ಮೋದಿ ರವರ ಮತ್ತೊಂದು ಅಸ್ತ್ರಕ್ಕೆ ಕಾಂಗ್ರೆಸ್ ಸುಸ್ತು: ಮೋದಿ ನಿರ್ಧಾರಕ್ಕೆ ಬೆಂಬಲ

ಮೋದಿ ರವರ ಮತ್ತೊಂದು ಅಸ್ತ್ರಕ್ಕೆ ಕಾಂಗ್ರೆಸ್ ಸುಸ್ತು: ಮೋದಿ ನಿರ್ಧಾರಕ್ಕೆ ಬೆಂಬಲ

0

ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ, ಅದರಲ್ಲಿಯೂ ಅಕ್ರಮ ವಲಸಿಗರ ಪರ-ವಿರೋಧ ಹೇಳಿಕೆಗಳು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿಷಯದಲ್ಲಿ ಮೋದಿ ರವರ ಚಾಣಕ್ಯ ತನದ ಮುಂದೆ ಕಾಂಗ್ರೆಸ್ ಪಕ್ಷದ ಕಥೆ ಈಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಭಾರತದಲ್ಲಿ ಅಕ್ರಮ ವಲಸಿಗರನ್ನು ದೇಶಬಿಟ್ಟು ಓಡಿಸಬೇಕು ಎಂದು ಮೋದಿ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿರುವುದು ನಿಮಗೆ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದನ್ನು ಕಾಂಗ್ರೆಸ್ ಪಕ್ಷವು ವಿರೋಧಿಸುತ್ತ ಬಂದಿತ್ತು. ಆದರೆ ಈಗ ಅದೇ ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿದೆ.

ಮೋದಿ ಸರ್ಕಾರವು ಕೈಗೊಂಡ ನಿರ್ಧಾರವನ್ನು ಸಹಜವಾಗಿಯೇ ಕಾಂಗ್ರೆಸ್ ವಿರೋಧಿಸಿತ್ತು, ಆದರೆ ಯಾವಾಗ ಸ್ವತಃ ರಾಹುಲ್ ಗಾಂಧಿ ಅಸ್ಸಾಂ ಮತ್ತು ಬಂಗಾಳದ ನಾಯಕರೊಂದಿಗೆ ಮಾತನಾಡಲು ಆರಂಭಿಸಿದರೋ ಆಗ ಎನ್‌ಆರ್‌ಸಿ ವಿರೋಧಿಸಿದರೆ ರಾಜಕೀಯವಾಗಿ ಅತ್ಮಹತ್ಯೆ ಎಂಬ ಅಂಶ ಅರಿವಿಗೆ ಬಂತು.ಹೀಗಾಗಿ ತರಾತುರಿಯಲ್ಲಿ ರವಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದ ರಾಹುಲ್ ಗಾಂಧಿ ಸಭೆಗೆ ಅಸ್ಸಾಂನ ಸ್ಥಳೀಯ ನಾಯಕರನ್ನೆಲ್ಲಾ ಕರೆಸಿಕೊಂಡರು.

ಅಸ್ಸಾಂ ಮತ್ತು ಬಂಗಾಳದ ನಾಯಕರು ಎನ್‌ಆರ್‌ಸಿ ಅನ್ನು ಬೆಂಬಲಿಸದೇ ಹೋದರೆ ಆಗುವ ಅನಾಹುತಗಳನ್ನು ವಿವರಿಸಿದ ನಂತರವೇ ಕೊನೆಗೂ ಕಾಂಗ್ರೆಸ್ ನಾಲ್ಕೂವರೆ ವರ್ಷದಲ್ಲಿ ಮೊದಲ ಬಾರಿ ಮೋದಿ ಸರ್ಕಾರವನ್ನು ಬೆಂಬಲಿಸುವ ನಿರ್ಣಯ ತೆಗೆದುಕೊಳ್ಳಲೇಬೇಕಾಯಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬೇಕು ಎಂದು ಹೊರಟಿದ್ದ ಕಾಂಗ್ರೆಸ್, ಇವತ್ತು ಎನ್‌ಆರ್‌ಸಿ ವಿಷಯದಲ್ಲಿ ಮಮತಾರನ್ನೇ ಟೀಕಿಸುವ ಹಾಗಾಗಿದೆ.