ಮತ್ತೊಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡ ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ ಅವರು ಸಿಎಂ ಆಗಿ ಅಧಿಕಾರಕ್ಕೆ ಏರಿದ ಮೇಲೆ ಉತ್ತರ ಪ್ರದೇಶದ ಜನರ ಬದುಕೇ ಬದಲಾಗಿದೆ. ತಮ್ಮ ಹಲವಾರು  ಕಠಿಣ ನಿರ್ಧಾರಗಳ ಮೂಲಕ ಜನರು ಮೆಚ್ಚುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ .

ಕೆಲವು ದಿನಗಳ ಹಿಂದಷ್ಟೇ ಹಲವಾರು ಮುಸ್ಲಿಂ ಕಟ್ಟಡಗಳ ಮತ್ತು ಊರಿನ ಹೆಸರುಗಳನ್ನು ಬದಲಾಯಿಸಿದ ಯೋಗಿ ಆದಿತ್ಯನಾಥ್ ರವರು ಈಗ ಮತ್ತೊಂದು ಬಾರಿ ಅದೇ ರೀತಿಯ ನಿರ್ಧಾರ ಕೈಗೆತ್ತಿಕೊಂಡು ಹಿಂದುಗಳ ಮನಗೆದ್ದಿದ್ದಾರೆ.

ಈಗ ಲಕ್ನೋದ ಮೊಘಲ್ ಸರಾಯ್ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಿ ದೀನದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಈ ಪ್ರಸ್ತಾವನೆಗೆ ಈಗಾಗಲೇ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.ಈಗಾಗಲೇ ರೈಲ್ವೆ ನಿಲ್ದಾಣಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ.  ಇನ್ನು ಕೆಲವೇ ದಿನಗಳಲ್ಲಿ ನಾಮಕರಣ ಮಾಡಲಿದ್ದಾರೆ. ಈ ನಾಮಕರಣ ಪ್ರಕ್ರಿಯೆಗೆ ಅಮಿತ್ ಶಾ ಸೇರಿದಂತೆ ಹಲವಾರು ಬಿಜೆಪಿ ಗಣ್ಯರು ಭಾಗವಹಿಸಲಿದ್ದಾರೆ.

ಅಷ್ಟಕ್ಕೂ ಯಾರು ಈ ದೀನ ದಯಾಳ್ ?

ಬಿಜೆಪಿ ಪಕ್ಷದ ಮಾತೃ ಪಕ್ಷವೆಂದೇ ಹೆಸರು ಪಡೆದಿರುವ ಭಾರತೀಯ ಜನ ಸಂಘದ ಸಂಸ್ಥಾಪಕರೆ ಈ ದೀನದಯಾಳ್. ದುಃಖಕರವಾದ ಸಂಗತಿಯೇನೆಂದರೆ ದೀನ ದಯಾಳ್ ಉಪಾಧ್ಯಾಯ ಅವರು ಇದೇ ರೈಲ್ವೆ ನಿಲ್ದಾಣದ ಬಳಿಯೇ ಶವವಾಗಿ ಪತ್ತೆಯಾಗಿದ್ದರು.

Post Author: Ravi Yadav