ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮೋದಿ, ಧೋನಿ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತೆ?

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದಾದ್ಯಂತ ದೇಶದ ಹೆಸರು ಗಗನಕ್ಕೇರಿಸುತ್ತಿದ್ದಾರೆ. ವಿದೇಶಿ ಪ್ರವಾಸ ಹಾಗೂ ರಾಜತಾಂತ್ರಿಕತೆಯಿಂದ ದೇಶದ ಸ್ಥಾನಮಾನ ವೃದ್ಧಿಸಿದೆ. ಮೋದಿಯವರ ಜನಪ್ರಿಯತೆ ಇಡೀ ವಿಶ್ವದಲ್ಲಿ ಪಸರಿಸಿದೆ.

ಅವರ ಭಾಷಣಕ್ಕೆ ಇಡೀ ವಿಶ್ವ ತಲೆದೂಗುತ್ತಿದೆ. ಎಲ್ಲಾ ಸಮೀಕ್ಷೆಯಲ್ಲೂ ಮೋದಿ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ. ಇದರ ನಡುವೆ ಇತ್ತೀಚಿಗೆ ಬಂದ ಸಮೀಕ್ಷೆ ವಿಪಕ್ಷಗಳ ಹೊಟ್ಟೆ ಉರಿಸುವುದು ಖಚಿತ.

ವಿಶ್ವ ಮಟ್ಟದಲ್ಲಿ ನಡೆಯುವ ಎಲ್ಲಾ ಸಮೀಕ್ಷೆಯಲ್ಲಿ ಮೋದಿ ಎತ್ತರದ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ YOU GOV ಎಂಬ ಹೆಸರಿನ ಅಂತರಾಷ್ಟ್ರೀಯ ಸಂಸ್ಥೆ ಒಂದು ಸಮೀಕ್ಷೆ ನಡೆಸಿತು. ವಿಶ್ವದಾದ್ಯಂತ ಅತೀ ಹೆಚ್ಚು ಅಚ್ಚುಮೆಚ್ಚಿನ ನಾಯಕ/ವ್ಯಕ್ತಿ ಯಾರು ಎಂಬುದು ಇದರ ಫಲಿತಾಂಶ ಕೂಡಾ ಮುಂಚಿನ ಸಮೀಕ್ಷೆ ಪ್ರಕಾರವೇ ಬಂದಿದೆ.

ಈ ಸರ್ವೆ ಪ್ರಕಾರ ಮೋದಿ ಅತ್ಯಂತ ಹೆಚ್ಚು ಪ್ರಶಂಸೆ ಪಡೆದಿರುವ ವ್ಯಕ್ತಿಯಾಗಿದ್ದಾರೆ. ಅದೇ ರೀತಿ ಅತಿ ಅಚ್ಚುಮೆಚ್ಚಿನ ಮಹಿಳೆಯಾಗಿ ಭಾರತದ ಮೊದಲ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಆಯ್ಕೆಯಾಗಿದ್ದಾರೆ.

 

cricketmodiMS DhoniNarendra modi
Comments (0)
Add Comment