ಮೋದಿ ಹಾದಿಯಲ್ಲಿ ಮತ್ತೊಂದು ಸಿಂಹ: ಭ್ರಷ್ಟಾಚಾರ ತಡೆಗೆ ತೊಡೆತಟ್ಟಿ ನಿಂತ ಯೋಗಿ

ಮೋದಿ ಹಾದಿಯಲ್ಲಿ ಮತ್ತೊಂದು ಸಿಂಹ: ಭ್ರಷ್ಟಾಚಾರ ತಡೆಗೆ ತೊಡೆತಟ್ಟಿ ನಿಂತ ಯೋಗಿ

0

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಬಂದ ಮೇಲೆ,ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ  ಭ್ರಷ್ಟಾಚಾರ ಕಡಿಮೆಯಾಗಿದೆ. ಭಾರತದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸದಾ ಒಂದಲ್ಲ ಒಂದು ಯೋಜನೆಗಳಿಂದ ಮೋದಿ ರವರು ಭ್ರಷ್ಟಾಚಾರಿಗಳ ನಿದ್ದೆ ಗೆಡಿಸುತ್ತಾರೆ. ಆದರೆ ಅಖಂಡ ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಒಬ್ಬರಿಂದ ಸಾಧ್ಯವಿಲ್ಲ ಮತ್ತು ಐದು ವರ್ಷಗಳು ಸಾಕಾಗುವುದಿಲ್ಲ.

ಹಲವು ರಾಜ್ಯಗಳು ಮೋದಿ ರವರ ಯೋಜನೆಗಳನ್ನು ಬಿಟ್ಟು ಬೇರೆ ಯಾವುದೇ ಯೋಜನೆಗಳ ಮೂಲಕ   ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿ ಮೋದಿಯೊಬ್ಬರೇ ನಾಲ್ಕು ವರ್ಷಗಳಿಂದ ಹೋರಾಡುತ್ತಿದ್ದಾರೆ.ಆದರೆ ಈಗ ಮೋದಿ ಹಾದಿಯಲ್ಲಿ ಮತ್ತೊಂದು ಸಿಂಹ ಹೆಜ್ಜೆ ಇಟ್ಟಿದೆ.

ಈ ಹಿಂದೆಯೂ ಯೋಗಿಜೀ ರವರು ಅದೇಷ್ಟೋ ಕಟ್ಟಿನ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟೇ ಅಲ್ಲ ಕನಸಿನಲ್ಲೂ ಊಹಿಸದ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಿ, ನಿವಾರಿಸಿ  ಉತ್ತರ ಪ್ರದೇಶದ ಜನತೆಗೆ ತಮ್ಮ ಸರ್ಕಾರದ ಮೇಲಿದ್ದ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು? 

ಬರೋಬ್ಬರಿ 22 ಕೋಟಿ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಶೇಕಡ 67 ರಷ್ಟು ಜನ ತಮ್ಮ ಬದುಕನ್ನು ನಿರ್ವಹಿಸಲು ಭೂಮಿತಾಯಿಯನ್ನು ನಂಬಿದ್ದಾರೆ. ಆದರೆ ಭ್ರಷ್ಟಾಚಾರಿಗಳ ಕಣ್ಣು ಭೂಮಿಗಳ ಮೇಲೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಯಾವುದೇ ಹೆಚ್ಚಾದರೂ ಭೂಮಿ ಹೆಚ್ಚಾಗಲು ಸಾಧ್ಯವಿಲ್ಲ  ಹಾಗಾಗಿ ಬ್ರಷ್ಟಾಚಾರಿಗಳು ತಮ್ಮ ಹಣವನ್ನು ಭೂಮಿಯ ಮೇಲೆ ಬಂಡವಾಳವಾಗಿ ಹೂಡುತ್ತಾರೆ.

ಇದನ್ನು ತಡೆಗಟ್ಟಲು ಭೂಮಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಬ್ಲಾಕ್ ಚೈನ್ ಎಂಬ   ತಂತ್ರಜ್ಞಾನದಿಂದ ಪ್ರತಿಯೊಂದು ಭೂಮಿಯು ಯಾರಿಗೆ ಸೇರಿದ್ದು ಮತ್ತು ಆ ಜಮೀನಿನ ಇಂದಿನ ಸ್ಥಿತಿಗತಿಗಳನ್ನು ಕ್ಷಣಗಳಲ್ಲಿ ಹೊರ ತೆಗೆಯಬಹುದು.

ಇನ್ನು ಕೆಲವೇ ದಿನಗಳಲ್ಲಿ  ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉತ್ತರಪ್ರದೇಶ ರಾಜ್ಯವು ಈ ತಂತ್ರಜ್ಞಾನವನ್ನು ಬಳಸಿಕೊಂಡು ಮೊಟ್ಟಮೊದಲ ರಾಜ್ಯವಾಗಲಿದೆ.ಇಂತಹ ಕಠಿಣ ಕಾನೂನು ಕರ್ನಾಟಕದಲ್ಲಿಯೂ ಬಂದರೆ ಎಷ್ಟು ಚಂದ ಅಲ್ಲವೇ. ಯೋಗಿ ಆದಿತ್ಯನಾಥ್ ರವರ ಈ ನಡೆಗೆ ನಿಮ್ಮ ಸಹಮತ ವಿದ್ದಲ್ಲಿ ಶೇರ್ ಮಾಡಿ.