ಮೋದಿ ಅವರಿಗೆ ಬೆಂಬಲ ಘೋಷಿಸಿದ ನಟಿ ಕಂಗನಾ ರಣಾವತ್

ಹೌದು ಈ ಹಿಂದೆಯೂ ಹಲವಾರು ಸೆಲೆಬ್ರಿಟಿಗಳು ಮೋದಿ ರವರ ಪರವಾಗಿ ಮಾತನಾಡಿದ್ದಾರೆ. ಅವರ ಸಾಲಿಗೆ ಈಗ ಮತ್ತೊಬ್ಬ ನಟಿ  ಸೇರ್ಪಡೆಗೊಂಡಿದ್ದಾರೆ.  ಅಷ್ಟಕ್ಕೂ ನಟಿ ಕಂಗನಾ ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಒಮ್ಮೆ ಓದಿ.

ನರೇಂದ್ರ ಮೋದಿ ರವರು ಮತ್ತೊಮ್ಮೆ 2019 ರಲ್ಲಿ ಪ್ರಧಾನಿಯಾಗಬೇಕು, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ನಿಜವಾದ ನಾಯಕನೆಂದರೆ ಅದು ನರೇಂದ್ರ ಮೋದಿಯೇ ಹೊರತು ಬೇರೆ ಯಾರು  ಅಲ್ಲ.  ಪ್ರಧಾನಿಯಾಗಲು  ನರೇಂದ್ರ ಮೋದಿ ರವರು ಒಬ್ಬ ಅರ್ಹ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ತಂದೆಯ ಅಥವಾ ತಾಯಿಯ ಬಲದಿಂದ ಹುದ್ದೆಗೆ ಬಂದವರಲ್ಲ ಬದಲಾಗಿ ಕಠಿಣ ಶ್ರಮ ಮತ್ತು ಸಾಧನೆಯ ಮೂಲಕ  ಜನರ ಮನ ಗೆದ್ದು ಪ್ರಧಾನಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಅಖಂಡ ಭಾರತದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಮೋದಿ ರವರಿಗೆ ಐದು ವರ್ಷ ಸಾಕಾಗದು, ಹಾಗಾಗಿ ಮತ್ತೊಮ್ಮೆ 2019 ರಲ್ಲಿ ಮೋದಿಜಿ ರವರೆ ನಮ್ಮ ಪ್ರಧಾನಿಯಾಗಬೇಕು ಎಂದು ಬಹಿರಂಗವಾಗಿ  ತಮ್ಮ  ಬೆಂಬಲವನ್ನು ಘೋಷಿಸಿದ್ದಾರೆ.

Post Author: Ravi Yadav