ತಂದೆಗೆ ತಕ್ಕ ಮಗ: ಬಿ ಎಸ್ ವೈ ಅಭಿಮಾನಿಗಳಿಗೊಂದು ಭರ್ಜರಿ ಸುದ್ದಿ !

ಹೌದು ಬಿಎಸ್ ವೈ ಅಭಿಮಾನಿಗಳು ಸಂತೋಷದಲ್ಲಿ ತೆಲುವ ಸಮಯ ಬಂದಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರು ಸರ್ಕಾರ ರಚಿಸಲಾಗಿದೆ ಕೆಲವೇ ಕೆಲವು ಗಂಟೆಗಳ ಮುಖ್ಯಮಂತ್ರಿಯಾಗಿದ್ದ ಬಿಎಸ್ವೈ ಬಹಳ ನಿರಾಶೆಯಲ್ಲಿದ್ದರು. ಅವರಷ್ಟೇ ಅವರ ಅಭಿಮಾನಿಗಳು ಸಹ ನಿರಾಶೆಯಲ್ಲಿ ಮುಳುಗಿದ್ದರು.

ಕೇವಲ ಚುನಾವಣೆಯ ಫಲಿತಾಂಶ ವಲ್ಲದೆ ಚುನಾವಣೆಯಲ್ಲಿ ಹೈಕಮಾಂಡ್ ಬಿಎಸ್ವೈ ಪುತ್ರರಾದ ವಿಜಯೇಂದ್ರ ರವರಿಗೆ ಟಿಕೆಟ್ ಕೊಡದೇ ಬಾರಿ ನಿರಾಶೆಯನ್ನು ಅಭಿಮಾನಿಗಳಲ್ಲಿ ಉಂಟುಮಾಡಿತ್ತು. ಯುವ ನಾಯಕರಾದ ವಿಜಯೇಂದ್ರ ರವರ ಅಭಿಮಾನಿ ಬಳಗವಂತೂ ಹೋರಾಟ ನಡೆಸಲು ಸಿದ್ದ ವಿತ್ತಾದರೂ ವಿಜಯೇಂದ್ರ ರವರು ಮತ್ತು ಬಿಎಸ್ ವೈ ರವರು ಪಕ್ಷ ಗೋಸ್ಕರ ಅಭಿಮಾನಿಗಳನ್ನು ಸಮಾಧಾನ ಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಈಗ ಬಿಜೆಪಿ ಹೈಕಮಾಂಡ್ ಅಭಿಮಾನಿಗಳಿಗೊಂದು ಸಂತಸದ ನೀಡಲಿದೆ ಎಂಬುದು ಉನ್ನತ ಮಾಹಿತಿಗಳಿಂದ ತಿಳಿದು ಬಂದಿದೆ. ಅಷ್ಟಕ್ಕೂ ಏನದು ಸಂತಸದ ವಿಷಯ?

ಉನ್ನತ ಮಾಹಿತಿಗಳ ಪ್ರಕಾರ ವಿಜಯೇಂದ್ರ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಭರ್ಜರಿ ತಯಾರಿ ನಡೆಸಿಕೊಂಡಿರುವ ವಿಜಯೇಂದ್ರ ರವರು ರಾಜ್ಯ ಪ್ರವಾಸಕ್ಕೂ ಮುಂದಾಗಿದ್ದಾರೆ. ಕೇವಲ ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪಣ ತೊಟ್ಟಿ ನಿಂತಿದ್ದಾರೆ.

ಬಿ ಎಸ್ ವೈ ರವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ರೀತಿಯಲ್ಲೇ ಈ ದಿನ ವಿಜಯೇಂದ್ರ ರವರು ಮುಂದುವರೆಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ದಿಂದ ವಿಜಯೇಂದ್ರ ರವರು ಕಣಕ್ಕಿಳಿಯಲಿದ್ದಾರೆ. ವಿಜಯೇಂದ್ರ ರವರು ಮೊದಲ ಬಾರಿ ಸ್ಪರ್ಧಿಸುತ್ತಿರುವುದರಿಂದ ಕೆಲವರಲ್ಲಿ ಗೊಂದಲ ಮೂಡುವುದು ಸಹಜ ಆದರೆ ಇವರ ಜನಬೆಂಬಲವನ್ನು ನೋಡಿದರೆ ಬಹಳ ಸುಲಭವಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಾರೆ ಎಂದೆನಿಸುತ್ತಿದೆ.

Post Author: Ravi Yadav