ಚೀನಾಕ್ಕೆ ನೀಡದ ಮಾನ್ಯತೆ ಭಾರತಕ್ಕೆ ನೀಡಿ ಬಹುದೊಡ್ಡ ಗೌರವ ನೀಡಿದ ಅಮೆರಿಕ

ಚೀನಾಕ್ಕೆ ನೀಡದ ಮಾನ್ಯತೆ ಭಾರತಕ್ಕೆ ನೀಡಿ ಬಹುದೊಡ್ಡ ಗೌರವ ನೀಡಿದ ಅಮೆರಿಕ

0

ನರೇಂದ್ರ ಮೋದಿ ರವರು ಪ್ರಧಾನಿಯಾದ ನಂತರ ಭಾರತದ ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಚ್ಚಾಗಿದೆ. ಇತ್ತ ನಮ್ಮನ್ನು ನೋಡಿ ಚೀನಾದೇಶವು ಉರಿದು ಬೀಳುತ್ತಿದ್ದರೆ ಜಗತ್ತಿನ ಪ್ರಬಲ ರಾಷ್ಟ್ರಗಳು ನಮ್ಮನ್ನು ನೋಡಿ ನಮ್ಮ ಜೊತೆ ಸ್ನೇಹ ಬೆಳೆಸಲು ಕಾದು ಕುಳಿತಿವೆ. ಈಗ ಮತ್ತೊಮ್ಮೆ ಭಾರತದ ಹಿರಿಮೆ ಹೆಚ್ಚಿಸುವಂತಹ ಸ್ಥಾನಮಾನವನ್ನು ಅಮೆರಿಕ ನಮಗೆ ನೀಡಿದೆ. ಇದೆಲ್ಲಾ ಮೋದಿರವರ ರಾಜತಾಂತ್ರಿಕತೆಯ  ಫಲ.

ಅಷ್ಟಕ್ಕೂ ವಿಷಯದ ಮೂಲವೇನು?

ವಿಶ್ವದ ಪ್ರತಿಯೊಂದು ರಾಷ್ಟ್ರವು ಜಗತ್ತಿನ ದೊಡ್ಡಣ್ಣ ಜೊತೆ ವ್ಯಾಪಾರ-ವ್ಯವಹಾರಗಳನ್ನು ನಡೆಸಬೇಕು ಎಂದು ಆಶಿಸುತ್ತವೆ. ಅದರಲ್ಲಿಯೂ ಏಷ್ಯಾದ ಅದರಲ್ಲಿಯೂ ಏಷ್ಯಾದ ಜಗತ್ತಿನ ದೊಡ್ಡಣ್ಣ ನ ಜೊತೆ ಕೈಜೋಡಿಸಲು ಸಾಲಿನಲ್ಲಿ ನಿಂತಿರುತ್ತವೆ. ಕಾರಣ ಚೀನಾ ಎಂದರೆ ತಪ್ಪಾಗಲಾರದು. ಮೊದಲಿನಿಂದಲೂ ನಾನು ಬೆಳೆದರೆ ಸಾಕು ಎಂಬುವ ನೀತಿಯನ್ನು ಅನುಸರಿಸಿಕೊಂಡು ಬಂದಿರುವ ಚೀನಾವು ಯಾವುದೇ ದೇಶಕ್ಕೆ ಬಹಳ ಸುಲಭವಾಗಿ ಬೆಂಬಲ ನೀಡುವುದಾಗಲಿ ಅಥವಾ ಸಹಾಯ ಮಾಡುವುದಾಗಲಿ ಮಾಡುವುದಿಲ್ಲ  ಬೆಳೆಯಲು ಸಹ ಬಿಡುವುದಿಲ್ಲ.

ಇಂತಹ ಪರಿಸ್ಥಿತಿಯನ್ನು ಎದುರಿಸಲು ಮತ್ತು ದೇಶವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ದೇಶವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶಕ್ಕಾಗಿ ಕಾದು ಕುಳಿತಿರುತ್ತದೆ. ಆದರೆ ಭಾರತದ ಪಾಲಿಗೆ ಅದೃಷ್ಟ ತಾನೇ  ಹುಡುಕಿಕೊಂಡು ಬಂದಿದೆ.ಸ್ವತಹ ಅಮೆರಿಕಾ ದೇಶವೇ ವ್ಯಾಪಾರ ದೃಡೀಕರಣ ಮಾನ್ಯತೆಯನ್ನು ಭಾರತಕ್ಕೆ ನೀಡಲು ನಿರ್ಧರಿಸಿದೆ.

ಅಷ್ಟಕ್ಕೂ ಈ ವ್ಯಾಪಾರ ದೃಡೀಕರಣ ದಿಂದ ಭಾರತಕ್ಕೆ ಆಗುವ ಲಾಭವಾದರೂ ಏನು?

ಈ ಮಾನ್ಯತೆಯಿಂದ ಅಮೇರಿಕಾ ದೇಶದ ತಂತ್ರಜ್ಞಾನಗಳು, ತಂತ್ರಜ್ಞಾನದ ಉತ್ಪನ್ನಗಳು  ಪ್ರಮುಖವಾಗಿ  ರಕ್ಷಣೆ ಮತ್ತು ಬಾಹ್ಯಾಕಾಶ  ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ಳಲು  ಸುಲಭವಾಗುತ್ತದೆ.  ವಿಶ್ವದಲ್ಲೆಡೆ 37 ರಾಷ್ಟ್ರಗಳು ಈ ದೃಢೀಕರಣ ಪತ್ರಗಳನ್ನು ಒಂದು ಹೊಂದಿದ್ದರೂ ಏಷ್ಯಾದಲ್ಲಿ ಜಪಾನ್ ದಕ್ಷಿಣ ಕೊರಿಯಾ ಮತ್ತು ಭಾರತ ಮಾತ್ರ ಹೊಂದಿವೆ. ಚೀನಾ ಈ ದೃಢೀಕರಣವನ್ನು ಪಡೆಯಲು ಭಾರೀ ಪ್ರಯತ್ನ ಮಾಡಿತ್ತಾದರೂ ದೇಶದ ದೊಡ್ಡಣ್ಣ ಇದಕ್ಕೆ ಸೊಪ್ಪು ಹಾಕದೆ ಭಾರತಕ್ಕೆ ಮಾನ್ಯತೆ ನೀಡಿರುವುದು  ಚೀನಾಕ್ಕೆ ಭಾರಿ ಮುಖಭಂಗವನ್ನುಂಟು ಮಾಡಿದೆ.

ಇಷ್ಟು ನಡೆದರೂ ನನಗೆ ಒಂದು ಅರ್ಥವಾಗುತ್ತಿಲ್ಲ ಮೀಡಿಯಾಗಳು ಎಲ್ಲಿವೆ?