ಅಬುಧಾಬಿಯಲ್ಲಿ ಹಿಂದೂ ದೇಗುಲ: ಮೋದಿ ರಾಜ ತಾಂತ್ರಿಕತೆಗೆ ಮತ್ತೊಂದು ಫಲ

ಮೋದಿ ರವರು 2014ರಲ್ಲಿ ಗದ್ದುಗೆ ಏರಿದ ಮೇಲೆ ಹಲವಾರು ದೇಶಗಳು ಭಾರತದ ಜೊತೆ ಸಂಬಂಧವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಅದೇ ರೀತಿ ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಯು ಎ ಇ, ಭಾರತದ ಜತೆ ಸ್ನೇಹ ಸಂಬಂಧವನ್ನು ವೃದ್ಧಿಸಿಕೊಳ್ಳಲು ಒಂದಲ್ಲಾ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಿತ್ತು. ಅದೇ ವಿಚಾರವಾಗಿ ಭಾರತದ ಗಣತಂತ್ರ ದಿವಸಕ್ಕೆ ಬಂದಿದ್ದರು ಅರಬ್ ಸಂಯುಕ್ತ ರಾಷ್ಟ್ರಗಳ ಅಧ್ಯಕ್ಷ.

ಮೋದಿ ರವರನ್ನು ಸಹ 2015 ರಲ್ಲಿ ಆಹ್ವಾನಿಸಿದ್ದ ಅರಬ್ ಸಂಯುಕ್ತ ರಾಷ್ಟ್ರದ ಅಧ್ಯಕ್ಷರು ರಾ ರಾಜಧಾನಿ ಅಬುದಾಬಿಯಲ್ಲಿ ಹಿಂದೂ ದೇವಾಲಯ ಒಂದನ್ನು ನಿರ್ಮಾಣ ಮಾಡುತ್ತೇವೆ ಎಂದು ಮೋದಿ ರವರಿಗೆ ಭರವಸೆ ನೀಡಿದ್ದರು.

ಕೊಟ್ಟ ಮಾತಿನಂತೆ ಅಬುದಾಭಿ ಮತ್ತು ದುಬೈ ಹೆದ್ದಾರಿಯ ಬಳಿ ಬರೋಬ್ಬರಿ 14 ಎಕರೆ ಪ್ರದೇಶದಲ್ಲಿ 7 ಅಂತಸ್ತಿನ ದೇವಾಲಯವನ್ನು ತಲೆ ಎತ್ತಲಿದೆ. ಇದರ ಕಲ್ಲುಗಳನ್ನು ಭಾರತದ ಕಲಾವಿದರು ಕೆತ್ತಲಿ ದ್ದು ಬಳಿಕ ಅಬುದಾಬಿಗೆ ಕೊಂಡೊಯ್ದು ಜೋಡಿಸಲಾಗುತ್ತದೆ.

ಇದರ ನಿರ್ಮಾಣಕ್ಕೆ ಇನ್ನು ಎರಡು ವರ್ಷ ಸಮಯ ಬೇಕಾಗಿದ್ದು, ಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಗೆ ಸ್ಥಳೀಯ ಆಡಳಿತ ಅನುಮತಿ ನೀಡುವುದ ರೊಂದಿಗೆ, ನಿರ್ಮಾಣ ಕಾರ್ಯಕ್ಕೆ ಅಂತಿಮ ಅನುಮೋದನೆ ಸಿಕ್ಕಂತಾಗಿದೆ.ಇದರಿಂದ ಭಾರತ ಮತ್ತು ಅಬುದಾಬಿಯ ಸಂಬಂಧಗಳು ಮತ್ತಷ್ಟು ವೃದ್ಧಿಗೊಳ್ಳಲಿದೆ.

Post Author: Ravi Yadav