ಇನ್ನು ಮುಂದೆ ಶತ್ರುರಾಷ್ಟ್ರಗಳ ಕ್ಷಿಪಣಿ ಆಕಾಶದಲ್ಲಿ ಉಡೀಸ್: ಸೇನೆಯ ತೆಕ್ಕೆಗೆ ಮತ್ತೊಂದು ಅಸ್ತ್ರ

ಭಾರತದ ಸ್ವದೇಶಿ ಬ್ಯಾಲೆಸ್ಡಿಕ್ ಮಿಸಾಯಿಲ್ ಡಿಪೆನ್ಸ್ ನ ಪರೀಕ್ಷೆ ಸಫಲವಾಗಿದೆ. ಗುರುವಾರ ಒಡಿಶಾದಲ್ಲಿ ವಿರೋಧಿಗಳ ಕ್ಷಿಪಣಿಯನ್ನು ಆಕಾಶದಲ್ಲಿ ೪೦ಕಿ.ಮೀ ಎತ್ತರದಲ್ಲಿ ಇರುವಾಗಲೇ ಅದನ್ನು ಹೊಡೆದುರುಳಿಸುವಂತಹ ಏರ್ ಡಿಫೆನ್ಸ್ ಸಿಸ್ಟಮ್ ಪರೀಕ್ಷೆ ಸಫಲವಾಗಿ ನಡೆಸಲಾಗಿದೆ.

ಸರಕಾರಿ ಅಧಿಕಾರಯ ಪ್ರಕಾರ ಈ ಪರೀಕ್ಷೆ ಸಂಪೂರ್ಣ ಸಫಲವಾಗಿದೆ. ಇಂಟರ್ ಸೆಪ್ಟರ್ ಮಿಸಾಯಿಲ್ ೧,೦೦೦ ಕಿ. ಮೀ ದೂರದಲ್ಲಿಯೇ ತನ್ನ ಗುರಿ ಸಿದ್ದಪಡಿಸಿತ್ತು. ಶೀಘ್ರದಲ್ಲೇ ಈ ಮಿಸಾಯಿಲ್ ಭಾರತೀಯ ಸೇನೆಗೆ ಸಿಗಲಿದೆ ಹಾಗೂ ಗಡಿ ಕಾಯಲು ತಯಾರು ಕೂಡಾ ಆಗಲಿದೆ. ಇದು ಬ್ಯಾಲೆಸ್ಟಿಕ್ ಮಿಸಾಯಿಲ್ ಡಿಫೆನ್ಸ್ ನ ಐದನೇ ಪರೀಕ್ಷೆ ಆಗಿದ್ದು ಎಲ್ಲಾ ಸಫಲವಾಗಿದೆ. ಕಳೆದ ವರ್ಷ ಪೆಬ್ರವರಿ, ಮಾರ್ಚ್ ಹಾಗೂ ಡಿಸೆಂಬರ್ ಅಲ್ಲಿ ಪರೀಕ್ಷೆ ಮಾಡಲಾಗಿತ್ತು. ಈ ವರ್ಷ ಜುಲಾಯಿಯಲ್ಲಿ ಮಾಡಲಾಗಿತ್ತು.

ಭಾರತ ಈ ಮಿಸಾಯಿಲ್ ಕವಚ ಅಭಿವೃದ್ಧಿ ಪಡಿಸುತ್ತಿದೆ. ಈ ಮಿಸಾಯಿಲ್ ಶತ್ರು ರಾಷ್ಟ್ರಗಳ ಯಾವುದೇ ಮಿಸಾಯಿಲ್ ಅನ್ನು ಆಗಸದಲ್ಲೇ ೨೦-೪೦ ಕಿ.ಮೀ ದೂರದಲ್ಲಿ ಹೊಡೆದುರುಳಿಸುತ್ತದೆ. ಅಮೇರಿಕಾ, ರಷ್ಯಾ ಹಾಗೂ ಇಸ್ರೇಲ್ ಬಿಟ್ಟರೆ ಭಾರತ ನಾಲ್ಕನೇ ದೇಶ ಇಂತಹ ಡಿಫೆನ್ಸ್ ಸಿಸ್ಟಮ್ ಹೊಂದಲಿದೆ.

ಟ್ರಾಕಿಂಗ್ ರಾಡರ್ ಮೂಲಕ ಯಾವುದೇ ಕ್ಷಿಪಣಿ ಅನ್ನು ಗುರುತಿಸುತ್ತದೆ ನಂತರ ಅದನ್ನು ನಾಶ ಮಾಡುವಂತಹ ಸಾಮಾರ್ಥ್ಯ ಈ ಏರ್ ಡಿಫೆನ್ಸ್ ಹೊಂದಿದೆ. ಈ ಮಿಸಾಯಿಲ್ ಬಂಗಾಳದ ಅಬ್ದುಲ್ ಕಲಾಂ ಮಿಸಾಯಿಲ್ ಕಾಂಪ್ಲೆಕ್ಸ್ ಅಲ್ಲಿ ಇಡಲಾಗಿದೆ. ಇಂದೊಂದು ನೇವಿಗೇಶನ್ ಅಸ್ತ್ರ ಆಗಿದ್ದು ಇದರಲ್ಲಿ ಒಂದು ಹೈಟೆಕ್ ಕಂಪ್ಯೂಟರ್, ಮೊಬೈಲ್ ಲಾಂಚರ್, ಎಲೆಕ್ಟ್ರೋ ಮೆಕಾನಿಕ್ ಆಕ್ಟಿವೇಡರ್,ಸುರಕ್ಷಿತ ಡಾಟಾ ಲಿಂಕ್ ಇಂಟರ್ಸ್ಪೆಕ್ಷನ್, ರಾಡರ್ ಅಳವಡಿಸಲಾಗಿದೆ.

bjpIndian armymodiNarendra modi
Comments (0)
Add Comment