್ತೊಂದು ಪಕ್ಷ ಕಾಂಗ್ರೆಸ್ ಬೆಂಬಲದಿಂದ ಹೊರನಡೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಸ್ವತಹ ಕಾಂಗ್ರೆಸ್ ಪಕ್ಷವೇ ತನ್ನ ಕ್ಷೇತ್ರಗಳನ್ನು ಬೇರೆ ಪಕ್ಷಗಳಿಗೆ ಮೈತ್ರಿ ರೂಪದಲ್ಲಿ ಒಪ್ಪಿಸಿದರೂ ಪ್ರಾದೇಶಿಕ ಪಕ್ಷಗಳು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ತೋರುತ್ತಿವೆ. ಇದರ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿದ್ದರು  ಯಾರೂ ಅಧಿಕೃತವಾಗಿ ಇದನ್ನು ಘೋಷಿಸಿರಲಿಲ್ಲ. ಇದೇ ಮೊದಲ ಬಾರಿಗೆ ತೃತೀಯ ರಂಗದಿಂದ ಅಧಿಕೃತವಾಗಿ  ಮೊದಲ ಬಾರಿ  ಪಕ್ಷವೊಂದು ಹೊರನಡೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೂ ಮುನ್ನವೇ ದೊಡ್ಡ ಶಾಕ್ ಆಗಿದೆ.

ಹೌದು ಆಪ್ ಪಕ್ಷದ ನಾಯಕ ಮತ್ತು ದಿಲ್ಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ರವರು  ಅಧಿಕೃತವಾಗಿ  ತೃತೀಯ ರಂಗದಿಂದ ಹೊರನಡೆದಿದ್ದು ಚುನಾವಣೆಯಲ್ಲಿ ಅಥವಾ ಚುನಾವಣೆಯ ನಂತರ  ಮಹಾ ಮೈತ್ರಿಕೂಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಘೋಷಿಸಿದೆ. ಹರಿಯಾಣ ಚುನಾವಣೆಗಳಲ್ಲಿ ನಮ್ಮ ಪಕ್ಷವು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಹ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದು ಘೋಷಿಸಿದ್ದಾರೆ.

ತೃತೀಯ ರಂಗದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ ಇದು ಕೇವಲ ಬಿಜೆಪಿ ಪಕ್ಷವನ್ನು ಸೋಲಿಸುವುದಕ್ಕೆ ಮಾತ್ರ, ಈ ತೃತೀಯ ರಂಗ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ ಎಂಬ ಕಾರಣವನ್ನು ನೀಡಿರುವ ಕೇಜ್ರಿವಾಲ್ ಅವರು ಪಕ್ಷಕ್ಕಿಂತ ದೇಶ ಮುಖ್ಯ ಎಂಬುದನ್ನು ಅರಿತುಕೊಂಡಿದ್ದಾರೆ.