ಜಗತ್ತಿನ ದೊಡ್ಡಣ್ಣನಿಗೆ ಖಡಕ್ ವಾರ್ನಿಂಗ್ ನೀಡಿದ ಪುಟ್ಟ ದೇಶ

ಜಗತ್ತಿನ ದೊಡ್ಡಣ್ಣನಿಗೆ ಖಡಕ್ ವಾರ್ನಿಂಗ್ ನೀಡಿದ ಪುಟ್ಟ ದೇಶ

0

ಜಗತ್ತಿನ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೇರಿಕಾಗೆ ಹಲವಾರು ದೇಶಗಳು ತಲೆಬಾಗುತ್ತವೆ. ಯಾಕೆಂದರೆ ಅವರ ಅಗಾದ ಮಿಲಿಟರಿ ಶಕ್ತಿಗೆ  ಎಲ್ಲರೂ ತಲೆಬಾಗಬೇಕಾಗುತ್ತದೆ. ಬೇರೆ ದೇಶಗಳಿಗೆ ಅವರನ್ನು ತಡೆಯುವ ಸಾಮರ್ಥ್ಯ ಇರಬಹುದೇ ವಿನಹ ಅಮೆರಿಕವನ್ನು ಮುಗಿಸಲು ಸಾಧ್ಯವಿಲ್ಲ ಎಂದೇ ಎಲ್ಲರೂ ಮಾತನಾಡುತ್ತಾರೆ.

ಜಗತ್ತಿನ ಅದೇಷ್ಟೋ ರಾಷ್ಟ್ರಗಳು ಅಮೇರಿಕಾದ ಬೆಂಬಲದಿಂದ ಶಾಂತಿಯನ್ನು ತಮ್ಮ ದೇಶದಲ್ಲಿ ನೆಲೆ ಮಾಡಿಕೊಂಡಿವೆ.ಆದರೆ ಒಂದು ಪುಟ್ಟ ರಾಷ್ಟ್ರ ಈಗ ಅಮೆರಿಕಾಗೆ ಸೆಡ್ಡು ಹೊಡೆದಿದೆ.

ಅಷ್ಟಕ್ಕೂ ಯಾವ ರಾಷ್ಟ್ರ? ಏನದು ವಿಷಯ?

ಜಗತ್ತಿನ ಮುಸ್ಲಿಂ ರಾಷ್ಟ್ರಗಳಲ್ಲಿ ಒಂದಾದ ಇರಾನ್ ಅಮೇರಿಕಾದ ಅಧ್ಯಕ್ಷರಿಗೆ ಖಡಕ್ ವಾರ್ನಿಂಗ್ ನೀಡಿದೆ.  ಇತ್ತೀಚೆಗಷ್ಟೇ ಅಮೇರಿಕಾದ ಅಧ್ಯಕ್ಷರಾದ ಟ್ರಂಪ್ ಅವರು ಇರಾನ್ ವಿರುದ್ಧ ದಾಳಿ ಆರಂಭಿಸುವುದಾಗಿ ಬೆದರಿಕೆ ಹಾಕಿದ್ದರು.

ಇದಕ್ಕೆ ಉತ್ತರ ನೀಡಿರುವ ಇರಾನ್ ಒಂದು ವೇಳೆ ಅಮೆರಿಕ ದಾಳಿ ಆರಂಭಿಸಿದಲ್ಲಿ ಅಮೆರಿಕವನ್ನು ಸಂಪೂರ್ಣ ನಾಶ ಮಾಡಲಾಗುವುದು ಎಂದು ಬೆದರಿಕೆ ಹಾಕಿದೆ. ಅಮೆರಿಕ ಸೈನ್ಯದ ಶೇಕಡ 20ರಷ್ಟು ಸೈನ್ಯವನ್ನು ಹೊಂದಿರದ ಇರಾನ್ ಬಹಳ ಧೈರ್ಯ ಮಾಡಿ ನೇರವಾಗಿ ಜಗತ್ತಿನ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕಕ್ಕೆ ಎಚ್ಚರಿಕೆ ನೀಡಿರುವುದು ಭಾರಿ ಸುದ್ದಿಯಾಗಿದೆ.