ಬಸವನಗೌಡ ಪಾಟೀಲ ಅವರ ಮೇಲೆ ದೂರು ದಾಖಲಿಸಿದವರು ಇದಕ್ಕೆ ಉತ್ತರಿಸಿ

ಬಸವನಗೌಡ ಪಾಟೀಲ ಅವರ ಮೇಲೆ ದೂರು ದಾಖಲಿಸಿದವರು ಇದಕ್ಕೆ ಉತ್ತರಿಸಿ

0

ಸೂಚನೆ: ಇಲ್ಲಿ ನಾವು ಯಾವುದೇ ವ್ಯಕ್ತಿಯ ಬೆಂಬಲಿಗರಾಗಿ ಅಥವಾ ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ . ಬದಲಾಗಿ ದೂರು ನೀಡಿರುವ ವ್ಯಕ್ತಿಗಳಿಗೆ ನಾವು ಕೆಲವೊಂದು ಪ್ರಶ್ನೆಗಳನ್ನು ಕೇಳ ಬಯಸುತ್ತೇವೆ.

ಅಷ್ಟಕ್ಕೂ ವಿಷಯದ ಮೂಲವೇನು?

ಬುದ್ಧಿಜೀವಿಗಳನ್ನು ಕುರಿತು ವಿಜಯಪುರ ಬಿಜೆಪಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ರವರು ಒಂದು ವೇಳೆ ನಾನು ಗೃಹ ಸಚಿವನಾಗಿದ್ದರೆ ಬುದ್ಧಿಜೀವಿಗಳನ್ನು ಗುಂಡಿಕ್ಕಿ ಕೊಲ್ಲಿಸುತ್ತಿದ್ದ ಎಂದು ಹೇಳಿಕೆ ನೀಡಿದರು.  ಇದರ ವಿರುದ್ಧವಾಗಿ ಕೆಲವು ಸಂಘಟನೆಗಳು ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದೆ. ಈ ಸಂಘಟನೆಗಳಿಗೆ ನಾವು ಕೆಲವೊಂದು ಪ್ರಶ್ನೆಗಳನ್ನು ಕೇಳ ಬಯಸುತ್ತೇವೆ ದಯವಿಟ್ಟು ಇದಕ್ಕೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.

ನಮ್ಮ ಪ್ರಶ್ನೆಗಳು:

ಇಂದಿನ ಸಚಿವರಾದ ಜಮೀರ್ ಅಹಮದ್ ರವರು  ಚುನಾವಣೆಯ ಮುಂಚೆ ಹಿಂದುಗಳ ಕುರಿತು ಒಂದು ಹೇಳಿಕೆಯನ್ನು ನೀಡಿದ್ದರು,  ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ನಿಜವೇ ಸುಳ್ಳೇ ಎಂಬುದನ್ನು ವಿಚಾರಿಸಿದ್ದೀರಾ? ವಿಚಾರಿಸಿ ದೂರು ದಾಖಲಿಸಿದ್ದೀರಾ?

ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಬಹಿರಂಗ ಸಭೆಯಲ್ಲಿ ಕೊಪ್ಪಳದ ಜನತೆ ನನಗೆ ಮತ ನೀಡಿಲ್ಲ  ಆದ ಕಾರಣ ಅವರು ನನಗೆ ಯಾವುದೇ ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ. ಇಡೀ ಕರ್ನಾಟಕದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಅವರು ಈ ಹೇಳಿಕೆ ನೀಡಿರುವುದು  ಸರಿಯೇ? ಅವರ ವಿರುದ್ಧ ನೀವು ದೂರು ದಾಖಲಿಸಿದ್ದೀರಾ?

ರಾಮನೇ ಇರಲಿಲ್ಲ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ ಅದರ ವಿಚಾರವಾಗಿ ನೀವು ಯಾವುದಾದರೂ ದೂರನ್ನು ದಾಖಲಿಸಿದ್ದರೆ ದಯವಿಟ್ಟು ಮಾಹಿತಿ ಕೊಡಿ.

ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ರವರು ಮಾಂಸ ತಿಂದು ಹೋಗಿದ್ದರು. ಇದು ಹಿಂದೂ ಭಾವನೆಗಳಿಗೆ  ಭಾರಿ ಧಕ್ಕೆಯನ್ನುಂಟು ಮಾಡಿತ್ತು. ಇದರ ವಿರುದ್ಧ ನೀವು ದ್ವನಿ ಎತ್ತಿದ್ದೀರಾ?

ಕ್ಷಮಿಸಿ ಹೀಗೇ ಕೇಳುತ್ತಾ ಹೋದರೆ ಬಹು ದೊಡ್ಡ ಪಟ್ಟಿಯನ್ನೇ ರೆಡಿ ಮಾಡಬಹುದು. ನಾವು ದಾಖಲಿಸಿದ ದೂರುನ್ನು ವಾಪಸು ತೆಗೆದುಕೊಳ್ಳಿ ಎಂದು ಹೇಳುವುದಿಲ್ಲ,  ಬದಲಾಗಿ ಸಂಘಟನೆಗಳು ಒಗ್ಗೂಡಿ ದೇಶವನ್ನು ಮುನ್ನಡೆಸುವ ತಂತ್ರಗಳಿಗೆ ಟೊಂಕಕಟ್ಟಿ ನಿಲ್ಲ ಬೇಕು ಎಂಬುದು ನಮ್ಮ ಧ್ಯೇಯ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಸಮಾನರು ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ ಜೈಹಿಂದ್