ಬಿಜೆಪಿ ಸಂಸದರಿಗೆ ಡಿವೋರ್ಸ್ ಭಯ: ರಾಹುಲ್ ಗಾಂಧಿ ಹವಾ

ರಾಹುಲ್ ಗಾಂಧಿ ರವರು ನಿನ್ನೆಯಷ್ಟೇ ಬಿಜೆಪಿ ಮುಖಂಡರು ನನ್ನನ್ನು ನೋಡಿದರೆ ಭಯ ಬೀಳುತ್ತಾರೆ, ನನ್ನ ನೋಡಿ ಎರಡು ಹೆಜ್ಜೆ ಹಿಂದೆ ಇಡುತ್ತಾರೆ  ಎಂದು ಬಿಜೆಪಿ ಸಂಸದರ ಕಾಲೆಳೆಯಲು  ಪ್ರಯತ್ನಿಸಿದರು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ರವರು ಮೋದಿ ರವನ್ನು ಅಪ್ಪಿಕೊಂಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ನಿಶಿಕಾಂತ್ ದುಬೆ, ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿ ನಾಯಕರನ್ನು ಅಪ್ಪಿಕೊಂಡರೆ ನಮ್ಮ ಪತ್ನಿಯರು ನಮಗೆ ಡಿವೋರ್ಸ್ ನೀಡುತ್ತಾರೆ ಎಂದು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.

ಬೇಕಿದ್ದರೆ ರಾಹುಲ್ ರವರು ಮದುವೆಯಾಗಲಿ ಆ ನಂತರ ನಮ್ಮನ್ನು ಒಪ್ಪಿಕೊಳ್ಳಲಿ ಎಂದು ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ.

ಒಟ್ಟಿನಲ್ಲಿ ರಾಹುಲ್ ಗಾಂಧಿ ರವರು ಮೋದಿ ಅವರನ್ನು ತಬ್ಬಿಕೊಂಡು ಕಣ್ಣು ಹೊಡೆದ ಮೇಲೆ ಅವರ ಪಾಪ್ಯುಲಾರಿಟಿ ಹೆಚ್ಚಾಗಿರುವುದಂತೂ ಸುಳ್ಳಲ್ಲ.

Post Author: Ravi Yadav