ಔರಂಗಜೇಬ್ ಹತ್ಯೆಗೆ ಪ್ರತೀಕಾರ: ತೀರಿಸಿಕೊಳ್ಳಲು ಪಣತೊಟ್ಟು ನಿಂತ ಸ್ನೇಹಿತರು

ಈ ಲೇಖನವನ್ನು ನೀವು ಓದಿದ ನಂತರ ನಿಮಗೆ ಭಾರತೀಯರ ನಿಜವಾದ ಸ್ನೇಹ ಸಂಬಂಧದ ಬೆಲೆ ಮತ್ತು ದೇಶದ ಮೇಲಿನ ಅಪಾರ ಗೌರವ ಏನು ಎಂಬುದು ತಿಳಿದಿತ್ತು ನಿಮಗೆ ತಿಳಿಯುತ್ತದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಕಳೆದ ಕೆಲವು ದಿನಗಳ ಹಿಂದೆ ಈದ್ ಆಚರಣೆಗಾಗಿ ಔರಂಗಜೇಬ್ ಎಂಬ ಹೆಮ್ಮೆಯ ಭಾರತೀಯ ಸೈನಿಕ ತನ್ನ ಸ್ವಗ್ರಾಮಕ್ಕೆ ತೆರಳಿದ್ದಾಗ  ಆಯುಧ ವಿಲ್ಲದ ಸಂದರ್ಭವನ್ನು ಕಾದುಕುಳಿತಿದ್ದ ಉಗ್ರರು ಅಮಾನುಷವಾಗಿ  ಕೊಂದಿದ್ದು ದೇಶದೆಲ್ಲೆಡೆ  ಭಾರೀ ಸಂಚಲನವನ್ನು ಉಂಟು ಮಾಡಿತ್ತು. ಉಗ್ರರು ತಾವು ಮತ್ತೊಮ್ಮೆ ಕುತಂತ್ರಿ ನಾಯಿಗಳು ಎಂಬುದನ್ನು ಸಾಬೀತುಪಡಿಸಿದ್ದವು. ಈ ದಾರುಣ ಘಟನೆಗೆ ಇಡೀ ದೇಶವೇ ಒಂದಾಗಿ ಕಂಬನಿ ಮಿಡಿದಿತ್ತು. ತಮ್ಮನ್ನು ಅಪಹರಿಸಿ ಎಷ್ಟೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ಗೊಳಿಸಿದರು  ಎದೆಗುಂದದೆ ವೀರಮರಣವನ್ನು ಅಪ್ಪಿದ ಔರಂಗಜೇಬ್ ಅವರ ಸಾಹಸ ಮತ್ತು ಧೈರ್ಯ ಇಡೀ ದೇಶದ ಎಲ್ಲೆಡೆ ವ್ಯಾಪಿಸಿತು.

ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಸೇನೆಯೂ ಹಲವಾರು ಉಗ್ರರನ್ನು ಕೊಂಡಿತ್ತು, ಆದರೆ ಉಗ್ರರನ್ನು  ಸಂಪೂರ್ಣ ದಮನ ಮಾಡಲು ಈಗ ಒಂದು ಹೊಸ ಗುಂಪು ಸಿದ್ಧವಾಗಿದೆ. ಅವರು ಯಾರು ಏನು ಎಂಬುದರ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಔರಂಗಜೇಬ್ ತಮ್ಮ ದೇಶಕ್ಕೆ ಒಬ್ಬ ಒಳ್ಳೆಯ ಸೈನಿಕನಾಗಿ ಸೇವೆ ಸಲ್ಲಿಸಿದರು, ಒಳ್ಳೆ ಮಗನಾಗಿ ತಮ್ಮ ಪೋಷಕರಿಗೆ ಗೌರವವನ್ನು ತಂದುಕೊಟ್ಟಿದ್ದರು,  ಅದರಂತೆಯೇ ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದರು ಎಂಬುದಕ್ಕೆ ನಿದರ್ಶನವೇ ಈ ಔರಂಗಜೇಬ್ ರವರ ಸ್ನೇಹಿತರ ನಿರ್ಧಾರ.

ಔರಂಗಜೇಬ್ ರವರ 50 ಸ್ನೇಹಿತರು ಸೌದಿ ಅರೇಬಿಯಾದಲ್ಲಿ ಮಗಿದ್ದ ಉತ್ತಮ ಉದ್ಯೋಗವನ್ನು ತೊರೆದು ತಮ್ಮ ಹುಟ್ಟೂರಾದ ಸಲಾನಿಗೆ ಮರಳಿದ್ದು, ಪೊಲೀಸ್ ಇಲಾಖೆ ಮತ್ತು ಸೇನೆಯನ್ನು ಇರಲು ಇಚ್ಛಿಸಿದ್ದಾರೆ.   ಈ ಮೂಲಕ ಸ್ನೇಹಿತನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಈ 50 ಮಂದಿಯಲ್ಲಿ ಮಹಮ್ಮದ್ ಕಿರಾಮತ್ ಹಾಗೂ ಮಹಮ್ಮದ್ ತಾಜ್ ಎಂಬುವರೂ ಸೇರಿದ್ದಾರೆ. ತಮ್ಮ ಸಹೋದರ ಔರಂಗಜೇಬ್ ಹತ್ಯೆಯ ಬಗ್ಗೆ ತಿಳಿದ ಕೂಡಲೇ ಹೇಗಾದರೂ ಕೆಲಸಕ್ಕೆ ರಾಜೀನಾಮೆ ನೀಡಿ ಅದೇ ದಿನ ಮರಳಲು ನಿರ್ಧರಿಸಿದ್ದೆವು. ಇದು ಕಷ್ಟವಾಗಿದ್ದರೂ ಮಾಡಿದೆವು. ನನ್ನೊಂದಿಗೆ ಗ್ರಾಮದ 50 ಮಂದಿ ಯುವಕರು ವಾಪಸ್ ಬಂದಿದ್ದಾರೆ. ಔರಂಗಜೇಬ್ ಹತ್ಯೆಗೆ ಪ್ರತಿಕಾರವೇ ನಮ್ಮ ಗುರಿ ಎಂದು ಮಹಮ್ಮದ್ ಕಿರಾಮಿತ್ ಹೇಳುತ್ತಾರೆ.

Indian army
Comments (0)
Add Comment