ಬಿಗ್ ಬ್ರೇಕಿಂಗ್: ಹಗರಣವೋ, ಉಳಿತಾಯವೋ?: ರಫೆಲ್ ಸತ್ಯಾಂಶ ಬಯಲು

ಬಿಗ್ ಬ್ರೇಕಿಂಗ್: ಹಗರಣವೋ, ಉಳಿತಾಯವೋ?: ರಫೆಲ್ ಸತ್ಯಾಂಶ ಬಯಲು

0

ಈ ಬಾರಿಯ ಸಂಸತ್ ಕಲಾಪದಲ್ಲಿ ಭಾರಿ ಸುದ್ದಿ ಮಾಡಿತು ರಫೆಲ್ ಯುದ್ಧ ವಿಮಾನ ದ ಖರೀದಿಯ ವಿಷಯ, ಫ್ರಾನ್ಸ್ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ರಫೆಲ್ ಯುದ್ಧ ವಿಮಾನ ಗಳನ್ನು ಕುರಿತು ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿತು. ಫ್ರಾನ್ಸ್ನಿಂದ ರಫೆಲ್ ಯುದ್ಧ ವಿಮಾನದ  ಖರೀದಿ ಒಪ್ಪಂದ ನಡೆದಿದ್ದು ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಾದರೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವ್ಯವಹಾರದಲ್ಲಿ ಭ್ರಷ್ಟಾಚಾರವನ್ನು ನಡೆಸಿದೆ ಎಂದು ರಾಹುಲ್ ಗಾಂಧಿ ರವರು ಮೋದಿ ರವರನ್ನು ದೂಷಿಸಿದ್ದರು.

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಈ ವ್ಯವಹಾರದ ಒಪ್ಪಂದದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಬದಲಾವಣೆಗಳನ್ನು ನೋಡಿದರೆ ನೀವು ಮೋದಿ ರವರ ರಾಜ ತಾಂತ್ರಿಕತೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಅಷ್ಟಕ್ಕೂ ಯು ಪಿ ಇ ಅವಧಿಯ ನಂತರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಆದ ಲಾಭ ಗಳಾದರೂ ಏನು? ಎಂಬುದನ್ನು ತಿಳಿಯಲು ಸಂಪೂರ್ಣ ಕೆಳಗಡೆ ಓದಿ

ರಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದದ ಸರ್ಕಾರಿ ಕಡತಗಳು ಹೊರಬಿದ್ದಿದ್ದು, ರಫೆಲ್ ಒಪ್ಪಂದದಲ್ಲಿ ಯಾವುದೇ ಹಗರಣಗಳಿಲ್ಲ ಬದಲಾಗಿ ಭಾರತಕ್ಕೆ ಲಾಭವಾಗುವಂತಹ ಒಪ್ಪಂದಗಳನ್ನು ಮೋದಿ ಅವರು ಇತ್ತೀಚೆಗೆ ಮಾಡಿದ್ದಾರೆ ಎಂಬುದು ತಿಳಿದು ಬರುತ್ತದೆ.

ಪ್ರಧಾನಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಪ್ಪಂದದಲ್ಲಿ ಬದಲಾವಣೆಗಳನ್ನು ತಂದಿದ್ದು ಪ್ರತಿ ರಫೆಲ್ ಯುದ್ಧ ವಿಮಾನದ ಖರೀದಿಯಲ್ಲಿ ಬರೋಬರಿ 59 ಕೋಟಿ ರೂಪಾಯಿ ಉಳಿತಾಯವಾಗಿದೆ. ಅಂದರೆ ಯುಪಿಎ ಸರ್ಕಾರ ನಿರ್ಧರಿಸಿದ್ದ ಕ್ಕಿಂತ 59 ಕೋಟಿ ಕಡಿಮೆ ರೂಪಾಯಿಗಳಲ್ಲಿ ನಮಗೆ ಪ್ರತಿ ರಫೆಲ್ ಯುದ್ಧ ವಿಮಾನ ಗಳನ್ನು ನೀಡಲು ಫ್ರಾನ್ಸ್ ಸರ್ಕಾರ ಒಪ್ಪಿಗೆ ನೀಡಿದೆ.

ಈ ಕುರಿತು ರಕ್ಷಣಾ ಇಲಾಖೆ ಮತ್ತು ಭಾರತೀಯ ವಾಯುಪಡೆ ತಯಾರಿಸಿರುವ ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದ್ದು, ವಿಮಾನ ಖರೀದಿ ಬಳಿಕ ಅದರ ನಿರ್ವಹಣೆ ಮೇಲಿನ ವೆಚ್ಚದಲ್ಲೂ ಕಡಿಮೆ ಮಾಡಲು ಫ್ರಾನ್ಸ್ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ದೇಶದ ರಕ್ಷಣೆಗಾಗಿ ರಫೆಲ್ ಯುದ್ಧ ವಿಮಾನದ ಅವಶ್ಯಕತೆ ಇದೆಯಾದರೂ, ಅದನ್ನು ಆದಷ್ಟು ಕಡಿಮೆ ವೆಚ್ಚದಲ್ಲಿ ತನ್ನದಾಗಿಸಿಕೊಳ್ಳಲು ಮೋದಿ ಸರ್ಕಾರ ಯಶಸ್ವಿ ಒಪ್ಪಂದ ಮಾಡಿಕೊಂಡಿದೆ ಎಂಬುದು ಈ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.

ಈ ವರದಿ ಹೊರ ಬಂದಿದ್ದರಿಂದ ವಿರೋಧ ಪಕ್ಷಗಳಿಗೆ ಭಾರಿ ಮುಖಭಂಗ ಉಂಟಾಗಿದ್ದು ಆಧಾರವಿಲ್ಲದೆ ಇನ್ನು ಮುಂದೆ ಯಾವುದೇ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಲಿದೆ ಎಂದು ಪ್ರಜೆಗಳು ಪ್ರತಿಕ್ರಿಯಿಸುತ್ತಿದ್ದಾರೆ.