ಮೋದಿಯವರ ಬಹುದೊಡ್ಡ ರಾಜತಾಂತ್ರಿಕ ಜಯ. ಭಾರತದ ಹೆಲಿಕಾಪ್ಟರ್ ತಮ್ಮಲ್ಲಿ ಇರಿಸಿಕೊಳ್ಳಲು ಒಪ್ಪಿಕೊಂಡ ಮಾಲ್ಡೀವ್ಸ್.

ಮೋದಿಯವರ ಬಹುದೊಡ್ಡ ರಾಜತಾಂತ್ರಿಕ ಜಯ. ಭಾರತದ ಹೆಲಿಕಾಪ್ಟರ್ ತಮ್ಮಲ್ಲಿ ಇರಿಸಿಕೊಳ್ಳಲು ಒಪ್ಪಿಕೊಂಡ ಮಾಲ್ಡೀವ್ಸ್.

0

ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರದ ಬಹುದೊಡ್ಡ ರಾಜತಾಂತ್ರಿಕ ಜಯ. ಮಾಲ್ಡೀವ್ಸ್ ಅಲ್ಲಿ ಭಾರತದ ೨ ಹೆಲಿಕಾಪ್ಟರ್ ಹಾಗೂ ೪೮ ಸದಸ್ಯ ಸೈನಿಕರ ದಳವನ್ನು ಡಿಸೆಂಬರ್ ತನಕ ತಮ್ಮಲ್ಲಿ ಇರಿಸಿಕೊಳ್ಳಲು ಒಪ್ಪಿಕೊಂಡಿದೆ. ಕಳೆದ ತಿಂಗಳು ಮಾಲ್ಡೀವ್ಸ್ ಭಾರತದ ಎರಡು ಹೆಲಿಕಾಪ್ಟರ್ ಅನ್ನು ವಾಪಸು ಕರೆಸಿಕೊಳ್ಳುವಂತೆ ಹೇಳಿತ್ತು ಹಾಗೂ ಬಹಳ ಒತ್ತಡ ಕೂಡಾ ಇತ್ತು. ಇದರಿಂದ ಭಾರತ ತನ್ನ ನೌಕಾದಳವನ್ನು ಹೆಲಿಕಾಪ್ಟರ್ ವಾಪಸು ತರಲು ಕಳುಹಿಸಿತ್ತು. ಆದರೆ ಇಂದು ಮೋದಿಯವರ ರಾಜತಾಂತ್ರಿಕ ಜಯದಿಂದ ಹೆಲಿಕಾಪ್ಟರ್ ರವಾನೆ ನಿಲ್ಲಿಸಲಾಗಿದೆ.

ಭಾರತದ ಎರಡು ಎ ಎ ಎಲ್ ಎಚ್ ಹೆಲಿಕಾಪ್ಟರ್ ಹಾಗೂ ಇಂಡಿಯನ್ ಏರೋನಾಟಿಕ್ಸ್ ಒಳಗೊಂಡಿರುವ ೫೦ ಸದಸ್ಯರ ದಳವನ್ನು ಕೂಡಾ ಅಲ್ಲಿಯೇ ಇರಿಸಲಾಗಿದೆ. ಇದರೊಂದಿಗೆ ಅವರ ವೀಸಾದ ಅವಧಿಯನ್ನು ಕೂಡಾ ವಿಸ್ತರಿಸುವಂತೆ ಅಲ್ಲಿನ ಸರಕಾರ ನಿರ್ದೇಶನ ನೀಡಿದೆ.

ಭಾರತದ ಹೆಲಿಕಾಪ್ಟರ್ ವಾಪಸ್ಸು ಕಳುಹಿಸಲು ನಿರ್ದೇಶಿಸಿದ್ದು ಬಹುದೊಡ್ಡ ಹೊಡೆತವೆಂದೆ ಹೇಳಬಹುದು. ಯಾಕೆಂದರೆ ಕಳೆದ ಹಲವು ವರ್ಷ ಮಾಲ್ಡೀವ್ಸ್ ಚೀನಾದ ಹಿಡಿತದಲ್ಲಿತ್ತು. ನಂತರ ಹೊರಗೆ ಬಂದರೂ ಅಲ್ಲಿ ಚೀನಾದ ಪ್ರಭಾವ ಇಂದೂ ಕೂಡಾ ಹೆಚ್ಚುತ್ತಿದೆ.

ಮಾಲ್ಡೀವ್ಸ್ ತನ್ನ ಪೋಸ್ಟ್ ಗಾರ್ಡ್ ನ ಯುದ್ದ ನೌಕೆಯ ದುರಸ್ತಿಗಾಗಿ ಭಾರತದ ವಿಶಾಕ ಪಟ್ಟಣ ಕ್ಕೆ ಕರೆತರಲಾಗಿದೆ. ಇದರ ಖರ್ಚು ಸುಮಾರು ಹತ್ತು ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದನ್ನು ಭಾರತ ಉಚಿತವಾಗಿ ಮಾಡಿಕೊಡಲಾಗುತ್ತದೆ ಎಂದು ಭಾರತ ಹೇಳಿದೆ. ಅದರ ಬದಲಿಗೆ ಭಾರತದ ಹೆಲಿಕಾಪ್ಟರ್ ಮಾಲ್ಡೀವ್ಸ್ ಅಲ್ಲಿ ನೆಲೆಯಾಗಿರಲಿದೆ.