ಬಿಜೆಪಿಯ ಆಂತರಿಕ ಕಲಹ ಫಿನಿಶ್: ಬಿಎಸ್ ವೈ ವಿರೋಧಿಗಳಿಗೆ ಶಾಕ್ ನೀಡಿದ ಚಾಣಕ್ಯ

ಬಿಜೆಪಿಯ ಆಂತರಿಕ ಕಲಹ ಫಿನಿಶ್: ಬಿಎಸ್ ವೈ ವಿರೋಧಿಗಳಿಗೆ ಶಾಕ್ ನೀಡಿದ ಚಾಣಕ್ಯ

0

2019ರ ಲೋಕಸಭಾ ಚುನಾವಣೆಯು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಕಾರಣ ಒಂದೇ ಹೆಸರು,  ಆ  ಹೆಸರನ್ನು ಕೇಳಿದರೆ ವಿರೋಧಿ ಪಾಳೆಯದಲ್ಲಿ ನಡುಕ ಉಂಟಾಗುತ್ತಿದೆ. ಪ್ರತಿದಿನವು ಆತನ ವರ್ಚಸ್ಸು ಹೆಚ್ಚುತ್ತಿದೆ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದಾರೆ ಅವರೇ ನಮ್ಮ ಪ್ರಧಾನ ಸೇವಕರಾದ ನರೇಂದ್ರ ಮೋದಿ.

2014ರಲ್ಲಿ ಪ್ರಧಾನಿ ಹುದ್ದೆಗೆ ಏರಲು ಒಂದೆಡೆ ಕಾರಣವಾಗಿದ್ದು ಮೋದಿ ರವರ ವರ್ಚಸ್ಸು ಆದರೆ  ಅದರ ಹಿಂದೆ ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಹೆಸರು ಪಡೆದಿರುವ ಅಮಿತ್ ಶಾ ತಂತ್ರಗಾರಿಕೆ ಇದೆಯೆಂಬುದನ್ನು   ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು.

ಚಾಣಕ್ಯನಿಗೆ ಎದುರಾಗುವ ಸವಾಲುಗಳು ಒಂದಲ್ಲ ಎರಡಲ್ಲ . ಪ್ರತಿಯೊಂದು ರಾಜ್ಯದ ಸೀಟು ಹಂಚಿಕೆ,  ನಾಯಕತ್ವ ಮತ್ತು ಆಂತರಿಕ ಕಲಹಗಳು ಇಂತಹ ಎಷ್ಟೋ ಸವಾಲುಗಳನ್ನು ಎದುರಿಸಲು ಚಾಣಕ್ಯ ರು ಸಿದ್ಧರಾಗಿರಬೇಕಾಗುತ್ತದೆ.

ಅದೇ ರೀತಿ ಕರ್ನಾಟಕದ ಬಿಜೆಪಿಯಲ್ಲಿಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಂತೆ ಆಂತರಿಕ ಕಲಹ ಒಂದು ಮನೆ ಮಾಡಿತ್ತು. ಕೆಲವರು ಬಿಎಸ್ವೈ ರವರ ನಾಯಕತ್ವದ ಬಗ್ಗೆ ಪ್ರಶ್ನಿಸಿ ರಾಜ್ಯಧ್ಯಕ್ಷ, ವಿರೋಧ ಪಕ್ಷ ನಾಯಕ   ಅಥವಾ ಲೋಕಸಭಾ ಚುನಾವಣೆ ಮೇಲುಸ್ತುವಾರಿ ಸೇರಿ ಎಲ್ಲಾ ಜವಾಬ್ದಾರಿಗಳನ್ನು ಬಿಎಸ್ವೈ ರವರಿಗೆ ನೀಡಿದರೆ  ನಿರ್ವಹಿಸಲು  ಕಷ್ಟವಾಗುತ್ತದೆ ಎಂಬ ಕಷ್ಟವಾಗುತ್ತದೆ ಎಂಬ ಅನಿಸಿಕೆಯನ್ನು ಪತ್ರದ ಮೂಲಕ ಹೊರತಂದಿದ್ದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯಧ್ಯಕ್ಷರ  ಪಾತ್ರ ಬಹಳ ಮುಖ್ಯವಾಗಿರುತ್ತದೆ. ಬಿಎಸ್ ವೈ ರವರು  ಉತ್ಸಾಹದಿಂದ ಚುನಾವಣ ಕಾರ್ಯಕ್ರಮಗಳಲ್ಲಿ  ಪಾಲ್ಗೊಳ್ಳುವುದು ಕಷ್ಟವಾಗುತ್ತದೆ. ಈ ಕಾರಣದಿಂದ ರಾಜ್ಯಾಧ್ಯಕ್ಷ ಹುದ್ದೆಯನ್ನು ರಾಜ್ಯದ ಇತರ ಯುವ ಮುಖಂಡರಿಗೆ  ನೀಡಿದ್ದಲ್ಲಿ ಮತ್ತು ಸೀಟು ಹಂಚಿಕೆ  ಇನ್ನಿತರ ಲೋಕಸಭಾ ಚುನಾವಣೆಯ ಮೇಲುಸ್ತುವಾರಿಯನ್ನು ಸ್ವತಹ ಬಿಜೆಪಿ ಹೈಕಮಾಂಡ್ನಿ ರ್ವಹಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಆದರೆ ಬಿಜೆಪಿ ಹೈಕಮಾಂಡಿಗೆ ಬಿಎಸ್ ವೈ ರವರ ಹೋರಾಟದ ಸ್ವಭಾವ ಮತ್ತು ರಾಜ್ಯದಲ್ಲಿರುವ ವರ್ಚಸ್ಸು  ತಿಳಿದು ಬಂದಂತಿದೆ. ಅದಕ್ಕಾಗಿಯೇ ಚಾಣಕ್ಯ ರವರು ಆಂತರಿಕ ಕಲಹಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.

 

ಬಿಜೆಪಿ ಹೈಕಮಾಂಡ್ ಬಿಎಸ್ ವೈ ರವರನ್ನು ನಂಬಿ ಇಡೀ ರಾಜ್ಯದ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಬಿಎಸ್ ವೈ ರವರ ಹೆಗಲಿಗೆ ಹೇರಿಸುವುದಲ್ಲದೆ ಸ್ವತಹ ಚಾಣಕ್ಯ ರವರೇ ರಾಜ್ಯಕ್ಕೆ ಭೇಟಿ ನೀಡದಿರಲು ನಿರ್ಧರಿಸಿದ್ದಾರೆ. ಪ್ರತಿಯೊಂದು ಜವಾಬ್ದಾರಿಯನ್ನು ಬಿಎಸ್ ವೈ ರವರ ಹೆಗಲಿಗೇರಿಸಿ ತಮ್ಮ ರಾಜ್ಯ ಭೇಟಿಯನ್ನು ಸಹ ರದ್ದುಗೊಳಿಸಿ ಕೊಂಡಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿರುವ ಬಿಜೆಪಿಯ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.