ಏನು 2049 ಭಾರತದ ಪ್ರಧಾನಿ ಕುರ್ಚಿ ಬುಕ್ ಆಗಿದೆಯಾ? ಅಲ್ಲಿವರೆಗೂ ನರೇಂದ್ರ ಮೋದಿ ನವರೆ ಪ್ರಧಾನಿಯಾಗಿ ಇರುತ್ತಾರ? ನರೇಂದ್ರ ಮೋದಿಯಲ್ಲ ಆದರೆ ಕುರ್ಚಿ ಅಂತ ಬುಕ್ ಆಗಿದೆ ಎನ್ನುತ್ತಿದ್ದಾರೆ. ವಿಷಯದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಒಮ್ಮೆ ಓದಿ
ಅದು 2014 ರ ಲೋಕಸಭಾ ಚುನಾವಣೆಯ ದಿನಗಳು, ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದವರು ತನ್ನ ಬಾಲ್ಯದಲ್ಲಿ ಟೀ ಮಾರುತ್ತಿದ್ದ ಯುವಕ, ಆದರೆ ಈತನಿಗಿದ್ದ ಜನಬೆಂಬಲವೇ ಈತನನ್ನು ಪ್ರಧಾನಿ ಮಾಡಿತ್ತು. ಅವರೇ ಇಂದಿನ ಪ್ರಧಾನ ಸೇವಕರಾದ ನರೇಂದ್ರ ಮೋದಿಜಿ. ನರೇಂದ್ರ ಮೋದಿ ರವರು ಗದ್ದುಗೆ ಏರಿದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ.
ಆದರೆ ಮೋದಿ ರವರ ನಂತರ ಯಾರು ಗದ್ದುಗೆ ಇರುತ್ತಾರೆ ಎಂಬ ಪ್ರಶ್ನೆಯೂ ಸಹ ನಿಮಗೆ ಬಂದಿರುತ್ತದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂದಿನ 2019 ರ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರೇ ಚುನಾವಣೆ ಕಣ ಇಳಿಯಲಿದ್ದಾರೆ.
ಆದರೆ ಇನ್ನು ಮೋದಿ ಎಷ್ಟು ವರ್ಷಗಳ ಕಾಲ ಪ್ರಧಾನಿ ಯಾಗಿರಬಹುದು? ನರೇಂದ್ರ ಮೋದಿ ರವರ ಜನಬೆಂಬಲವನ್ನು ನೋಡಿದರೆ ಖಂಡಿತ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವರೆಗೂ ಅವರೇ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಕೆಲವು ರಾಜಕೀಯ ಪಂಡಿತರ ಪ್ರಕಾರ ಮುಂದಿನ ಚುನಾವಣೆಗೆ ಮೋದಿರವರ ಕೊನೆಯ ಚುನಾವಣೆ. ಹಾಗಿದ್ದರೆ ಭಾರತವನ್ನು ಮೋದಿ ರವರ ನಂತರ ಯಾರು ಮುನ್ನಡೆಸಲಿದ್ದಾರೆ? ಜನರ ಒಲವು ಯಾರ ಕಡೆ ಇದೆ? ತಿಳಿಯಲು ಕೆಳಗಡೆ ಓದಿ.
ಹೀಗೊಂದು ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು ಅದರ ಸಂಪೂರ್ಣ ವಿವರವನ್ನು ಕೆಳಗೆ ತಿಳಿಸಿದ್ದೇವೆ.
ಜನರ ಅಭಿಪ್ರಾಯದ ಪ್ರಕಾರ ಮೋದಿ ರವರು 2024 ವರೆಗೂ ಅಂದರೆ ಮತ್ತೊಮ್ಮೆ ಐದು ವರ್ಷಗಳ ಕಾಲ ಅಧಿಕಾರ ವನ್ನು ನಡೆಸಲಿದ್ದಾರೆ. ಮೋದಿ ರವರ ನಂತರ ಉತ್ತರ ಪ್ರದೇಶದ ಇಂದಿನ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ರವರು ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದು ಬರೋಬ್ಬರಿ ಹದಿನೈದು ವರ್ಷಗಳ ಕಾಲ ಇವರು ಭಾರತವನ್ನು ಮುನ್ನಡೆಸಲಿದ್ದಾರೆ.
ಅಲ್ಲಿಗೆ 2039 ವರೆಗೂ ದೇಶದ ಪ್ರಧಾನಿ ಯೋಗಿ ಆದಿತ್ಯನಾಥ್ ರವರು ಆಗಿರಲಿ ದ್ದಾರೆ ಎಂದು ಜನ ಹೇಳುತ್ತಿದ್ದಾರೆ, ಇವರ ನಂತರ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಕರ್ನಾಟಕದ ಸಚಿವರಾದ ಅನಂತ್ ಕುಮಾರ್ ಹೆಗಡೆ ರವರನ್ನು ಬಿಜೆಪಿ ಪಕ್ಷವು ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕು. ಇದೇ ನಡೆದಲ್ಲಿ ಇವರು ಹತ್ತು ವರ್ಷಗಳ ಕಾಲ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಈ ಚರ್ಚೆಯನ್ನು ನೋಡಿದಿರಲ್ಲ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ, ನಿಮ್ಮ ಪ್ರಕಾರ ಯಾರು ಮೋದಿ ರವರ ಉತ್ತರಾಧಿಕಾರಿ ಆಗಲಿದ್ದಾರೆ ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡಿ.