ಕಾಂಗ್ರೆಸ್ ನಾಯಕ: ಶೀಘ್ರದಲ್ಲೇ ಮೈತ್ರಿ ಸರ್ಕಾರ ಪತನ – ಕಾರಣವೇನು ಗೊತ್ತೆ?

ಕಾಂಗ್ರೆಸ್ ನಾಯಕ: ಶೀಘ್ರದಲ್ಲೇ ಮೈತ್ರಿ ಸರ್ಕಾರ ಪತನ – ಕಾರಣವೇನು ಗೊತ್ತೆ? ಸಂಪೂರ್ಣ ತಿಳಿಯಲು ಕೆಳಗಡೆ ಓದಿ

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ತೊಡಕುಗಳು ಮೈತ್ರಿ ಸರ್ಕಾರಕ್ಕೆ ಎದುರಾಗುತ್ತಿವೆ.ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ವಿರೋಧ ಪಕ್ಷಗಳು ಅಪವಿತ್ರ ಮೈತ್ರಿ ಎಂದು ಬಿಂಬಿಸುತ್ತಿದ್ದರೆ ಇತ್ತ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಮೈತ್ರಿ ಸರ್ಕಾರದ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ..ಈಗ ಅದೇ ಸಾಲಿಗೆ ಮತ್ತೊಬ್ಬ ಕಾಂಗ್ರೆಸ್ ಅಧ್ಯಕ್ಷರು ಸೇರಿಕೊಂಡಿದ್ದಾರೆ.

ಅಷ್ಟಕ್ಕೂ ಯಾರು ಏನು ಹೇಳಿದ್ದಾರೆ?

ಮೈತ್ರಿ ಸರ್ಕಾರದ ಕಾರ್ಯವೈಖರಿ ನೋಡಿದರೆ ಇದಕ್ಕೆ ಆಯುಷ್ಯ ಕಡಿಮೆ ಎನಿಸುತ್ತಿದೆ, ಇನ್ನೂ ಯಾವುದೇ ಕಾರಣಗಳಿಲ್ಲದೇ ಸಚಿವ ರೇವಣ್ಣ ರವರು ತಮ್ಮದಲ್ಲದ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ , ಮತ್ತು ಮುಖ್ಯಮಂತ್ರಿಗಳಾದ ಎಚ್ ಡಿ ಕೆ ಹೆಣ್ಣು ಮಕ್ಕಳಂತೆ ಹೇಳುತ್ತಿದ್ದಾರೆ ಈ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಕೆ ಎನ್ ರಾಜಣ್ಣ ರವರು ಭವಿಷ್ಯನುಡಿದಿದ್ದಾರೆ.

ರಾಜ್ಯವನ್ನು ಆಳುವವರು ಅಳುತ್ತಾ ಜನತೆಗೆ ಅಪಮಾನ ಮಾಡುತ್ತಿದ್ದಾರೆ, ಮುಖ್ಯಮಂತ್ರಿಗಳ ಈ ನಡೆಯಿಂದ ಕಾಂಗ್ರೆಸ್ ಪಕ್ಷದ ಇಮೇಜ್ಗೆ ಧಕ್ಕೆ ಆಗಿದೆ. ಚುನಾವಣೆ ವೇಳೆ ಮತಕ್ಕಾಗಿ ಅಳುವುದನ್ನು ನೋಡಿದ್ದೇವೆ ಆದರೆ ಕುಮಾರ ಸ್ವಾಮಿಯ ರವರು ಈಗ ಅಳುವುದು ಸರಿಯಲ್ಲ ಎಂದು ಹೇಳಿದ್ದಾರೆ

Post Author: Ravi Yadav