ಗರ್ಭಿಣಿ ಮಹಿಳೆಯ ಸಹಾಯ ಮಾಡಿದ್ದಕ್ಕೆ ಈ ಪೋಲಿಸ್ ಗೆ ಯಾವ ರೀತಿ ಉಡುಗೊರೆ ಸಿಗುತ್ತಿದೆ ನೋಡಿ.

ತಮಿಳುನಾಡು ಪೋಲಿಸ್ ಇಲಾಖೆ ತಮ್ಮ ಇಬ್ಬರು ಪೋಲಿಸ್ ಕಾನ್ ಸ್ಟೇಬಲ್ ಧನಸೇಕರನ್ ಹಾಗೂ ಮಣಿಕಂದನ್ ಅವರನ್ನು ಸನ್ಮಾನಿಸಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಒಬ್ಬ ಗರ್ಭಿಣಿ ಮಹಿಳೆಯ ಸಹಾಯ ಮಾಡಿದ್ದಕ್ಕಾಗಿ ಈ ಸನ್ಮಾನ ಮಾಡಲಾಗಿದೆ.

ರೈಲಿನ ಸಿಗ್ನಲ್ ಸಿಸ್ಟಮ್ ಇದ್ದಕ್ಕಿದ್ದಂತೆ ಹಾಳಾದ ಕಾರಣ ರೈಲು ನಿಲ್ದಾಣಕ್ಕೆ ಬರುವ ಮುಂಚೆಯೆ ನಿಂತು ಬಿಟ್ಟಿತ್ತು. ಗರ್ಭಿಣಿ ಮಹಿಳೆಗೆ ಅಲ್ಲಿಯೇ ಹತ್ತಿರದ ಆಸ್ಪತ್ರೆಗೆ ಹೋಗಬೇಕಾಗಿತ್ತು. ಪ್ಲಾಟ್ ಫಾರಂ ಇಲ್ಲದೆ ಇದ್ದರಿಂದ ಕೆಳಗೆ ಇಳಿಯಲು ಕಷ್ಟವಾಗಿತ್ತು.

ರೈಲು ತುಂಬಾ ಹೊತ್ತು ಅಲ್ಲೇ ನಿಂತಿದ್ದರಿಂದ ರೈಲಿನ ಸಹಪ್ರಯಾಣಿಕರು ಪೋಲಿಸ್ ಕಂಟ್ರೋಲ್‌ ರೂಮ್ ಗೆ ಕರೆ ಮಾಡಿದರು. ಅಲ್ಲಿಂದ ಎರಡು ಕಾನ್ಸ್‌ಟೇಬಲ್ ಬಂದು ಮಹಿಳೆಯನ್ನು ಕೆಳಹಿಳಿಸಲು ಮೆಟ್ಟಿಲುಗಳ ಹಾಗೆ ತಮ್ಮನ್ನು ತಾವೇ ಮಾಡಿಕೊಂಡು ಮಹಿಳೆಯನ್ನು ಕೆಳಗಿಳಿಸುವಲ್ಲಿ ಸಫಲರಾದರು. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಎಲ್ಲರ ಪ್ರಶಂಸೆ ಗಿಟ್ಟಿಸಿತು. ಇವರಿಗೆ ಪೋಲಿಸ್ ಇಲಾಖೆ ಇಂದ ಸನ್ಮಾನ ಕೂಡಾ ಮಾಡಲಾಯಿತು.

Post Author: Ravi Yadav