ಸ್ಪೋಟಕ ಮಾಹಿತಿ ಬಹಿರಂಗ: ಮೋದಿ ವಿರೋಧಿಗಳು ಅವಿತು ಕುಳಿತುಕೊಂಡಿದ್ದೀರಾ?

ನಮ್ಮ ದೇಶದ ಪ್ರಧಾನ ಸೇವಕರಾದ ಮೋದಿ ರವರನ್ನು ಪ್ರತಿಪಕ್ಷಗಳು ಟೀಕಿಸುವುದಕ್ಕೆ ಸಿಗುವ ಮೊದಲ ಅಸ್ತ್ರವೇ ವಿದೇಶಿ ಪ್ರವಾಸ, ಆದರೆ ಈಗ ವಿರೋಧ ಪಕ್ಷಗಳು ಹೊಸ ವಿಧಾನವನ್ನು ಹುಡುಕಿ ಕೊಳ್ಳದೆ ಬೇರೆ ದಾರಿ ಇಲ್ಲ. ಯಾಕೆಂದರೆ ಎಕನಾಮಿಕ್ ಟೈಮ್ಸ್ ಸ್ಪೋಟಕ ಮಾಹಿತಿ ಒಂದನ್ನು ಬಹಿರಂಗಗೊಳಿಸಿದೆ ಈ ಮಾಹಿತಿಯಲ್ಲಿ ಮಾಜಿ ಪ್ರಧಾನಿಯಾದ ಮನಮೋಹನ್ ಸಿಂಗ್ ರವರ  ವಿದೇಶಿ ಪ್ರವಾಸದ ಖರ್ಚು ವೆಚ್ಚಗಳನ್ನು ಮೋದಿರವರ ವಿದೇಶಿ ಪ್ರವಾಸದ ಖರ್ಚುವೆಚ್ಚಗಳ ಜೊತೆ ಹೋಲಿಕೆ ಮಾಡಲಾಗಿದೆ. ಆದರೂ ಮೋದಿ ರವರ ವಿದೇಶಿ ಪ್ರವಾಸಗಳಿಗೆ ಇಷ್ಟೊಂದು ಟೀಕೆಗಳು ಉಂಟಾಗಲು ಕಾರಣವೇನು ಎಂಬುದನ್ನು ನಾವು ವಿಶ್ಲೇಷಿಸಿದ್ದೇವೆ ದಯವಿಟ್ಟು ಒಮ್ಮೆ ಓದಿ ಪ್ರತಿಯೊಬ್ಬರಿಗೂ ಶೇರ್ ಮಾಡಿ ಸತ್ಯದ ಅರಿವು ಮೂಡಿಸಿ.

ಮೋದಿ ರವರ ವಿದೇಶಿ ಪ್ರವಾಸಗಳನ್ನು ಟೀಕೆಗಳಿಗೆ ಕಾರಣವಾದರೂ ಏನು?

ಭಾರತದ ಹಿಂದಿನ ಪ್ರಧಾನಿಗಳು ಯಾರು ಸಹ ಮೋದಿ ರವರ ಜನಪ್ರಿಯತೆಯನ್ನು ಹೊಂದಿರಲಿಲ್ಲ, ಮೋದಿ ನವರು ಏನೇ ಮಾಡಿದರೂ ಸುದ್ದಿಯಾಗುತ್ತದೆ ಕೇವಲ ಒಂದು ಆಟೋಗ್ರಾಫ್ ನಿಂದ ಮೋದಿ ರವರು ಒಂದು ಹುಡುಗಿಯ ಭವಿಷ್ಯವನ್ನೇ ತಿರುಗಿಸಿ ಬಿಟ್ಟಿದ್ದರು.

ಇದೇ ರೀತಿ ಮೋದಿ ಅವರು ಏನು ಮಾಡಿದರೂ ಬಹಳ ದೊಡ್ಡ ಸುದ್ದಿಯಾಗುತ್ತದೆ, ಮಾಧ್ಯಮಗಳಲ್ಲಿ ಕಳೆದ ಪ್ರಧಾನಿ ಗಳಿಗಿಂತ ಹೆಚ್ಚು ಕಾಣಸಿಗುವುದು ಮೋದಿಯವರೇ. ಅದರಲ್ಲಿಯೂ ವಿದೇಶಿ ಪ್ರವಾಸ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಮೋದಿ ರವರನ್ನು ಬಿಟ್ಟರೆ ಬೇರೆ ವಿಷಯಗಳನ್ನು ಯಾರೂ ಗಮನಿಸುವುದಿಲ್ಲ. ಅದಕ್ಕೆ ಕಾರಣವೇನೆಂದರೆ ಮೋದಿ ರವರು ಯಾವುದೇ ದೇಶಗಳಿಗೆ ಭೇಟಿ   ನೀಡಿದರು ಅಲ್ಲಿ ಅವರಿಗೆ ಸಿಗುವ ಗೌರವ ಇದುವರೆಗೂ ಭಾರತದ ಯಾವುದೇ ಪ್ರಧಾನಿ ಗಳಿಗೂ ಆ ದೇಶಗಳು  ಇಷ್ಟು ದೊಡ್ಡ ಮಟ್ಟದ ಗೌರವವನ್ನು ನೀಡಿರುವುದಿಲ್ಲ ಅದಕ್ಕಾಗಿಯೇ ವಿದೇಶಿ ಮಾಧ್ಯಮಗಳಲ್ಲೂ ಸಹ ಮೋದಿಯವರನ್ನು ಬಿಟ್ಟರೆ ಬೇರೆ ಯಾವುದನ್ನು ತೋರಿಸುವುದಿಲ್ಲ ಎಂದರೆ ನೀವು ನಂಬಲೇಬೇಕು.

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ವಿರೋಧ ಪಕ್ಷದವರು ಸುಖಾಸುಮ್ಮನೆ ಯಾವುದೇ ದಾಖಲೆಗಳಿಲ್ಲದೆ ಮೋದಿ ರವರನ್ನು ಜನಸಾಮಾನ್ಯರ ಮುಂದೆ ನಿಂದಿಸಲು ಪ್ರಯತ್ನಿಸುತ್ತಾರೆ. ಆದರೆ ಈ ವರದಿಯನ್ನು ನೋಡಿದರೆ ಇನ್ನು ಮುಂದೆ ಬಹುಶಹ ಯಾವ ವಿರೋಧ ಪಕ್ಷಗಳು ಸಹ ಬೊಬ್ಬೆ ಹೊಡೆಯುವುದಿಲ್ಲ ದಯವಿಟ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ತಲುಪಿಸಿ.

ಮೋದಿ ರವರ ಮತ್ತು ಮನಮೋಹನ್ ಸಿಂಗ್ ರವರ ಸಂಪೂರ್ಣ ವಿದೇಶಿ ಪ್ರವಾಸದ ಡಿಟೇಲ್ಸ್:

ಮೊದಲಿಗೆ ಮನಮೋಹನ್ ಸಿಂಗ್ ರವರ ವಿದೇಶಿ ಪ್ರವಾಸದ ವಿವರ:

ಮನಮೋಹನ್ ಸಿಂಗ್ ರವರು ತಮ್ಮ ಮೊದಲ ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ಒಟ್ಟು 31 ದೇಶಗಳಿಗೆ ಪ್ರವಾಸ ಬೆಳೆಸಿದ್ದಾರೆ. ಪ್ರತಿಯೊಂದಕ್ಕೂ ಚಾರ್ಟೆಡ್ ವಿಮಾನ ಬಳಸಿರುವುದು ಗಮನಿಸಬೇಕಾದ ವಿಷಯ (ಚಾರ್ಟೆಡ್ ವಿಮಾನ ವೆಂದರೆ ಖರ್ಚು ಹೆಚ್ಚಾಗುತ್ತದೆ)131 ದಿನಗಳನ್ನು ವಿದೇಶಗಳಲ್ಲಿ ಕಳೆದಿರುವ ಇವರು ಒಟ್ಟು 386.35 ಕೋಟಿ  ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

ನರೇಂದ್ರ ಮೋದಿ ರವರ ವಿದೇಶಿ ಪ್ರವಾಸದ ವಿವರ:

ತಮ್ಮ ಮೊದಲ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ 36 ದೇಶಗಳಿಗೆ ಪ್ರಯಾಣ ಬಳಸಿದ ಮೋದಿ ರವರು ಖರ್ಚನ್ನು ಕಡಿಮೆ ಮಾಡುವ ಸಲುವಾಗಿ ಐದು ಸಲ ಭಾರತೀಯ ವಾಯುಪಡೆಯ ವಿಮಾನವನ್ನು ಬಳಸಿಕೊಂಡಿದ್ದಾರೆ. ಒಟ್ಟು 155 ದಿನಗಳನ್ನು ವಿದೇಶ ಪ್ರವಾಸದಲ್ಲಿ ಕಳೆದಿರುವ ಇವರು ಒಟ್ಟು 387.24 ಕೋಟಿ  ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

ಹೆಚ್ಚಿನ ಜನಪ್ರಿಯತೆ: ಮೋದಿ ರವರು ಮನಮೋಹನ್ ಸಿಂಗ್ ರವರು ಭೇಟಿ ನೀಡಿದ ರಾಷ್ಟ್ರಗಳನ್ನು ಹೊರತುಪಡಿಸಿ ಬೇರೆ  ಬೇರೆ ದೇಶಗಳಿಗೆ ಭೇಟಿ ನೀಡಿ  ಅಂತರಾಷ್ಟ್ರೀಯ ಸಭೆಗಳಲ್ಲಿ ಪಾಲ್ಗೊಂಡು ಅನಿವಾಸಿ   ಭಾರತೀಯರ ಮತ್ತು ಉದ್ಯಮಿಗಳ ಜತೆ ಸಂವಾದ ನಡೆಸಿ ನವ ಭಾರತದ ಕಾರ್ಯಯೋಜನೆಗಳಿಗೆ ಕೈಜೋಡಿಸುವಂತೆ ಕರೆ ಕೊಟ್ಟಿದ್ದು ಮೋದಿ ರವರ ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ.

ಇಷ್ಟೆಲ್ಲ ವಿವರಗಳನ್ನು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದ್ದು ದಯವಿಟ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ತಲುಪಿಸಿ, ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿರುವವರಿಗೆ ನೀವೇ ತಿಳಿಸಿ.  ಸತ್ಯದ ಅರಿವು ಮೂಡಿಸಿ ಮುಂದಿನ ಚುನಾವಣೆಯಲ್ಲಿ ಯಾರು ಸೂಕ್ತರು ಎಂಬುದನ್ನು ನಿರ್ಧರಿಸಿ.

Post Author: Ravi Yadav